“Hi this is Nancy……

Come on.. speed up last 3 hours and another 100 ಅಂತ ಒಂದೇ ಸಮನೆ ಕೂಗುತ್ತಾ ಇದ್ದ Team lead. ಸಣ್ಣಗೆ ಒಂದೇ ಕಡೆ ನೋಯುತ್ತಿರುವ ತಲೆನೋವನ್ನು ಲೆಕ್ಕಿಸದೆ, ಮತ್ತೆ Phone ಎತ್ತಿಕೊಂಡು ” Hi this is Nancy calling from `Mega buck` can i talk to you for few minutes on our new Travellers card?” ಎಂದು ಪ್ರಾರಂಭಿಸಿದಳು. ಗೋಡೆಯ ಮೇಲಿನ ಒಂದು ಗಡಿಯಾರ ಅಮೇರಿಕಾದಲ್ಲಿ ಮಧ್ಯನ್ಹಾ 3 ಗಂಟೆ ಎಂದು ತೋರಿಸುತಿದ್ದರೆ, ಮತ್ತೊಂದು ಗಡಿಯಾರ ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆ ಎಂದು ಸೂಚಿಸುತಿತ್ತು. ಒಂದೇ ಸಮನೆ ಕೂಗಿ ಕೂಗಿ ಸುಸ್ತಾದ team lead ಸಹ, ಐದು ನಿಮಿಷ ಮಲ್ಗೋಣ ಅಂತ toilet ಗೆ ಹೋಗಿ ಬಾಗಿಲು ಹಾಕಿಕೊಂಡ.

6ಗಂಟೆ ಆಗುವುದನ್ನೇ ಕಾಯುತ್ತಿದ್ದ team ತಮ್ಮ ತಮ್ಮ system ನ log off ಮಾಡಿ ಹೊರಗೆ ಕಾಯುತ್ತಿರುವ cab ಗಳ ಹತ್ತಿರ ನಡೆಯಿತು.

8ಗಂಟೆ ಗಳ shift ನಲ್ಲಿ 10 product sale  ಮಾಡದೆ ಕಷ್ಟ್ಟ ಅಂತದ್ರಲ್ಲಿ ದರಿದ್ರದವರು target ನ 15 ಕ್ಕೆ ಏರಿಸಿದ್ದಾರೆ, ಇನ್ನು weekly review ನಲ್ಲಿ ಸರಿಯಾಗಿ perform  ಮಾಡಿಲ್ಲ ಅಂತ ಬೇರೆ, ಮಾತು ಕೇಳಬೇಕು, ಎಂದು ಗೊಣಗುತ್ತಾ cab ಬಳಿ ನಡೆಯುತಿದ್ರೆ, “ಏಯ್ ಶರ್ಮಿ… “ಎಂಬ ಧ್ವನಿಗೆ ತನ್ನ `ನ್ಯಾನ್ಸಿ` ಎಂಬ ಪ್ರಪಂಚದಿಂದ ಆಚೆಗೆ ಬಂದಳು ಶರ್ಮಿಳ ಅಲಿಯಾಸ್ ನ್ಯಾನ್ಸಿ. ಕೂಗಿದ್ದವಳು ಅವಳ ಗೆಳತಿ ಸುಮ ಅಲಿಯಾಸ್ ವಿನ್ಸಿ.

ಅಯ್ಯೋ ನಂದು ಬರೇ 8 ಆಯ್ತು, target reach ಅಗದೆದ್ರೆ ಕಷ್ಟ್ಟ, ಈ ಸಾರಿ appraisal ಏನಾಗುತ್ತೋ? ಎಂಬಷ್ಟ್ಟೇ ಮಾತುಗಳು cab ನ ತುಂಬೆಲ್ಲಾ ತುಂಬಿತ್ತು.

                                    ****************************************

ಎರಡನೆ ವರ್ಷದ BA English major ಓದುತಿದ್ದ, ಶರ್ಮಿಳಾ ಗೆ ಅವತ್ತು ರಾತ್ರಿ, ತನ್ನ ಅಪ್ಪ ಸತ್ತು ಹೋದ ಹಾಗೆ , ತಾನು ಅಪ್ಪನ ದೇಹದ ಎದುರು ಜೋರಾಗಿ ಅಳುತಿದ್ದ ಹಾಗೆ ಕನಸು ಬಿದ್ದಿತ್ತು. ಗಾಬರಿಯಿಂದ ಮೈ ಎಲ್ಲಾ ಬೆವರಿ ಧಡಾರನೆ ಎದ್ದು ಕುಳಿತಿದ್ದಳು. ಕಾಲೇಜಿನಲ್ಲಿ ಅವಳ favourite lecturer ಶಾಲಿನಿ ಮುಂದೆ ಈ ವಿಷಯ ಹೇಳಿದಾಗ, ಅಯ್ಯೋ ಮಂಕೆ ಅದಕ್ಕೆಲ್ಲ ಹೆದ್ರುಕೊಬೇಡ, ನಿನ್ನ ಕನಸಿನಿಂದ ನಿಮ್ಮಪ್ಪನಿಗೆ ಏನು ಆಗಲ್ಲ. Financial ಆಗಿ emotional ಆಗಿ ತಂದೆ ತಾಯಿಗಳ ಮೇಲೆ depend ಆಗಿರುವಂತಹ ವಯಸ್ಸಿನಲ್ಲಿ ಎಲ್ಲಾ ಮಕ್ಕಳಿಗೂ ಸಹಜವಾಗಿ ಬರೋ ಕನಸು ಇದು. ಮನೆಗೆ ಅಪ್ಪ,sole bread winner ಅವನಿಲ್ಲದಿದ್ರೆ, ನನ್ನ ಮತ್ತು ಅಮ್ಮನ ಗತಿ ಏನು ಅಂತ ನಿನ್ನ ಮನಸಿನಲ್ಲಿದ್ದ ಅವ್ಯಕ್ತ ಭಯ ಈ ರೀತಿ ಬಂದಿದೆ ಅಷ್ಟ್ಟೆ ಅಂತ ಅಂದಿದ್ದರು.

ಕಾಕತಾಳಿಯವೋ ಎಂಬಂತೆ ಇದಾದ ಒಂದು ತಿಂಗಳ ನಂತರ ಪುರೋಹಿತ ವ್ರತ್ತಿಯಿಂದ ತಮ್ಮ ಸಂಸಾರ ರಥವನ್ನು ನಡೆಸುತಿದ್ದ ಅವಳ ಅಪ್ಪ , ಹಠಾತ್ತನೆ ಬಂದೆರಗಿದ heart attack ನಿಂದ ಇಹ ಲೋಕದ ವ್ಯಾಪರವನ್ನು ಮುಗಿಸಿದ್ದರು. ಮುಂದೆ ಯಾವ ದಾರಿ ಇರಲಿಲ್ಲ, ಜೀವನ ಸಾಗ ಬೇಕಿತ್ತು, ಎದುರಿಗೆ ಇದ್ದ ಒಂದೇ ದಾರಿ ಅಂದ್ರೆ,  ಓದಿಗೆ ತಿಲಾಂಜಲಿ, ಹಾಗು ಕಾಲ್ ಸೆಂಟರ್ ಕೆಲಸ.

