ಹರ್ಷದ್ ಮೆಹ್ತ- ಒಂದು ನೆನಪು December 31, 2008
Posted by nsworld in Business and Economy.add a comment
ಈ ಡಿಸೆಂಬರ್ 31 ಕ್ಕೆ ಹರ್ಷದ್ ಮೆಹ್ತ ಕೊನೆಯುಸಿರೆಳೆದು ಏಳು ವರ್ಷಗಳಾಗುತ್ತದೆ ಎನ್ನುವುದನ್ನು ಬಿಟ್ಟರೆ, ಹರ್ಷದ್ ಮೆಹ್ತನನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ಕಾರಣಗಳೆನಿಲ್ಲ. 15,000 ಚ. ಅಡಿಯಷ್ಟು ದೊಡ್ಡದಾದ ಐಷಾರಾಮಿ ಬಂಗಲೆ ಯಲ್ಲಿ ಒಂದು ಕಾಲದಲ್ಲಿ ಜೀವಿಸುತಿದ್ದ, ಹತ್ತಾರು ವಿದೇಶಿ ಕಾರುಗಳ ಒಡೆಯನಾಗಿದ್ದ, ಸುಮಾರು ಒಂದು ವರೆ ದಶಕಗಳ ಕಾಲ, ಮಾರುಕಟ್ಟೆ ವಲಯದಲ್ಲಿ ` ಬಿಗ್ ಬುಲ್“ ಎಂದೇ ಖ್ಯಾತನಾಗಿದ್ದ `Growmore Research and Asset Management `ನ ಒಡೆಯ ಹರ್ಷದ್ ಶಾಂತಿಲಾಲ್ ಮೆಹ್ತ, ನ್ಯಾಯಾಂಗ ಬಂಧನದಲ್ಲಿದ್ದ (ಥಾನೆ ಕಾರಾಗೃಹದಲ್ಲಿ) ಸಮಯದಲ್ಲಿ ಹೃದಯಾಘಾತ ಕ್ಕೊಳಗಾಗಿ, ಮುಂಬಯಿ ಯ ಸಿವಿಲ್ ಹಾಸ್ಪಿಟಲ್ ಒಂದರಲ್ಲಿ , ನಿರ್ಗತಿಕನೊಬ್ಬನಂತೆ ತನ್ನ ಕೊನೆಯುಸಿರೆಳೆದನು. ಅವನ ಸಾವು ಸಹಜವಾದದ್ದೇ? ಅಥವಾ, ಈ ಹಗರಣ ವೆಂಬ ವಿಷವರ್ತುಲದಲ್ಲಿ, ಇವನ ಜೊತೆಗಿದ್ದ ಅಥವಾ ಇದ್ದಿರ ಬಹುದಾದ ಮತ್ಯಾವುದೋ ಕಾಣದ ಕೈಯಿನ ಕೈವಾಡವಿತ್ತೇ ಎಂಬ ಮಾತುಗಳು ಇಂದಿಗೂ ಅಲ್ಲಲ್ಲಿ ಕೇಳಿಬರುತ್ತದೆ.
ಕೆಳ ಮಧ್ಯಮ ವರ್ಗದ ಗುಜರಾತಿ ಜೈನ್ ಕುಟಂಬದಲ್ಲಿ ಜನಿಸಿ, ಮುಂದೊಂದು ದಿವಸ ಭಾರತದ ಪ್ರಪ್ರಥಮ Star Stock broker ಆಗಿ ಪರಿವರ್ತನೆಗೊಂಡ, ವಾಣಿಜ್ಯ ಶಾಸ್ತ್ರದ ಪದವಿಧರ ಹರ್ಷದ್, ಬಹಳಷ್ಟ್ತು ಮಹತ್ವಾಕಾಂಕ್ಷಿ ಯಾಗಿದ್ದವನು. ” ನಾನು ಕನಸುಗಳ ನ್ನು ಮಾರುತ್ತೇನೆ, ಸಿರಿವಂತನಾಗುವುದು, ಪಾಪವಲ್ಲ, ನೀವು ಹರ್ಷದ್ ಮೆಹ್ತ ನಾಗಲೂ ಬಯಸುತ್ತಿರಾದರೆ, ಶೇರು ಮಾರುಕಟ್ಟೆ ಗೆ ಬನ್ನಿ” ಎಂದು ಸದಾ ಹೇಳುತ್ತಿದ್ದನು.
