ಮದುವೆ, ಮದುವೆ…Overdose!!!

357928512_eace4b24c01.jpgಐಶ್ವರ್ಯ ಹಾಗು ಅಭಿಷೇಕ್  ಮದುವೆ ಅಂತೆ, ವಾಲಗದವರಿಗೆ ಇಷ್ಟ್ತುಕೊಟ್ಟಿದಾರಂತೆ, ಹೂವಿಗೆ ಇಷ್ಟ್ತು ಖರ್ಚು ಆಯ್ತಂತೆ, ಸೀರೆ ಅಲ್ಲಿ ತೊಗೊಂಡರಂತೆ, ಅವಳು ವಜ್ರದ ಒಡವೆ ಹಾಕುತ್ತಾಳಂತೆ. ಅಭಿಷೇಕ್,ಶೇವಿಂಗ್, ಮಾಡುತ್ತಾನ?  ಆಮಂತ್ರಣ ಪತ್ರಿಕೆ, ೧೫ ಪುಟಾನ ಅಥವಾ ೧೬ ಪುಟಾನ? ಅಮರ್  ಸಿಂಗ್, ಯಾವ ಡ್ರೆಸ್, ಹಾಕುತ್ತಾನೆ?  ಮುಲಾಯಂ ಧಾರೆ ಗೆ ಬರುತ್ತಾನ ಅಥವಾ ವರಪೂಜೆಗ?  ಯಾರನ್ನ ಕರೆದಿದಾರೆ ಯಾರುನ್ನ ಕರೆದಿಲ್ಲಾ?

ಆಯ್ಯಯ್ಯೊ, ಹತ್ತು ದಿವಸಗಳಿಂದ ಈ ಮೀಡಿಯಾದವರು ಇದೇ ವಿಚಾರ ಚರ್ಚೆ ಮಾಡಿ ಮಾಡಿ ತಲೆ ಕೆರೆದುಕೊಳ್ಳೊ ಹಾಗೆ ಮಾಡಿದಾರಲ್ರಿ..

ಇವರಿಗೆನು ಬೇರೆ ವಿಚಾರ ಹೊಳಿತಿಲ್ಲವಾ? ಪ್ರಪಂಚದಲ್ಲಿ ಎಲ್ಲೂ ಆಗದೇರದು ಏನಾದ್ರು ಆಗುತ್ತಾ ಇದೆಯ? ಅಥವಾ All are equal but some are more equal ತರನಾ?

ಇನ್ನೊಂದು ವಿಷಯ ಗೊತ್ತಾ? ಈಗಾಗಲೆ ಈ star couple ಅನೇಕ products ಗಳನ್ನ endorse ಮಾಡಲಿ ಅಂತ ಸಾಕಷ್ಟ್ತು, Ad.Agency ನವರೆಲ್ಲಾ ಮದುವೆ ಆಗೊದೆ ಕಾಯುತ್ತ ಇದಾರಂತೆ. ” ಜನ ಮರುಳೊ, ಜಾತ್ರೆ ಮರುಳೊ..” ಅಂತಾರಲ್ಲ ಹಾಗೆ. ನೀವೇನಂತೀರಾ?