                  ***************************************************

ಮತ್ತೊಂದು ರಾತ್ರಿ, ಅಲ್ಲ ಅವಳ ಪಾಲಿಗೆ ದಿನದ ಕೆಲಸ ಶುರುವಾಗಿತ್ತು. ತನ್ನ ಕೆಲಸದ ಮಧ್ಯೆ, phone ಮಾಡಿ distrurb ಮಾಡಿದ್ದಕ್ಕೆ ಬಾಯಿಗೆ ಬಂದ ಹಾಗೆ ಬೈದಿದ್ದ ಒಬ್ಬನ ಬೈಗುಳವನ್ನು “Thanks very much Symonds, for your valuable time “ಎಂದು ಮುಕ್ತಾಯ ಮಾಡಿದ್ದಳು, ನ್ಯಾನ್ಸಿ. ಎರಡು ವರ್ಷದ ಹಿಂದೆ ಆಗಿದ್ರೆ ಈ ತರಹದ ಬೈಗುಳಗಳು, ಅಶ್ಲೀಲವಾದ comment ಗಳಿಗೆ ದಿನ ಎಲ್ಲಾ ತಲೆ ಕೆಡಿಸ್ಕೊಂಡು ಕೂತಿರ್ತಿದ್ದಳು. ಈಗ ಈ  inustry, business, culture, pressure ಎಲ್ಲಾ ಅರ್ಥವಾಗಿ ಬಿಟ್ಟಿದೆ. ದೂರವಾಣಿಯ ಆ ತುದಿಯಿಂದ ಯಾರು ಏನೇ ಅಂದರೂ,”Thank you for your valuable time” ಅನ್ನುವ ಮಂತ್ರ ಸಿದ್ದಿಸಿಹೋಗಿದೆ. ರಾತ್ರಿ ಎಲ್ಲ ಎಚ್ಹರವಾಗಿರುವ ಅಭ್ಯಾಸಕ್ಕೆbiological clock ಕೂಡ adjust ಆಗಿ ಬಿಟ್ಟಿದೆ. ತೀರ ನಿದ್ರೆ ಬಂದ್ರೆ ಇದ್ದೇ ಇದಯಲ್ಲ, toilet ನ seat ಮೇಲೆ ತೂಕಡಿಸೋದು, desk ಮೇಲೆ ನಿದ್ದೆ ಮಾಡೋ ಹಾಗಿಲ್ವಲಾ!!!

Team lead ಬಂದು toilet ನಲ್ಲಿ ಮತ್ತೆ used ಕಾಂಡೋಮ್ ಗಳು ಸಿಕ್ಕಿವೆ Admin ನವರು ಗಲಾಟೆ ಮಾಡ್ತಿದ್ದಾರೆ, this is the final warning, be careful ಅಂತೆಲ್ಲಾ ಹೇಳಿ ಹೋದ. ಯಾರೋ ಒಬ್ಬಿಬ್ರು ಮಾಡೊ ಕೆಲ್ಸಕ್ಕೆ ಎಲ್ರಿಗೂ ಕೆಟ್ಟ ಹೆಸರು ಅಂತ ಗೊಣಗಿಕೊಂಡು ಮತ್ತೆ phone ಎತ್ತಿದಳು ನ್ಯಾನ್ಸಿ.

ಜೇಮ್ಸ್ ಮತ್ತು ಲಿಂಡಾ ದು ಬ್ರೇಕ್ ಅಯ್ತು ಅಂತ ಅನ್ಸುತ್ತೆ, ಲಿಂಡಾ ಮತ್ತೆ orkut ನಲ್ಲಿ ಸಿಂಗಲ್ ಅಂತ ಹಾಕಿದ್ದಾಳೆ, ನೋಡು ಅಂತ ವಿನ್ಸಿ, messanger ನಲ್ಲಿ breaking news ಕಳಿಸಿದ್ದು ನೋಡಿ ಸಣ್ಣದಾಗಿ ತುಟಿ ಅಂಚಿನಲ್ಲಿ ನಕ್ಕು “sure our agent will drop at your place exactly at the appointed time “ಅಂತ ಹೇಳಿ phone disconnect ಮಾಡಿದಳು.

ಪಾಪ ಅಮ್ಮನ ಮೇಲೆ ಅಷ್ಟ್ಟೊಂದು ಕೂಗ ಬಾರದಿತ್ತು, ಅವಳು ಹೇಳಿದ್ರಲ್ಲಿ ತಪ್ಪೇನು ಇರಲಿಲ್ಲ. ಕಾಲ್ ಸೆಂಟರ್ ನಲ್ಲಿ ಇರೋ ಹುಡುಗಿ ಅಂದ್ರೆ ಗಂಡಿನ ಕಡೆಯವರು ಸಂಬಂಧ ಬೆಳಸಕ್ಕೆ ಹಿಂದೆ ಮುಂದೆ ನೋಡ್ತಾರೆ ಅನ್ನೋದು ಸತ್ಯ ತಾನೆ. ಅದ್ರೆ ಈ ಕೆಲಸ ಬಿಟ್ರೆ ತಿಂಗಳಿಗೆ 15000 ಸಿಗೋ ಇನ್ಯಾವ ಕೆಲಸ ಸಿಗತ್ತೆ? ಮನೆ ಬಾಡಿಗೆ ಆರು ಸಾವಿರ, ದಿನಸಿ, ಕರೆಂಟ್ ಬಿಲ್ಲು, ಫೋನ್ ಅಂತೆಲ್ಲಾ ಎಷ್ಟ್ಟು ಖರ್ಚಿರುತ್ತೆ, ಅಮ್ಮನಿಗೇನು ಗೊತ್ತಾಗುತ್ತೆ. ಹೋಗ್ಲಿ ನಾನು ಮದುವೆ ಆಗಿ ಹೋದ್ರೆ ಅಮ್ಮನ್ನ ನೋಡ್ಕೊಳೊಕ್ಕೆ ಅಣ್ಣ , ತಮ್ಮ ಅಂತನಾದ್ರು ಯಾರದ್ರು ಇದ್ದಾರ? ಅದು ಇಲ್ಲ… ಅಮೇಲೆ ಮದುವೆ ಆದ ಮೇಲೆ ತಾಯಿಗೆ ದುಡ್ಡು ಕೊಡೊದು ಬೇಡ ಅಂತ ಗಂಡ ಕೂಗಾಡಿದ್ರೆ, ಪಾಪ ಅವಳೇನು ಬೀದಿಲ್ಲಿ ಬೇಡಕ್ಕಾಗುತ್ತಾ? ಹೀಗೆ ತಲೆಯಲ್ಲಿ ನೂರಾರು ಯೋಚನೆ ತುಂಬಿಕೊಂಡು, ಇನ್ನು ಇಪ್ಪತ್ತು ನಿಮಿಷ ಬ್ರೇಕ್ ನಲ್ಲಿ ಏನಾದ್ರು ತಿಂದುಕೊಂಡು ಬರಬೇಕು ಅಂತ cafeteria ಕಡೆ ಹೆಜ್ಜೆ ಹಾಕಿದಳು.

smoking zone ನಲ್ಲಿ ದಟ್ಟವಾದ ಹೊಗೆಯ ನಡುವೆ, ಪಿಂಟೊ ತೊಡೆಯ ಮೇಲೆ ಕೂತ್ಕೊಂಡು ಕೇಕೆ ಹಾಕ್ತಿದ್ದ, ಲಿಂಡಾ Hey nancy…long time no see….ಅಂತ ಕೂಗಿದಳು. ಮತ್ತೆ ಹತ್ತಿರ ಹೋದರೆ ಆ ಪಿಂಟೊ ಮಖ ನೋಡಬೇಕಲ್ಲಾ ಅಂತ ಅಲ್ಲಿಂದಲೇ ಕೈ ಬೀಸಿ ಮುಂದೆ ಹೋದಳು.