90 ರ ದಶಕದಲ್ಲಿ ಅವನೆಷ್ಟ್ತು ಪ್ರಸಿದ್ದ್ದನು ಹಾಗೂ ಆರಾಧ್ಯನಾಗಿದ್ದಾನೆಂದರೆ, ಅವನನ್ನೇ ಅನುಸರಿಸುವ ಹೂಡಿಕೆದಾರರ ಒಂದು ದೊಡ್ಡ ಗುಂಪೇ ಇತ್ತು.92ರಲ್ಲಿ ಪ್ರಥಮ ಬಾರಿಗೆ ಈ ಹಗರಣ, ಬೆಳಕಿಗೆ ಬಂದು, 107 ದಿನಗಳ ಬಂಧನದ ನಂತರ ಜಾಮಿನಿನ ಮೇಲೆ ಹೊರಬಂದ ಹರ್ಷದ್ ನನ್ನು ಕೋರ್ಟ್ ನ ಹೊರಗೆ ಸ್ವಾಗತಿಸುವುದಕ್ಕೆ, ಘೋಷಣೆಗಳನ್ನು ಕೂಗುತ್ತಾ, ಹೂಡಿಕೆದಾರರ ಒಂದು ದೊಡ್ಡ ಗುಂಪೇ ನೆರದಿತ್ತು. ಹರ್ಷದ್ ಮಾರುಕಟ್ಟೆಗೆ ಮರಳಿ ಬಂದರೆ ಮತ್ತೆ ಮಾರುಕಟ್ಟೆ ಮೇಲಕ್ಕೇರುತ್ತದೆಂಬ ಅಚಲ ನಂಬಿಕೆ ಅನೇಕ ಹೂಡಿಕೆದಾರರಲ್ಲಿತ್ತು.
1990 ರ ಸುಮಾರಿಗೆ ACC ಕಂಪನಿಯ ಶೇರೊಂದಕ್ಕೆ 10,000ರೂಪಾಯಿ ಗಳಿದ್ದ ಸಮಯದಲ್ಲೂ ಸಹ, ಹರ್ಷದ್ ತನಗಿಷ್ಟ್ಟವಾದ Replacement cost Theory ಯನ್ನು ಸದಾ ಉದಾಹರಿಸುತ್ತಾ, ” ಉತ್ತಮ ಹಾಗೂ ಹಳೆಯ ಕಂಪನಿಯ ಶೇರು ಗಳನ್ನು Replacement cost Theory ಆಧಾರದ ಮೇಲೆ value ಮಾಡ ಬೇಕು” ಎನ್ನುತ್ತಿದ್ದನು( Replacement cost Theory ಯು ಹಳೆಯ ಹಾಗೂ ಒಳ್ಳೆಯ ಕಂಪನಿಗಳನ್ನು, ಅದೇ ರೀತಿಯ ಮತ್ತೊಂದರ ಸ್ಥಾಪನೆಗೆ, ಎಷ್ಟ್ತು ಹಣ ಬೇಕಾಗುತ್ತದೆ, ಎಂಬ ಸರಳ ನಿಯಮದ ಆಧಾರದ ಮೇಲೆ value ಮಾಡಬೇಕೆನ್ನುತ್ತದೆ)
ಸ್ವತಂತ್ರ ಭಾರತದಲ್ಲಿ ನಡೆದ ಪ್ರತಿಯೊಂದು ಶೇರು ಮಾರುಕಟ್ಟೆ ಹಗರಣವು ಸಹ, ನಮ್ಮ ಆರ್ಥಿಕ/ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿದೆ. ಹರ್ಷದ್ ಮೆಹ್ತ ಹಾಗೂ ಅವನ ಸಂಗಡಿಗರು ಸಹ, ಬ್ಯಾಂಕಿಂಗ್ ನ RF (Ready forwards) ಹಾಗೂ BR (Bankers receipt) ವ್ಯವಸ್ಥೆಯಲ್ಲಿದ್ದ ಲೋಪದೋಷವನ್ನುಪಯೋಗಿಸಿಕೊಂಡು, ತಮ್ಮ ಶೇರು ಮಾರುಕಟ್ಟೆ ವ್ಯವಹಾರಕ್ಕೆ ಬೇಕಾದ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಪಡೆಯುತ್ತಿದ್ದರು, ಅದನ್ನು ಮಾರುಕಟ್ಟೆಯಲ್ಲಿ ತೊಡಗಿಸುತಿದ್ದರು, ಇದರಿಂದ ಅವರು ಮುಟ್ಟಿದ ಶೇರು ಗಳೆಲ್ಲಾ ಗಗನದೆತ್ತರಕ್ಕೆ ಏರಿದವು.