ಕೆಲಸಕ್ಕೆ ಸೇರಿದ ಹೊಸದರಲ್ಲಿ ಇಲ್ಲಿಯ ವಾತವರಣ, ನಡವಳಿಕೆ ಎಲ್ಲಾ ನೋಡಿ ಗಾಬರಿ ಆಗಿದ್ದಳು. ಇದು ಸಾಲ್ದು ಅಂತ ನಿನ್ನ performance ಏನು ಸರಿ ಇಲ್ಲ you won`t survive here, ಅಂತ tem lead ಹೆದರಿಸಿದ್ದ ದಿನ ಅಂತು ಕಣ್ಣಲ್ಲಿ ನೀರು ಬಂದಿತ್ತು. ಸಮಾಧಾನದ ನಾಲ್ಕು ಮಾತುಗಳನ್ನು ಹೇಳಿದ್ದ, ಪಿಂಟೊ. ಆದರೆ ಸಮಾಧಾನ ಮಾಡುವ ನೆಪದಲ್ಲಿ ಅನವಶ್ಯಕವಾಗಿ ತನ್ನ ಮೈ , ಕೈ, ಎಲ್ಲಾ ಮುಟ್ಟುತಿದ್ದಾನೆ ಅಂತ ಗೊತ್ತದ ತಕ್ಷಣ ಅವನನ್ನ ದಬ್ಬಿ ಓಡಿ ಬಂದಿದ್ದಳು.

Marriage bureau ದಲ್ಲಿ ಹುಡುಗಿ private ಕಂಪನಿಲ್ಲಿ ಅಕೌಂಟೆಂಟ್ ಕೆಲಸ ಮಾಡ್ತಿದ್ದಾಳೆ ಅಂತ ಬರ್ಸಿದ್ದಿನಿ ಕಣೇ ಅಂತ ಅಮ್ಮ ಹೇಳಿದ್ದು ನೆನಪಾಯಿತು. ನಮ್ಮಗಳ ನಡುವೆ ಕೆಲವು ಜನ ಲಿಂಡಾ, ಪಿಂಟೊ, ಜೇಮ್ಸ್ ತರಹದವರು ಇರಬಹುದು, ಅದ್ರೆ, ನನ್ನಂತವರು, ವಿನ್ಸಿ, ರಾಬರ್ಟ್ ,ಕ್ಯಾಥರಿನ್ , ಮಾರ್ತಾ, ರಿಕ್ಕಿ, ರಿಚರ್ಡ್ , ತರಹ ದವರು ಸಾವಿರಾರು ಜನ ಹೊಟ್ಟೆ ಪಾಡಿಗಾಗಿ ನಿಯತ್ತಾಗಿ ದುಡಿತಾ ಇದಾರೆ ಅಂತ ಹುಡುಗನ ಕಡೆಯವರಿಗೆ ಹೇಗೆ convince ಮಾಡೋದು? ಅಥವಾ convince ಮಾಡೋಕ್ಕಾಗುತ್ತಾ? impossible … ಮತ್ತೆ ಯಾಂತ್ರಿಕ ವಾಗಿ phoneಎತ್ತಿದಳು “Hi this is Nancy calling from …..

ಇರುವುದೆಲ್ಲವ ಬಿಟ್ಟು…..

“ರೀ ಇವತ್ತು ಕಾಗದ ಬಂದಿದೆ, ನಮ್ಮ ನಂದಿನಿದು ಹಾಗು ಹುಡುಗಂದು ಜಾತಕ ಬಹಳ ಚೆನ್ನಾಗಿ ಆಗುತ್ತಂತೆ, ಹುಡುಗನ photoನು ಕಳಿಸಿದ್ದಾರೆ. ಮುಂದಿನ ವಾರನೆ ನೋಡಕ್ಕೆ ಬರುತ್ತಾರಂತೆ” ಅಂತ ಬ್ಯಾಂಕಿನಿಂದ ಬಂದು ಇನ್ನು ಶೂ ಕಳಚುವ ಮೊದಲೆ ಗಂಡ ನಿಗೆ ವರದಿ ಒಪ್ಪಿಸಿದ್ದರು ಸೀತಮ್ಮ. ತನ್ನ ರೂಮಿನಲ್ಲಿ ಪುಸ್ತಕದ ನಡುವೆ ಶಾಹಿದ್ ಕಪೂರ್ ನ ಹೋಲುವ ಚಾಕೊಲೆಟ್ ಮುಖದ ಹುಡುಗನ ಮುದ್ದು ಮುಖದ photo ನೋಡುತ್ತಾ ಕುಳಿತಿದ್ದಳು ನಂದಿನಿ.

ಕೊನೆಯ ವರ್ಷದ ಕನ್ನಡ MA ಫಲಿತಾಂಶ ಕಾಯುತಿದ್ದ ನಂದಿನಿಗೆ ಏನು ನಡೆಯುತ್ತಿದೆ ಅನ್ನೋಷ್ಟ್ಟರಲ್ಲಿ ಹುಡುಗನ ಕಡೆಯವರು ಬಂದಿದ್ದು, ನೋಡಿದ್ದು, ಮಾತಾಡಿದ್ದು, ಒಪ್ಪಿಗೆ ಕೊಟ್ಟಿದ್ದು, ಎಲ್ಲಾ ನಡೆದು ಹೋಗಿತ್ತು.

ಅದರೆ ಸದಾ ಸಾಹಿತ್ಯ, ಕಥೆ, ಕಾವ್ಯ ಪ್ರಪಂಚದಲ್ಲಿದ್ದ ಅವಳಿಗೆ ಅವತ್ತು ತನ್ನ ನೋಡಲು ಬಂದ ವಿನಯ್ ಇದಾವುದರ ಬಗ್ಗೆ ತನಗೆ ಸಂಬಧವೇ ಇಲ್ಲದ ಹಾಗೆ “ok, ok thats fine” ಅಂತ ಬರಿ ಬಾಯಿ ಮಾತಿಗೆ ಮೆಚ್ಹುಗೆ ವ್ಯಕ್ತ ಪಡಿಸಿದ್ದ. ಅವಳ ಜೊತೆ ಮಾತನಾಡಿದಷ್ಟ್ಟು ಹೊತ್ತು, ತುಂಬಾನೆ open ಆಗಿ ತನ್ನ ವಿದ್ಯಾಭ್ಯಾಸ, ತನ್ನ software profession ಬರೋ ಸಂಬಳ, ಕೆಲಸದ ಮೇಲೆ visit ಮಾಡಿದ ದೇಶಗಳು, ಮುಂದಿನ plans, ಬೆಂಗಳೂರಿನಲ್ಲಿ ತನಗಿರುವ site ಇದರೆಲ್ಲದರ ಬಗ್ಗೆ ಹೇಳಿ “ನಿನ್ನ ಅಭಿಪ್ರಾಯ ಸಂಕೋಚ ಇಲ್ಲದೆ ಹೇಳು” ಅಂತ ಹೇಳಿದ್ದ.

ಈ ವಿಷಯ ಅಮ್ಮನ ಬಳಿ ಹೇಳಿದಾಗ ” ಗಂಡಸರು ಮದುವೆ ಅಂದ್ರೆ ಯೋಚಿಸೊದು ಹಾಗೆ ಅಲ್ಲವೇನೆ?  ತನಗೆ ಬರುತ್ತಿರುವ ಆದಾಯ ದಲ್ಲಿ ತನ್ನ ಹೆಂಡತಿ ಮಕ್ಕಳನ್ನ ಸುಖವಾಗಿ ನೋಡಿಕೊಳ್ಳೊಕೆ ಆಗುತ್ತಾ?, ಸುಖ ಸಂಸಾರಕ್ಕೆ ತನ್ನ ಜವಾಬ್ದಾರಿ ಏನು? ಅಂತ, ಇದು ನಿಜವಾಗ್ಲು ಒಬ್ಬ ಜವಾಬ್ದಾರಿಯುತ ಹುಡಗನ ಲಕ್ಶಣ. ನಿನಗಿಷ್ಟ್ಟವಾಗುವುದರ ಬಗ್ಗೆ ಅವನಿಗೆ ತಿಳಿದಿಲ್ಲಾ ಅನ್ನೋದು, ಅದು ಒಂದು ದೊಡ್ಡ ವಿಷಯಾನಾ? ಗುಣ ಮುಖ್ಯ” ಎಂದು ಉತ್ತರಿಸಿದ್ದರು ಸೀತಮ್ಮ.

ಹೌದು ಅಂತ ಅನ್ನಿಸಿತ್ತು, ನಂದಿನಿಗೆ.  ಎಲ್ಲರು ಕವಿರಾಜ ಮಾರ್ಗ ಓದಿರಲಿ, ಅವನಿಗು ನನ್ನಂತೆ ಲಕ್ಶ್ಮಿ ನಾರಾಯಣ ಭಟ್ಟರ ಕವಿತೆ ಗಳು ಇಷ್ಟ್ಟ ಆಗ್ಲಿ ಅನ್ನೋದು ತಪ್ಪಲ್ಲವಾ ಅಂತ ಸಮಾಧಾನ ಮಾಡಿಕೊಂಡಿದ್ದಳು.

ಮಧುಚಂದ್ರಕ್ಕೆ ಮೊದಲ ಬಾರಿಗೆ ವಿಮಾನದಲ್ಲಿ Maldives ಗೆ ಹಾರಿದ್ದು, ಎಲ್ಲೆಲ್ಲಿ ನೋಡಿದರು ಕಾಣುವ ನೀಲಿ ಆಕಾಶ, ನೀಲಿ ಕಡಲು, ನಡುವಿನ ಹಸಿರು ಗುಡ್ದಗಳು ನಡುವೆ ವಿನಯ್ ನ ಬೆಚ್ಹನೆ ಅಪ್ಪುಗೆ, ಇವೆಲ್ಲದರ ನಡುವೆ ದಿನಗಳು ಕಳೆದದ್ದು ನಂದಿನಿ ಗೆ ಗೊತ್ತೆ ಆಗಲಿಲ್ಲ.

                                                       *******************                                     

ಕಾಲಿಂಗ್ ಬೆಲ್ ನ ಶಬ್ದಕ್ಕೆ ಧಡಕ್ಕನೆ ಗತ ನೆನಪು ಗಳ ತೆಕ್ಕೆಯಿಂದ ಬಿಡಿಸಿಕೊಂಡು ಎದ್ದಳು ನಂದಿನಿ. ಬಾಗಿಲು ತೆರೆದಾಗ ಎಂದಿನ ಕಳೆಗುಂದಿದ ಮುಖದೊಂದಿಗೆ ನಿಂತಿದ್ದ ವಿನಯ್. ಒಳಗೆ ಬಂದವನೆ ಹೆಚ್ಹು ಮಾತನಾಡದೆ “ಹೊಟ್ಟೆ ಹಸಿವಿಲ್ಲ ಒಂದು ಲೋಟ ಹಾಲು ಕುಡಿದು ಮಲ್ಕೊತಿನಿ” ಅಂತ ಹೇಳಿ ರೂಮಿನ ಬಾಗಿಲು ಹಾಕಿಕೊಂಡ.
 ನಂದಿನಿ ಗೆ ಇದು ಇವತ್ತಿನ ಕಥೆಯಲ್ಲ, ಎರಡು ತಿಂಗಳಿನಿಂದ ನಡಿಯುತ್ತಿರುವುದು.ಯಾಕೆ, ಏನು ಅಂತ ಯೋಚನೆ ಮಾಡಿ, ಅವನನ್ನ ಕೇಳಿ ಅವಳಿಗೆ ಸಾಕಾಗಿಹೋಗಿತ್ತು. ಏನೂ ಪ್ರಯೋಜನ ಇಲ್ಲವೆಂದು ಸುಮ್ಮನಾಗಿದ್ದಳು.

“ಕೆಲಸದ ಒತ್ತಡನಾ ಅಥವಾ ಏನು, ಯಾಕೆ ಇಷ್ಟ್ಟೊಂದು ಸುಸ್ಥಾಗಿ, tension ನಲ್ಲಿ ಇರ್ತಿಯಾ, ವಿನಿ doctor ಹತ್ತಿರ ಹೋಗೋಣವಾ” ಅಂತ ಅಂದಿದ್ದಕ್ಕೆ ” ನಿನಗೇನು ಗೊತ್ತು ಅಂತ ಮಾತಾಡ್ತಿಯಾ ತೆಪ್ಪಗಿರು” ಅಂತ ಅಬ್ಬರಿಸಿದ್ದ. ಹೆಚ್ಹಿಗೆ ಮಾತು ಕಥೆಯಿಲ್ಲದ ಒಂದೊಂದು ಸಾರಿ ಪೂರ್ತಿ ಮೌನದ ದಿನಗಳು ಅವಳಿಗೆ ಅಸಹನೀಯ ವಾಗತೊಡಗಿದ್ದವು.

ಅಡುಗೆ ಮನೆಯಲ್ಲಿ ಕೆಲಸ ಮಾಡುತಿದ್ದವಳನ್ನು ಹಿಂದಿನಿಂದ ಸದ್ದಿಲ್ಲದೆ ಬಂದು ಬಲವಾಗಿ ಅಪ್ಪಿಕೊಂಡು ” ಇವೆಲ್ಲಾ ಬಿಸಾಕು `ನಂದು`, ಇವತ್ತು ಊಟಕ್ಕೆsouth indies ಗೆ ಹೋಗಣ, table book ಮಾಡಿದಿನಿ, get ready fast ಚಿನ್ನ” ಅಂತ ಅವಸರಪಡಿಸಿದ್ದ;

India twenty twenty World Cup ಗೆದ್ದಾಗ ಮಗುವಿನಂತೆ sofa ದ ಮೇಲೆ ಕುಣಿದು, ಟಿಪಾಯಿಯ ಮೇಲಿಟ್ಟಿದ್ದ flower vase ನ ಒಡೆದು ಹಾಕಿದ್ದ; ವಿನಿ ಎಲ್ಲಿ ಹೋದ? ಅವನಿಗ ಏನಾಯಿತು ಎಂಬುದು ಬಿಡಿಸಲಾಗದ ಸಮಸ್ಯೆಯಾಗಿತ್ತು. ಗಡಿಯಾರದ ಮುಳ್ಳು 11 ನ್ನ ತೋರಿಸುತಿದ್ದರೂ ನಿದ್ದೆಯ ಜಾಗವನ್ನು ಯೋಚನೆ ಗಳು ಆಕ್ರಮಿಸಿದ್ದವು.

“ವಿನಯ್ ಹುಚ್ಹು ನಿಂಗೆ ಎರಡು ವರೆ ಸಾವಿರದ ಚಪ್ಪಲಿನಾ ನನಗೆ, ಖಂಡಿತಾ ಬೇಡಾಪ್ಪ, ನಿಂಗೊತ್ತಾ? ನಮ್ಮಪ್ಪನ ಮನೆಲ್ಲಿ ನಮ್ಮ3 ಜನರ ಸಂಸಾರಕ್ಕೆ ತಿಂಗಳ ದಿನಸಿ ಖರ್ಚು ಇದಕ್ಕಿಂತ ಕಮ್ಮಿ ಆಗುತ್ತೆ” ಅಂದಿದ್ದಳು. ” `ನಂದು` ದುಡ್ದಿದ್ದಾಗ ಮಜ ಮಾಡಬೇಕು ಕಣೆ, ವಿನಯ್ ಹೆಂಡತಿ ಎಂತಾ cheap ಆಗಿರೊ ಚಪ್ಪಲಿ ಹಾಕ್ಕೊಂಡಿದ್ದಾಳೆ ಅಂತ ಜನ ಮಾತಾಡಿದ್ರೆ ನಂಗೆ ಅವಮಾನ ಗೊತ್ತ” ಅಂತೆಲ್ಲಾ ಹೇಳಿ ಅವಳನ್ನ convince ಮಾಡಿದ್ದ.