1992ರಲ್ಲಿ ಹಗರಣ ಬೆಳಕಿಗೆ ಬಂದ ಮೇಲೂ ಸಹ ಪ್ರತಿ ಹಂತದಲ್ಲೂ ಅವನು, ತನ್ನ ಮೇಲಿದ್ದ ಕೇಸುಗಳನೆಲ್ಲ ಗೆದ್ದು, ಮರಳಿ ಬರುವ ಯತ್ನ ಮಾಡುತ್ತಲೇ ಇದ್ದ. 97 ರ ಸುಮಾರಿಗೂ ಸಹ Times of India ಸೇರಿದಂತೆ, ಅನೇಕ ದೊಡ್ಡ ಆಂಗ್ಲ ದೈನಿಕಗಳು, ಹರ್ಷದ್ ಮೆಹ್ತ ನ ಕಾಲಂ ತಮ್ಮ ಪೇಪರ್ ನ ಪ್ರಸಾರವನ್ನು ಹೆಚ್ಚಿಸುತ್ತವೆ ಎಂದು ಬಲವಾಗಿ ನಂಬಿದ್ದವು. ಸಾಧಾರಣ ಕುಟುಂಬದಲ್ಲಿ ಜನಿಸಿ, ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಹು ಬೇಗ ಎತ್ತರಕ್ಕೇರಿದ ಹರ್ಷದ್ ಮೆಹ್ತ, ಒಂದು ರೀತಿಯಲ್ಲಿ White Tiger ನಲ್ಲಿ ಬರುವ ಬಲರಾಮ್ ಹಲ್ವಾಯಿಯೆ!!.
ಇದುವರೆಗೂ, ಹರ್ಷದ್ ಮೆಹ್ತ ನಿಂದಾದ ಶೇರು ಮಾರುಕಟ್ಟೆ ಹಗರಣದ ರೂಪಾಯಿ ಪ್ರಮಾಣವೆಷ್ಟ್ಟೆಂಬುದು, ನಿಖರವಾಗಿ ತಿಳಿದಿಲ್ಲ ವಾದರೂ, ಬ್ಯಾಂಕುಗಳಿಗಾದ ಮೋಸ, ಶೇರು ಬೆಲೆಯಲ್ಲಿನ ವ್ಯತ್ಯಯಗಳನ್ನು, ಅಂದಾಜಿಸಿ ಸುಮಾರು 4000 ಕೊಟಿ ಗಳೆಂದು ಹೇಳಲಾಗುತ್ತದೆ. (“The great Indian scam story of missing 4000 crores” – Samir K Barua and Jayanth R Varma)ಹರ್ಷದ್ ಮೆಹ್ತ ನ ಮೇಲೆ CBI ಸುಮಾರು 72 ಕ್ರಿಮಿನಲ್ ಕೇಸು ಗಳನ್ನು ದಾಖಲಿಸಿತ್ತು. ಇದರ ಜೊತೆ ಸುಮಾರು 600 ಸಿವಿಲ್ ದಾವೆಗಳು ನಡೆಯುತ್ತಿದ್ದವು. ಅವನ ಕೊನೆಯ ದಿನದ ವರೆಗೆ ಲೆಕ್ಕ ಹಾಕಿದರೆ , ಕೇವಲ ನಾಲ್ಕು ಕೇಸುಗಳಲ್ಲಿ ಮಾತ್ರ ಅವನು convict ಆಗಿದ್ದ.
92 ರಲ್ಲಿ ಈ ಪ್ರಕರಣವನ್ನು ಬಯಲಿಗೆಳೆದ, ಹಾಗೂ ಇದರ ಬಗ್ಗೆ ಒಂದು ಧೀರ್ಘವಾದ, ಅನೇಕ ವರ್ಷಗಳ ಕಾಲ best seller ಆಗಿದ್ದ ಪುಸ್ತಕ `The Scam` ಬರೆದ ಪತ್ರಕರ್ತೆ ` ಸುಚೆತ ದಲಾಲ್`` ,ಹರ್ಷದ್ ಮೆಹ್ತ ನ ನಿಧನ ದ ನಂತರ ತಮ್ಮ ಅಂಕಣವೊಂದರಲ್ಲಿ ಹೀಗೆ ಬರೆಯುತ್ತಾರೆ.
Book Talk: Stay Hungry… December 16, 2008
Posted by nsworld in Books/Literature.add a comment
ಹಾರ್ಲಿಕ್ಸ್ ನಂತಹ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೂ ಸಹ ಪ್ರತಿ ಹದಿನೈದು ದಿನಕ್ಕೊಮ್ಮೆ , ‘ಬಿಸ್ನೆಸ್ ಇಂಡಿಯಾ’ ದ ಕೊನೆಯ ಪುಟಗಳನ್ನು ಬೇರೆ ಬೇರೆಯ ಕಡೆ ಇರಬಹುದಾದ ಕೆಲಸಗಳಿಗಾಗಿ ನೋಡುತ್ತಾರೆ ಎಂದರೆ, ‘ಕೆಲಸ ಹುಡುಕುವ ಕೆಲಸ, ಕೇವಲ ಕೆಲಸ ಇಲ್ಲದವರಿಗೆ ಮಾತ್ರವಲ್ಲ, you may not be looking FOR a job, but you would look AT a job’. ‘ಕೆಲಸವೇ ಇಲ್ಲದ ಅನೇಕ ಲಕ್ಷ ಜನ ಪ್ರತಿ ದಿನ ನೌಕರಿಗಾಗಿ ಎಲ್ಲೆಲ್ಲಿ ನೋಡ್ತಾ ಇರಬಹುದು? ಇವರಿಗೆಲ್ಲಾ ಒಂದೇ ಕಡೆ ಸಾವಿರಾರು ಕೆಲಸಗಳ ಬಗ್ಗೆ ಮಾಹಿತಿ ಸಿಗೋ ಹಾಗಾದ್ರೆ ಎಷ್ಟು ಚೆನ್ನಾಗಿರುತ್ತೆ? ಹಾಗೂ ಇದೊಂದು ಒಳ್ಳೆಯ ಬಿಸ್ನೆಸ್ ಐಡಿಯಾನೂ ಸಹ ಆಗಬಹುದಲ್ಲ ?’ ಹೀಗೆ ಒಂದೇ ಸಮಯದಲ್ಲಿ, ಹಾರ್ಲಿಕ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತಿದ್ದ ‘ಸಂಜೀವ್ ಬಿಕ್ಚಂದಾನಿ’ಯ ತಲೆ ಅನೇಕ ದಿಕ್ಕು ಗಳಲ್ಲಿ ಓಡುತಿತ್ತು.
ಯಾವತ್ತೋ ಒಂದು ದಿವಸ ಫ್ಲ್ಯಾಶ್ ಆದ ಐಡಿಯಾ ಸಂಜೀವ್ ನ ತಲೆಯಲ್ಲಿ ಕಾರ್ಯರೂಪಕ್ಕೆ ತರುವಷ್ಟುಮಟ್ಟಿಗೆ ಬಹಳ ದಿವಸಗಳ ಕಾಲ ಬೆಳೆಯಲೇ ಇಲ್ಲ. ಒಂದು ದೊಡ್ಡ ‘ಡ್ಯಾಟ ಬೇಸ್’ ಮಾಡಬಹುದು ಸರಿ, ಆದರೆ ಅದನ್ನ ಸಾವಿರಾರು ಜನಕ್ಕೆ ತಲುಪಿಸುವ ಮಾಧ್ಯಮ ಯಾವುದು?, ಇದರಿಂದ ಹಣ ಗಳಿಸಲಿಕ್ಕೂ ಸಾಧ್ಯವಾ ಎಂಬ ಪ್ರಶ್ನೆಗಳು ಹಾಗೆಯೇ ಉಳಿದವು. ೯೦ ರ ದಶಕದ ಮಧ್ಯ ಭಾಗದಲ್ಲಿ, ಇದೇ ತರಹದ ನೂರೆಂಟು ಯೋಚನೆಗಳನ್ನೂ ತಲೆಯಲ್ಲಿಟ್ಟು ಕೊಂಡು ದೆಹಲಿ ಯ ಪ್ರಗತಿ ಮೈದಾನದಲ್ಲಿ IT ASIA ಎಂಬ ಪ್ರದರ್ಶನದಲ್ಲಿ ಹೆಜ್ಜೆ ಹಾಕುತಿದ್ದ , ಸಂಜೀವ್ ಗೆ , ಅಲ್ಲಿದ್ದ VSNL ನವರ ಸ್ಟಾಲ್ ನಿಂದ ಭಾರತಕ್ಕೆ ಆಗಿನ್ನೂ ಕಾಲಿಟ್ಟಿದ್ದ ‘ಇಂಟರ್‌ನೆಟ್’ ಹಾಗೂ ‘ವೆಬ್ ಸೈಟ್ ’ ಎಂಬ ಹೊಸ ಬೆಳವಣಿಗೆಗಳ ಬಗ್ಗೆ ಗೊತ್ತಾಯಿತು. ಬಹುಶಃ ಸಂಜೀವ್ ನ ಜೀವನದ ‘ಯುರೇಕ ಮೊಮೆಂಟ್ ’ ಅವನಿಗಾಗಿ ಅಲ್ಲಿ ಕಾಯುತಿತ್ತು.