ಕೇವಲ ಎರಡೇ ವರ್ಷ ಹಳೆಯದಾದ ಚೆನ್ನಾಗಿರುವ 29 inchನ T V ಮಾರಿ LCD TVನ ತಂದಾಗಲಂತೂ ಅವಳಿಗೆ ಇವನು ಯಾಕೆ ಹೀಗೆ ಮಾಡ್ತಾನೆ ಅಂತ ಗೊತ್ತಾಗದೆ, ಬೆಪ್ಪಾಗಿ ಕುಳಿತಿದ್ದಳು. ” ಏ ನಂದು ನನ್ನ colleagues ಗಳಲ್ಲಿ LCD TV ತೋಗೊತಿರದು ನಾನೆ ಕೊನೆಯವನು ಗೊತ್ತಾ? ನಮ್ಮsenior manager ಮನೆಲಿ LCD TV ಬಂದು ಎರಡು ವರ್ಷ ಆಗಿದೆ, ಇದ್ರ clarity ಈ CRT technology ಗೆ compare ಮಾಡಕ್ಕಾಗಲ್ಲ ಗೊತ್ತ? ನೀನು happy ಆಗಿರು ಚಿನ್ನworry ಮಾಡ್ಕೊಬೇಡ just four instalments ಅಷ್ಟ್ಟೆ”.

ಅರೆ! ನಾನು ನೋಡೋದು ನಾಲ್ಕು ಸೀರಿಯಲ್ ಹಾಗು ಒಂದು ಸಾರೆಗಮ programme ಗೆ ಆ TV ನೆ ಜಾಸ್ತಿಯಾಗಿತ್ತು ನಾನ್ಯಾವತ್ತು LCD TV ಬೇಕು ಅಂತ ಹೇಳೇ ಇಲ್ವಲ್ಲ ಅಂತಾ ಹೇಳ್ತಿದ್ದ ಅವಳ ಮಾತನ್ನ ಕಿವಿ ಮೇಲೆ ಹಾಕಿಕೊಳ್ಳದೆ ” ಇದರ picture in picture technology ಸಕತ್ತಾಗಿದೆ” ಅಂತ ಕೂಗ್ತಿದ್ದ.

“ನೀನು driving class ಸೇರ್ಕೊ `ನಂದು `ನಿಂಗೆ ಅಂತನೆ separate ಕಾರ್ ತೊಗೊಳೊಣ” ಅಂದಿದ್ದಕ್ಕೆ,  ” ಇಲ್ಲ ನಂಗೆ ಕಾರ್ drive ಮಾಡೋದು ಇಷ್ಟ್ಟ ಇಲ್ಲ ನಿನ್ನ ಪಕ್ಕ ಕೂರ್ತಿನಲ್ಲ ಅದೆ ನಂಗೆ ಸಾಕು ನನ್ನ force ಮಾಡಬೇಡ please” ಅಂತ ಕೂಗಿ ಅತ್ತಿದ್ದು, ಹೀಗೆ ಒಂದೊಂದು ಘಟನೆ ಗಳು ಅವಳ ಕಣ್ಣ ಮುಂದೆ ಓಡ್ತಾ ಇದ್ರೆ ಗಡಿಯಾರದ ಮುಳ್ಳು ಮಧ್ಯ ರಾತ್ರಿ ಎರಡು ಗಂಟೆ ತೋರಿಸುತಿತ್ತು. Drawing room ನ ಸೀಲಿಂಗ್ fan ನ ನೋಡ್ತಾ ಕುಳಿತಿದ್ದ ನಂದಿನಿ ರೂಮಿನ ಬಾಗಿಲು ತೆರೆದ ಸದ್ದಿಗೆ ಹಿಂತಿರುಗಿ ನೋಡಿದಳು.

ರೂಮಿನ ಬಾಗಿಲಿನಲ್ಲಿ ಕಣ್ಣ ತುಂಬ ನೀರು ತುಂಬಿಕೊಂಡು ನಿಂತಿದ್ದ ವಿನಯ್ , ನಂದಿನಿ ಯ ಮುಖ ನೋಡಿದ ತಕ್ಶಣ ದುಃಖದ ಕಟ್ಟೆ  ಒಮ್ಮೇಲೆ ಒಡೆದಂತೆ ಜೋರಾಗಿ ಅಳುತ್ತಾ “ನಂದು ” ಅಂತ ಓಡಿ ಬಂದು ಅವಳ ತೊಡೆಯ ಮೇಲೆ ಮುಖವನ್ನಿಟ್ಟು ಜೋರಾಗಿ ಅಳತೋಡಗಿದ.”ಏಯ್ ವಿನಿ ಸಮಾಧಾನ ಮಾಡಿಕೊಳ್ಳೊ, ಏನಾಯ್ತು ಹೇಳು ,ಪುಟ್ಟ ಮಕ್ಕಳ ತರಹ ಅಳ್ತಿಯಲ್ಲೋ ಹುಚ್ಹ ನಾನಿಲ್ವ ನಿಂಜೊತೆ” ಎನ್ನುತ್ತಾ ಅವನ ಮುಖವನ್ನು ಮೇಲಕ್ಕೆತ್ತಿದಳು.