‘ಸಧ್ಯಕ್ಕೆ ನಿನ್ನ ಸಂಬಳದಲ್ಲಿ ಜೀವನ ನಡೆಸುವ ಗಂಡನಾಗ್ತಿನಿ ನಾನು’ ಎಂದು ಹೇಳಿ ನೌಕರಿಗೆ ವಿದಾಯ ಹೇಳಿ ತಮ್ಮ ಮನೆಯ ಔಟ್ ಹೌಸ್ ನಲ್ಲಿ ಪ್ರಾರಂಭ ಮಾಡಿದ, INFO EDGE ಮುಂದೆ ಅನೇಕ ಕಷ್ಟ ಕೋಟಲೆಗಳನ್ನೆದುರಿಸಿ, ಡಾಟ್ ಕಾಮ್ ಮೆಲ್ಟ್‌ಡೌನ್ ನಿಂದಲೂ ಪಾರಾಗಿ, ಒಂದು ದಿನ ಸುಮಾರು ವಾರ್ಷಿಕ 240 ಕೋಟಿಗೂ ಮೀರಿದ ಆದಾಯವುಳ್ಳ(2500 ಕೋಟಿಗೂ ಮೀರಿದ ಮಾರ್ಕೆಟ್ ಕ್ಯಾಪಿಟಲೈಸೇಶನ್), ನೌಕರಿ.ಕಾಮ್ (Naukari.com)ಎಂಬ ಕಂಪನಿಯಾಗಿ ಬೆಳೆದು ನಿಂತ ಕಥೆ ನಿಜವಾಗಿಯೂ ಕುತೂಹಲಕಾರಿಯೇ.
ಒಂದು ಡಾಟ್ ಕಾಮ್ ಕಂಪನಿಯಾಗಿ ಪ್ರಾರಂಭವಾಗಿ ಆರು ತಿಂಗಳಾದರೂ ಸಹ INFO EDGE ನ ಕಛೇರಿಯಲ್ಲಿ ಇಂಟರ್‌ನೆಟ್ ಸಂಪರ್ಕವೇ ಇಲ್ಲದಿದ್ದದ್ದು, ಹಾಗೂ ೨೦೦೦ ನೇ ಇಸ್ವಿಯ ಹೊತ್ತಿಗೆ ಕೇವಲ ೩೬ ಲಕ್ಷ ವಹಿವಾಟಿದ್ದ ಈ ಕಂಪನಿಯನ್ನು ICICI Ventures, ೪೫ ಕೋಟಿಗೂ ಮೀರಿ value ಮಾಡಿದ್ದು, ಹೀಗೆ ಇನ್ನೂ ಅನೇಕ ಹುಬ್ಬೆರಿಸುವಂತಹ ವಿಷಯಗಳಿವೆ ಇಲ್ಲಿ.