“ನಂದು ನಾನು ಕೆಲಸ ಮಾಡುತಿದ್ದ ಆ American Banking project, sub-prime crisis ನಿಂದ client  ಗೆ ತುಂಬಾ loss ಆಗಿ 50% rampdown ಆಗ್ತಿದೆ. ಕಂಪನಿ management ಈ project ನಲ್ಲಿ ಕೆಲ್ಸ ಮಾಡುತಿದ್ದ almost 50% engineers ನ layoff ಮಾಡಿದೆ. ನಾನು senior ಅಂತ ಇದೇ project ನಲ್ಲಿ ನನ್ನ ಹಳೇಯ salary ಯ 50% ಗೆ work ಮಾಡಬಹುದು ಅಥವಾ  ಇನ್ನೆರಡು ತಿಂಗಳಿನಲ್ಲಿ ಬೇರೆ ಕೆಲಸ ನೋಡ್ಕೊ ಅಂತ ಹೇಳಿದ್ರು, ಇದನ್ನ ನಾನು ನಿನಗೆ ಹೇಳಲೇ ಇಲ್ಲ. ಇಷ್ಟ್ಟು ಸಂಬಳಕ್ಕೆ ಇನ್ಯಾವುದಾದರು ಕೆಲ್ಸ ಸಿಕ್ಕೆ ಸಿಗುತ್ತೆ ಅನ್ನೋ confidence ನಂಗಿತ್ತು. ಆದ್ರೆ ಈ ಎರಡು ತಿಂಗಳಲ್ಲಿ ನನ್ನ profile ಗೆ suit ಆಗೊಂತ ನನ್ನ salary expectation ಗೆ ತಕ್ಕ ಯಾವ ಕೆಲ್ಸಾನು ಸಿಗಲಿಲ್ಲ. ಇದೇ ಕೆಲಸದಲ್ಲಿ, ಅರ್ಧ ಸಂಬಳಕ್ಕೆcontinue ಮಾಡೊ ಒಂದೆ option ನನಗುಳಿದಿರುವುದು. `ನಂದು` ನಮ್ಮfuture ಬಗ್ಗೆ ಏನೆಲ್ಲಾ ಕನಸು ಇತ್ತು, ನಿನ್ನ ತುಂಬಾ ಚೆನ್ನ್ನಾಗಿ ನೋಡ್ಕೊಬೇಕು ಅನ್ನೋ ಆಸೆ ನಂಗಿತ್ತು, ಬೇಜಾರಿಲ್ಲ ತಾನೆ”, ಎಂದು ಒಂದೇ ಉಸಿರಿನಲ್ಲಿ ಎಲ್ಲವನ್ನು ಹೇಳಿದ.
ಇಷ್ಟ್ಟು ದಿವ್ಸ ಮನಸಿನಲ್ಲಿ ಹೆಪ್ಪು ಗಟ್ಟಿದ್ದ ಭಾವನೆಗಳು ಹರಿದು ಬಂದದಕ್ಕೆ, ಒಂದು ಕಡೆ ಸಂತಸ, ಇನ್ನೊಂದು ಕಡೆ ಅವನ ಅಸಹಾಯಕತೆಯ ಬಗ್ಗಿ ಉಕ್ಕಿ ಬರುತಿದ್ದ ಅನುಕಂಪ ಪ್ರೀತಿ ಎಲ್ಲ ಕೂಡಿ ಗದ್ಗದಿತಳಾಗಿ “`ವಿನಿ`, ನನಗಿದಾವುದರಿಂದನು ಬೇಜಾರಿಲ್ಲ ಕಣೋ, ನಮ್ಮಪ್ಪನಿಗೆ ಬರುತಿದ್ದ ಹತ್ತು ಸಾವಿರ ರೂಪಾಯಿ ಸಂಬಳದಲ್ಲಿ ನಾವೆಷ್ಟ್ಟು ಸುಖ ವಾಗಿದ್ದೆವೋ ಅದಕ್ಕಿಂತ ಒಂದು ಚೂರೂ ಜಾಸ್ತಿ ಬೇಡ ನನಗೆ”.

“ನಾನು ನನಗಿಷ್ಟ್ಟವಾದ ನಾಲ್ಕು ಸಾಲುಗಳ ಪುಟ್ಟ ಕವಿತೆ ಓದಿ ಹೇಳ್ದಾಗ, ನೀನು ಚೆನಾಗಿದೆ ಅಂತ ಹೇಳೊದಿರಲಿ, ನಂಗರ್ಥ ಆಗಲಿಲ್ಲ ಇದರರ್ಥ ಹೇಳೆ ಅಂತ ಹೇಳಿದ್ರೂ ನನಗೆ ಖುಷಿ ಆಗ್ತಿತ್ತು. ಅದರೆ, ಜೀವನದಲ್ಲಿ ಇದಕ್ಕೆಲ್ಲ್ಲ ಏನು value ಇಲ್ಲ ಅಂತ ಮುಖ ಮಾಡುತ್ತಿದ್ದಿಯಲ್ಲ, ಅವಾಗ ನನಗೆ ಬೇಜಾರು ಆಗುತಿತ್ತು. ಕೆಮ್ಮಣ್ಣು ಗುಂಡಿಯಲ್ಲಿ ಸೂರ್ಯಾಸ್ತ ನೊಡ್ತಾ ನಾನು ಮೈ ಮರೆತಿದ್ರೆ, ಮುಂದಿನ ರಜಕ್ಕೆ switzerland ಗೆ ಹೋಗಬೇಕು, ಇಲ್ಲೇನಿದೆ ಅಂತ ನೀ ಹೇಳಿದಾಗ ನಂಗೆ ಬೇಜಾರಾಗಿತ್ತು”.

“ನಿನ್ನ ಜೊತೆ ಕೊರೆವ ಚಳಿಯಲ್ಲಿ ಶಾಲು ಹೊದ್ದುಕೊಂಡು ಬಿಸಿ ಬಿಸಿ ಕಾಫಿ, ಕುಡಿಯುತ್ತಾ, ಬೆಟ್ಟದ ಮೇಲಿನ ಕೆಂಪನೆ ಸೂರ್ಯನನ್ನು ನೊಡಬೇಕು ಅನ್ನುವ ನನ್ನ ಆಸೆ ಮುಂದೆ, ನಿನ್ನ ಕನಸಿನ lawn ಇರೋ ದೊಡ್ಡ ಬಂಗ್ಲೆ, ವರ್ಷದಲೊಂದು foreign holiday, Luxury sedan car ಯಾವುದುನೂ, ದೊಡ್ಡದು ಅಂತ ಅನ್ನಿಸೋದೆ ಇಲ್ಲ ಕಣೊ….
ಜೀವನ ಸಾಗಿಸಕ್ಕೆ ದುಡ್ಡು ಬೇಡ ಅಂತ ಹೇಳೊಷ್ಟ್ಟು ಪೆದ್ದಿ ನಾನಲ್ಲ. ನಿಂಗೆ ಬರೊ ಸಂಬಳದಲ್ಲಿ ಸುಖವಾಗಿ ಜೀವನ ಮಾಡಬಹುದು ಅರ್ಥ ಮಾಡಿಕೊ….”
 
ಹೀಗೆ ಒಬ್ಬರಿಗೊಬ್ಬರು ಸಮಾಧನ ಹೇಳಿಕೊಳ್ಳುತ್ತಾ, ಮನಸನ್ನು ಹಗುರ ಮಾಡಿಕೊಳ್ಳುತಿದ್ರೆ,  ಹೊಸ ದಿನದ ಆರಂಭ ವನ್ನು ಸೂಚಿಸುತ್ತಾ, ಸೂರ್ಯ ಕಿಟಕಿಯಿಂದ ಮುಗುಳ್ನಗುತಿದ್ದ.

Reinvention???

“Dry statistics can`t reveal the complete truth, America ಹಾಗು Europe ನಲ್ಲಿ un geared cars popular ಆಗ್ತಾ ಇದೆ ಅನ್ನೋ statistics ಇಟ್ಟುಕೊಂಡು, ಇಷ್ಟ್ಟು ದೊಡ್ಡ ನಿರ್ಧಾರ ಹೇಗೆ ತೆಗೆದುಕೊಳ್ಳಕ್ಕೆ, ಆಗುತ್ತೆ?

I agree ಮುಂದುವರೆದ ದೇಶಗಳಲ್ಲಿ Automobile industry ಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಅಂತ. ಅದರೆ ಈ ನಂಬರ್ ಗಲಾಟೆಯಲ್ಲಿ ಒಂದು ಬಹು ಮುಖ್ಯವಾದ ಅಂಶ ಮರಿತಿದ್ದೀರ, ಭಾರತ ಹಾಗು ಇನ್ನು ಅನೇಕ developing countries ಗಳಲ್ಲಿ ಇವತ್ತಿಗೂ ಸಹ ಒಂದು geared vehicle ಅದು two wheeler ಅಗಿರಬಹುದು ಅಥವಾ four wheeler ಆಗಿರಬಹುದು, its often considered as a male thing. Ungeared two wheeler or car is equated with female. So a geared vehicle ಹಾಗು high powered vehicle definitely satisfies the Male Ego”.

“ಇವತ್ತಿಗೂ ಸಹ ಕಾರ್ ಕೊಳ್ಳುವ ವಿಷಯ ಬಂದಾಗ ಶೇಕಡ 75% ಭಾಗ ನಿರ್ಧಾರ ಗಂಡಸರದೇ ಆಗಿರುತ್ತದೆ.
ಹೀಗಿರಬೇಕಾದ್ರೆ, sudden ಆಗಿ ಒಂದು ungeared ಕಾರ್ ಮಾಡೋಂತಹ ನಿರ್ಧಾರ ಸ್ವಲ್ಪ ಆತುರದ್ದು ಅಂತ ನನಗನ್ನಿಸುತ್ತದೆ. ಇದಕ್ಕೆ ಬೇಕಾದ ಮನಸ್ಥಿತಿ, ಇನ್ನು ನಿರ್ಮಾಣ ಆಗಿಲ್ಲ, ಮತ್ತೆ ಅದನ್ನು short duration ನಲ್ಲಿ ಯಾವುದೆ advt campaign ನಿಂದ create ಮಾಡಕ್ಕೂ ಸಹ ಆಗುವುದಿಲ್ಲ”.

“You can`t take a decision without considering the mentality and attitude of a big chunk of your potential customers”

ಹೀಗೆ ತುಂಬಾನೆ normal flow ನಲ್ಲಿ ಮಾತಾಡ್ತ ಇದ್ದ ಕಂಪನಿ ಯ Strategic Marketing consultant  ರಾಹುಲ್ ನ ಮಾತು ಗಳಿಗೆ ಮೋಡಿಯಾದಂತೆ ಕೂತಿತ್ತು ಕಂಪನಿ ಯ top management  ಹಾಗು functional heads ಸಮುಹ.

ಮುವತ್ತೈದು ವರ್ಷದ still bachelor ರಾಹುಲ್ ಓದಿದ್ದು London school of business ನಲ್ಲಾದರು, ಪ್ರತಿಯೊಂದು local market ನ ಅವನು analyse ಮಾಡುತಿದ್ದ ರೀತಿ ಎಲ್ಲರಿಗೂ ಮೆಚ್ಹುಗೆ ಆಗಿತ್ತು. ಮಾತು ಪ್ರಾರಂಭಿಸಿದರೆ, Mathematical modelling, Game Theory, Peter Kotler  ಅಂತ ಪ್ರಾರಂಭ ಮಾಡಿ ವೇದ, ಉಪನಿಷತ್ತು, ಗೀತಾ ಅಂತ ಕೊನೆಗೊಳ್ಳಿಸುತಿದ್ದ.
” But ರಾಹುಲ್ sorry to interrupt you” ಅಂತ ದ್ವನಿಯನ್ನು ಎತ್ತರಿಸಿದವಳು, Youngest and most charming lady of Design department ಸಾಗರೀಕ. ” ಇತ್ತಿಚಿನ ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆ ನಡೆದ ಒಂದು ದೊಡ್ಡ changeನ್ನ ನೀವು ಮರಿತ್ತಿದ್ದಿರಿ ಅನ್ಸತ್ತೆ. scooter ಗಳಂದ್ರೆ, ನಾಲ್ಕು ಗೇರ್,ನ ದೊಡ್ಡ ಗಾತ್ರ ದ vehicle ಅನ್ನುವ ನಮ್ಮ ಕಲ್ಪನೆಯನ್ನು ಸಂಪೂರ್ಣ ವಾಗಿ ಹೊಗಲಾಡಿಸಿದೆ ಒಂದು ಜಪಾನಿ ಕಂಪನಿ ಯ sucess”.

“ಮೊದಮೊದಲಿಗೆ ungeared scooter, female oriented ಅಂತ ಅನ್ನಿಸಿದರೂ ಸಹಿತ , ಇವತ್ತು ಆ product ಆ barrier ದಾಟಿಕೊಂಡು ಮುಂದೆ ಬಂದಿದೆ. ಇವತ್ತು city traffic ನಲ್ಲಿ easy ಆಗಿ16 ರಿಂದ 60 ವರ್ಷದವರೆಗಿನ ಯಾರು ಬೇಕಾದರು ಸುಲಭವಾಗಿ ride ಮಾಡಬಹುದು ಅಂತ prove ಮಾಡಿಲ್ವ ಆ ಕಂಪನಿ. ಇದೇ revolution ನ ಮುಂದುವರೆದ ಭಾಗವಾಗಿ ಇವತ್ತು geared scooter is almost non existant. I think customer is more concerned with technology and ease of driving.ಹೀಗಿರಬೇಕಾದರೆ , ನಾವ್ಯಾಕೆ ungeared ಕಾರ್ revolution ಪ್ರಾರಂಭ ಮಾಡಬಾರದು?”
ಸಾಗರೀಕಳ argument ನಿಂದ ಸ್ವಲ್ಪimpress ಹಾಗು ಸ್ವಲ್ಪ hurt ಆದ ಹಾಗೆ ಆದ್ರೂ ಸಹ ಮುಂದುವರಿಸಿದ ರಾಹುಲ್ ” ಹೌದು, ಸಾಗರೀಕ to certain extent i  agree with your point, but two wheeler ಹಾಗು four wheeler market ನ dynamics is entirely different .
ನಾವು revolution start  ಮಾಡಣ ಅಂತ ಒಂದು ಹೊಸ model ನ from scratchಶುರು ಮಾಡಿ market ಗೆ ತರೊದು, dont think its wise, and also it takes a toll on company`s finance.”

“Instead what i suggest is ನಮ್ಮ ಎರಡು existing model ಗಳನ್ನ current technology base  ಮೇಲೆ remodel or repackage ಮಾಡಣ, ಅದೇ better ಅಂತ ಅನ್ಸುತ್ತೆ. ಯಾವುದೆ ಮನುಷ್ಯನಾಗಲಿ ಅಥವಾ product ,ಆಗಲಿ it should reinvent itself periodically, ಇಲ್ಲದಿದ್ರೆ, ಜನ ಒಂದೆ ತರಹದ್ದರಿಂದ ಬೋರ್ ಆಗಿ ಬಿಡುತ್ತಾರೆ”.

“ಎಷ್ಟ್ಟುlove ಮಾಡಿ ಮದುವೆ ಆಗಿದ್ರೂ ಸ್ವಲ್ಪ ವರ್ಷಗಳ ನಂತರ ಅದೇ predictable ಗಂಡ/ ಹೆಂಡತಿ ಒಬ್ಬರಿಗೊಬ್ಬರು bore ಅನ್ಸೋಕೆ ಶುರುವಾಗುವ chances ಇರುತ್ತೆ. ಅದಕ್ಕೆ, ಸಂಬಂಧಗಳಲ್ಲಾಗಲಿ ಅಥವಾ product ಗಳಲ್ಲಾಗಲಿ ಕಾಲಕಾಲಕ್ಕೆ, ಸ್ವಲ್ಪವಾದರು reinvention ಆಗ್ತಿರಬೇಕು. ಆವಾಗೆ charm ಇರೋದು ಏನಂತಿರಾ?” ಅಂತ ಕಣ್ಣು ಮಿಟುಕಿಸಿದ ರಾಹುಲ್.

closed door meeting ಮುಂದುವರಿಯುತ್ತಲೇ ಇತ್ತು. ನಾಲ್ಕನೇ ಮಹಡಿಯ ರಾಹುಲ್ ನ ಕೋಣೆ ಯಲ್ಲಿ ಅವನು meeting ಮುಗಿಸ್ಕೊಂಡು ಬರೋದುನ್ನ ಕಾಯ್ತಾ ಕುಳಿತಿದ್ದವಳು ಮಿತಾಲಿ. ಅವಳ ತಲೆ  IIT ಯ ಆ ದಿನಗಳನ್ನು ಹುಡುಕುತ್ತಾ ಹೊರಟುಬಿಟ್ಟಿದ್ದವು.