ಇದೊಂದೇ ಅಲ್ಲ, ಇದೇ ತರಹದ ಅಥವಾ ಇನ್ನೂ ಕುತೂಹಲಕಾರಿಯಾದ SINTEX, MPHASIS, MAKEMYTRIP.COM ಸೇರಿದಂತೆ ಒಟ್ಟು ಇಪ್ಪತ್ತೈದು motivating ಆಗಿರತಕ್ಕಂತಹ, ಜೀವನ ಪೂರ್ತಿ ಮಲ್ಟಿನ್ಯಾಶನಲ್ ಗಳ ಹಂಗಿನ ನೌಕರಿಗೆ ಬೀಳದೇ, ತಮ್ಮ ಕನಸುಗಳನ್ನು ನನಸು ಮಾಡುವ ಗುರಿಯನ್ನಿಟ್ಟುಕೊಂಡು ಕಡಿಮೆ ಜನರು ನಡೆದ ಹಾದಿಯಲ್ಲಿ ನಡೆದು ಅತ್ಯುತ್ತಮ ಭಾರತೀಯ ಹಾಗೂ ಭಾರತೀಯ ಮಲ್ಟಿನ್ಯಾಶನಲ್ ಕಂಪನಿಗಳನ್ನು ಕಟ್ಟಿ ಬೆಳಸಿದ ಇಪ್ಪತ್ತೈದು IIM ಅಹ್ಮದಾಬಾದ್ ನ ಹಳೆಯ ವಿಧ್ಯಾರ್ಥಿಗಳ ರೋಚಕ ಕಥೆ ರಶ್ಮಿ ಬನ್ಸಾಲ್ ರವರ ಇತ್ತೀಚಿನ ಪುಸ್ತಕ ‘STAY HUNGRY STAY FOOLISH’.
‘ಗ್ಯಾರೇಜ್ ಒಂದರಲ್ಲಿ ಪ್ರಾರಂಭವಾಗಿ, ಮುಂದೆ ವಿಶ್ವ ವಿಖ್ಯಾತ ಕಂಪನಿಯ ಯಾಯಿತೆಂದು’ ಸರಳವಾಗಿ ಸಿನಿಮೀಯ ಮಾದರಿಯಲ್ಲಾಗಲಿ ಅಥವಾ ಕಂಪನಿಗಳು ಬೆಳೆದು ಬಂದ ಹಾದಿಯನ್ನು ‘ಕೇಸ್ ಸ್ಟಡೀ’ ಯ ತರಹ ಅಂಕಿ ಅಂಶಗಳಿಂದಾಗಲಿ ರಶ್ಮಿ ತುಂಬಿಸಿಲ್ಲ. ಒಂದು ಕಥೆಯಲ್ಲಿರಬಹುದಾದ ರೋಚಕತೆಯನ್ನು ಹಾಗೂ ಪ್ರತಿಯೊಂದು ಕಂಪನಿಯೂ ತನ್ನ ಹಾದಿಯಲ್ಲಿ ಎದುರಿಸಿದ ಸವಾಲುಗಳನ್ನು ನೈಜವಾಗಿ ಚಿತ್ರಿಸುತ್ತಾ ಸಾಗುತ್ತಾರೆ ಬನ್ಸಾಲ್. ಇದು ಕೇವಲ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆನ್ನುವ ಆಕಾಂಕ್ಷಿಗಳಿಗೆ ಹಾಗೂ ಮ್ಯಾನೇಜ್ಮೆಂಟ್ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾದ ಪುಸ್ತಕವಲ್ಲ. ಒಬ್ಬ ಸಾಮಾನ್ಯ ಓದುಗನು ಸಹ ಆಸಕ್ತಿಯಿಂದ ಓದಬಹುದಾದ Value for your money ಪುಸ್ತಕ ಇದು.
December 6ರ ಲಹರಿ December 7, 2008
Posted by nsworld in ಮನಸಿನ ಪುಟಗಳು.add a comment
ಇವತ್ತಿಗೂ ಅಮ್ಮನ ಪ್ರಕಾರ ನನ್ನ ಹುಟ್ಟಿದ ಹಬ್ಬವೆಂದರೆ ಕಾರ್ತಿಕ ಬಹುಳ ದಶಮಿ ಯ ದಿನವೇ. ಡಿಸೆಂಬರ್ ೬ ಏನಿದ್ದರೂ ನನಗೆ, ನನ್ನ ಕೆಲವು ಮಿತ್ರರಿಗೆ ಹಾಗೂ ಅಫೀಶಿಯಲ್ ರೆಕಾರ್ಡ್ಸ್ ಗಳಿಗೆ ಸೀಮಿತವಾದದ್ದು. ನಿನ್ನೆ ನನಗೆ ಫೋನ್ ಮಾಡಿದ ಪರಿಚಯದವರೆಲ್ಲಾ, ” ಹುಷಾರಪ್ಪ, ಅಲ್ಲಿ ಇಲ್ಲಿ ಅಂತ ಹೋಗಬೇಡ. ದೊಡ್ಡ ದೊಡ್ಡ ಹೊಟೆಲ್ ಗಳು, ಮಾಲ್ ಗಳು, ಏರ್ ಟ್ರಾವೆಲ್ ಅಂತೂ ಖಂಡಿತಾ ಬೇಡ” ಅಂತಾನೆ ಹೇಳಿದ್ರು. ಇಲ್ಲಪ್ಪ ನನ್ನ ಜನ್ಮದಲ್ಲಿ ಇದುವರೆಗೂ ಬರ್ತ್‌ಡೇ ಅಂತೆಲ್ಲಾ ಆಚರಿಸಿಕೊಂಡವನೆ ಅಲ್ಲ, ನಾನೇನಿದ್ದರು ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ ಮಾಡಕ್ಕೆ ಮೈಸೂರು ಗೆ ಹೋಗ್ತೀನಿ ಅಂತ ಹೇಳಿದೆ.
ಹೋದ ವರ್ಷ ಇದೆ ಸಮಯದಲ್ಲಿ ಅಹ್ಮದಾಬಾದ್ ಗೆ ಹೊರಟಾಗ, “ಡಿಸೆಂಬರ್ ೬, ಗುಜರಾತ್ ಗೆ ಅದು ಅಲ್ಲಿ ಎಲೆಕ್ಶನ್ ಟೈಮ್ , ಜೊತೆಗೆ ಏರ್ ಟ್ರಾವೆಲ್, ಬೇಡ ಅಂದ್ರೆ ಕೇಳ್ತಿಯ? ನೀ ಯಾವತ್ತು ನಮ್ಮ ಮಾತು ಕೇಳಿದ್ದೀಯ?” ಅಂತ ಹೇಳಿ ಮುಗಿಸಿದ್ರು ಹತ್ತಿರದವರೊಬ್ಬರು. ಡಿಸೆಂಬರ್ ೫ ನೇ ತಾರೀಖು ಸಂಜೆ ಏಳು ಗಂಟೆಗೆ ಹೊರಡ ಬೇಕಿದ್ದ ವಿಮಾನ, ಮೂರು ಗಂಟೆ ತಡವಾಗಿ ಕೊನೆಗೆ ಅಹ್ಮದಾಬಾದ್ ತಲುಪಿದಾಗ ರಾತ್ರಿ ೧೧:೪೫ ಆಗಿತ್ತು. ಬ್ಯಾಗೇಜ್ ಗೆ ಕಾಯುತ್ತಾ ನಿಂತಾಗ, ಅಲ್ಲಿ ಕಂಡಿದ್ದು ಎಲೆಕ್ಶನ್ ಕವರೇಜ್ ಗೆ ಅಂತ ಬಂದಿದ್ದ NDTV ಯ ಬರ್ಖಾದತ್ ಮತ್ತವಳ ತಂಡ. ಫೋನ್ ಸ್ವಿಚ್ ಆನ್ ಮಾಡಿದ ತಕ್ಷಣ, ಬೆಂಗಳೂರಿನಿಂದ ಕರೆ ಮಾಡಿದ ಗೆಳತಿ “ಮೆನೀ ಮೆನೀ………ಟೇಕ್ ಕೇರ್ “ಅಂತ ಹೇಳಿ ಮುಗಿಸಿದಳು ಜೀವನದಲ್ಲಿ ಸಾಧನೆ ಏನು ಮಾಡದಿದ್ರೂ ಸಹ, ಖಾಲಿ ಡೇಟ್ ಆಫ್ ಬರ್ತ್ ಇಂದ ಇದ್ದಕ್ಕಿದ್ದಂತೆ ನನ್ನ ಪರಿಚಯದವರ ನಡುವಿನಲ್ಲಿ ಪಾಪ್ಯುಲರ್ ಆಗಿಬಿಟ್ಟೇನಲ್ಲ ಅಂತ ಅನ್ನಿಸ್ತು.