ಪ್ರಥಮ ವರ್ಷದ engineering ಓದುತಿದ್ದಾಗ ಮಿತಾಲಿ, ಇಡೀ campus ನಲ್ಲಿ ಬಹಳ ಪ್ರಸಿದ್ದವಾಗಿದ್ದವನು , Electronics department ನಲ್ಲಿ ಕೊನೆಯ ವರ್ಷದ M-Tech ಮಾಡ್ತ ಇದ್ದ ರಾಹುಲ್ . ಇವರಿಬ್ಬರ ಪರಿಚಯ ಹಾಗು ಸ್ನೇಹ ಆಕಸ್ಮಿಕ ವೇನಲ್ಲ.

Academic life ಪೂರ್ತಿ remote sensing technology ,3-G mobile technology ಗಳ ಅಗಾಧ ಸಾಧ್ಯತೆ ಗಳ ಬಗ್ಗೆ ಮಾತನಾಡಿ ಕೊಂಡು ತಿರುಗುತ್ತಿದ್ದ. ಆದರೆ Campus recruitment season ಪ್ರಾರಂಭ ವಾದಾಗ, Department ನ ಪ್ರತಿಯೊಬ್ಬರು electronics, software, telecom ಕಂಪನಿಗಳ ಕದ ತಟ್ಟಿದರೆ, ಇವನು ಮಾತ್ರ ಅಮೇರಿಕಾದ ಯಾವುದೊ ಒಂದು ಸಣ್ಣ 10 ಬಿಲಿಯನ್ ಡಾಲರ್ fund manage ಮಾಡುತಿದ್ದ ಒಂದು Hedge Fund ಗೆ ಹೋಗಿ ಕೆಲಸಕ್ಕೆ ಸೇರಿಕೊಂಡ.

“ಯಾಕೋ” ಅಂತ ಕೇಳಿದಕ್ಕೆ,” ದೊಡ್ಡ electronic equipment ನ ಭಾಗವಾಗಿ ಸಣ್ಣ ಸಣ್ಣ  IC ಗಳು ಕೆಲಸ ಮಾಡುವ ವಿಧಾನಕ್ಕೂ ಹಾಗು Portfolio management ಹಾಗು efficient portfolio theory ಗೂ ಸಾಕಷ್ಟ್ಟು ಸಾಮ್ಯತೆ ಇದೆ ಅಂತ ನಾನು ಅವರನ್ನ convince ಮಾಡಿದೆ “ಅಂತ ಹೇಳಿದ್ದ. ಮೊದಲಿನಿಂದಲು change management ನನ್ನ favourite subject ಅಂತ ಹೇಳ್ತಿದ್ದ, one should keep on reinventing oneself , ಅಂತ ಹೇಳ್ತಾನೇ career ಪ್ರಾರಂಭ ಮಾಡಿದ್ದ.

ಎರಡು ವರ್ಷಕ್ಕೆಲ್ಲಾ stocks, bonds, derivatives ಗಳ ಪ್ರಪಂಚದಿಂದ ರೋಸಿ ಹೋಗಿ management education puruse ಮಾಡ್ಥಿನಿ ಅಂತ London school of Business join ಆಗೇ ಬಿಟ್ಟ.
ಅಲ್ಲಿ ಅವನು ಓದಿದ್ದು Marketing management and Operations research.

ಎಷ್ಟ್ಟೋ ಸರ್ತಿ ಮಿತಾಲಿ ಗೆ, ಅವನ ಬದುಕಿನಲ್ಲಿ ಆಗುತ್ತಾ ಇರುವ ಬದಲಾವಣೆಗಳು, ಬದಲಾಯಿಸುತ್ತಿರುವ ಅವನ ದ್ರಿಷ್ಟಿ ಕೋನಗಳು, ಭಯ ಹುಟ್ಟಿಸುತಿತ್ತು. ಬಹಳ ಬುದ್ಧಿವಂತರಾದವರು, pervert ಗಳಾಗಿ terrorism ಅಥವಾ naxalism ಅಂತಾನೊ ತಿರುಗುವಂತಹ ಸಾಧ್ಯತೆಗಳ ಬಗ್ಗೆ ಅವಳಿಗೆ ಹೆದರಿಕೆಯಿತ್ತು.
ಆದರೆ ವರ್ಷಗಳು ಕಳೆದರು ಸಹಾ ಅವನ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಗಳಾದರೂ ಕೂಡ, change ಆಗದೇ ಉಳಿದಿದ್ದವಳೆಂದರೆ ಮಿತಾಲಿ ಮಾತ್ರ. ಇಬ್ಬರು ಮದುವೆ ಆಗ ಬೇಕೆಂದು decide ಸಹಾ ಮಾಡಿದ್ದರು.

“ನಿನ್ನ change management theory, One should keep on reinventing oneself   ಅನ್ನುವ philosphy  ಗಳಿಗೂ ಹಾಗು ನನಗೂ ತುಂಬಾನೆ ದೂರ, ನಾನು ಹೇಗಿದ್ದಿನೊ ಹಾಗೆ ಇದ್ದಿನಿ, ನಿನ್ನಷ್ಟ್ಟು ಓದು ಇಲ್ಲ, ಅನುಭವ ಇಲ್ಲ, ಆದರೂ ನನ್ನ ಕಂಡ್ರೆ ನಿನಗೆ ಯಾಕೆ ಬಿಟ್ಟಿರಲಾರದ ನಂಟು?” ಅಂತ ಅವನನ್ನು ಕೇಳಿದ್ದಳು.  

” ಏನೆಲ್ಲಾ ಓದುವುದು, ಬರಿಯುವುದು, ಯಾವುದೇ ವಿಚಾರವನ್ನು ಸಮರ್ಥಿಸುವುದು, ತೆಗಳುವುದು, ಇದೇ ಸರಿ, ಅದೇ ತಪ್ಪು ಅಂತ ವಾದಿಸುವುದು ಇದೆಯಲ್ಲಾ ಇವೆಲ್ಲಾ ಬೌದ್ದಿಕ ಕಸರತ್ತು ಗಳಷ್ಟ್ಟೆ. ಮನುಷ್ಯನಲ್ಲಿ ಸಹಜ ವಾಗಿರುವುದೆಂದರೆ, ಕುತೂಹಲ, ಭಯ, ಕಾಮ, ಆಸೆ, ಅಸೂಯೆ, ಅಹಂಕಾರ, ಇಷ್ಟ್ಟೆ. ಇವೆಲ್ಲವನ್ನು ಅದರದರ ಮಿತಿಯಲ್ಲಿ ಇಟ್ಟುಕೊಂಡು, ಸಹಜವಾಗಿ ಸರಳವಾಗಿ ಜೀವನವನ್ನು ನೋಡುವ ಹಾಗು ಎದುರಿಸುವ ನಿನ್ನ ಆ consistency ನನಗೆ ಇಷ್ಟ್ಟವಾಗುತ್ತದೆ. i like that” ಅಂತ ಅವನು usual philospher style ನಲ್ಲಿ ಹೇಳಿದ್ದ.

ಬಾಗಿಲು ತೆರೆದ ಸದ್ದಾಯಿತು, ಮಿತಾಲಿ ತಿರುಗಿ ನೋಡಿದಳು, ಸದಾ one should keep on reinventing  oneself ಅನ್ನುವ ಮಂತ್ರ ಪಠಿಸುತಿದ್ದ ರಾಹುಲ್ ತನ್ನ usual style ಆದ french beard ಬೋಳಿಸಿದ್ದ, ನೀಟಾಗಿ chacolate hero ತರಹ ಹೊಳೆಯುತ್ತ, ಒಳಗೆ ಬಂದ.