ನಿನ್ನೆ ಕರೆಮಾಡಿದ ಕೊಲೀಗ್ ಒಬ್ಬರು ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದ, ಮದುವೆಗೆ ಇನ್ನೊಂದು ತಿಂಗಳು ಬಾಕಿಯಿದ್ದ ಅವರ ಮಿತ್ರ ಕೆಲಸ ಕಳೆದುಕೊಂಡಿದ್ದಾನೆ, ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಗಳ ಗ್ರಹಚಾರ ನೆಟ್ಟಗಿಲ್ಲದಿರುವ ಈ ಸಮಯದಲ್ಲಿ ತಕ್ಷಣ ಕೆಲಸ ಸಿಗುವುದು ಕಷ್ಟ್ಟ ಇದೆ, ಮನೆ ಸಾಲ ಬೇರೆ ಮಾಡಿದ್ದಾನೆ, ತಿಂಗಳಿಗೆ ಸುಮಾರು ನಲವತ್ತು ಸಾವಿರ ಕಂತು ಅಂತ ಹೇಳಿದರು. ನಾನು ಹೌಸಿಂಗ್ ಲೋನ್ ಮಾಡಕ್ಕೆ ಮನೇನೆ ಕಟ್ಟಿಲ್ಲ, ಹಾಗೂ ತಿಂಗಳಿಗೆ ಸುಮಾರು ನಲವತ್ತು ಸಾವಿರದಷ್ಟ್ತು ಹೌಸಿಂಗ್ ಲೋನ್ ಗೆ ಕಟ್ಟೋ ಅಷ್ಟ್ತು ಸಂಬಳ ನನಗೆ ಬರಲ್ಲ ಅನ್ನೋ ವಿಷಯ ಮೊದಲ ಬಾರಿಗೆ ಬೇಜಾರುಂಟು ಮಾಡಲಿಲ್ಲ.
ಹೋದ ವಾರ Alumni association ನ ಮೀಟಿಂಗ್ ನಲ್ಲಿ ಭೇಟಿ ಮಾಡಿದ್ದ ಖಾಸಗಿ ರೀಟೇಲ್ ಬ್ಯಾಂಕ್ ಒಂದರ Associate Vice president ಒಬ್ಬರು ಫೋನ್ ಮಾಡಿ, ನನ್ನ ಟೀಮ್ ನಲ್ಲಿ ನಿಮಗೆ ಕೆಲ್ಸಾ ಮಾಡಲು ಆಸಕ್ತಿ ಇದೆಯಾ ಅಂತ ಕೇಳಿದ್ರು. ” ತುಂಬಾ ಥ್ಯಾಂಕ್ಸ್ , ಸಧ್ಯಕ್ಕೆ ಬದಲಾವಣೆ ಯೋಚನೆ ಮಾಡ್ತಿಲ್ಲ, ಅದರ ಯೋಚನೆ ಬಂದಾಗ ನಿಮ್ಮನ್ನೇ, ಮೊದಲು ಭೇಟಿ ಮಾಡ್ತೀನಿ” ಅಂತ ಹೇಳಿ ಸುಮ್ಮನಾದೆ. ನಿಜ ಹೇಳಬೇಕಂದ್ರೆ, ಈ, laptop, spreadsheet, budgeting, forecast ಗಳ ಸಹವಾಸನೆ ಸಾಕಾಗಿ ಹೋಗಿದೆ. ಈ Travel and living channel ನಲ್ಲಿ ಬರತ್ತೆ ನೋಡಿ, ಕಂಡ ಕಂಡ ಕಡೆ ಗೊತ್ತು ಗುರಿ ಇಲ್ಲದೇ ಸುತ್ತಿಕೊಂಡು ಕಂಡ ಕಂಡ ಹೊಟೆಲ್ ನಲ್ಲಿ ತಿನ್ನುತ್ತಾ ಅದರ ಬಗ್ಗೆ ತಮ್ಮ ಒಪೀನಿಯನ್ ಕೊಡ್ತಾರಲ್ಲ, ಆ ತರಹದ ಕೆಲಸ ಮಾಡಬೇಕಂತ ಮನಸ್ಸಾಗ್ತಿದೆ. ನೋಡಣ ಮುಂದಿನ ಡಿಸೆಂಬರ್ ೬ ರ ಹೊತ್ತಿಗೆ ಅಲ್ಲ್ಲಲ್ಲ, ಕಾರ್ತಿಕ ಬಹುಳ ದಶಮಿಯ ಹೊತ್ತಿಗೆ ಏನಾಗಿರುತ್ತೆ ಅಂತ!!!!!!