ಅಯ್ಯೋ ಕಳೆದೇ ಹೋಗಿಬಿಟ್ಟಿತು, ಹತ್ತು ದಿನಗಳು. ಸುಮಾರು ಒಂದು ತಿಂಗಳು ಹಿಂದಿನಿಂದ ಹೊಡೆದಾಡಿ, ಸ್ಯಾಂಕ್ಶನ್ ಮಾಡಿಸಿಕೊಂಡಿದ್ದ ಹತ್ತು ದಿನಗಳ year end leave ಮುಗಿದೆ ಹೋಗಿದೆ. ೨೪ ಡಿಸೆಂಬರ್ ರಾತ್ರಿ ತಯಾರಿಸಿದ್ದ ಒಂದು ವರೆ ಮೊಳ ಉದ್ದದ `to do list` ನಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು `to do` ಗಳು ಟಿಕ್ ಆಗದೇ ಉಳಿದಿದೆ. ಆದರೆ ಕ್ಯಾಲಂಡರ್ ನಲ್ಲಿ ಹತ್ತು ದಿನಗಳು ಟಿಕ್ ಆಗೋಗಿದೆ. ನಿಜವಾಗ್ಲೂ ” ಜಿಪುಣ ಅಂದ್ರೆ ಜಿಪುಣ ಈ ಕಾಲ..” ಶಿವಮೊಗ್ಗ ದ ಕಡೆ ತಲೆ ಹಾಕಿ ಮೂರು ವರ್ಷಗಳು ಆಯ್ತು ಅನ್ನುವ record ಆಗಕ್ಕೆ ಬಿಡಬಾರದೆಂದು ಎಷ್ತ್ತೆ ಅಂದು ಕೊಂಡರೂ, ಆಗಲಿಲ್ಲ record ಆಗೇ ಹೋಯ್ತು.
ಈ ಹತ್ತು ದಿನಗಳ ಮಹತ್ಸಾಧನೆಯೆಂದರೆ ಸಂಪೂರ್ಣ ಐದು ದಿನಗಳನ್ನು ಮೈಸೂರಿನ ಮನೆಯಲ್ಲಿ ಕಳೆದದ್ದು. ನಂಜನಗೂಡು, ಕ್ಯಾಲಿಕಟ್ ಅಥವಾ ಹುಣಸೂರು ರಸ್ತೆಗಳಲ್ಲಿ ನ ಅರ್ಲೀ ಮಾರ್ನಿಂಗ್ ಲಾಂಗ್ ಡ್ರೈವ್ ಗಳು (with front windows open
), ಹಾಗೂ ಕಣ್ತುಂಬಾ ಮಾಡಿದ ನಿದ್ದೆ, ಹೊಟ್ಟೆ ತುಂಬಾ ಮನೆಯ ಉಟ, ಸಂಜೆಯ ಮೇಲೆ ಶಾಸ್ತ್ರಕ್ಕೆ ಒಂದು ಬಾರಿ ಮೈಲ್ ಚೆಕ್ ಮಾಡಿದರೆ ಆಯ್ತು, ಇದೆ ಐದು ದಿನಗಳ ದಿನಚರಿ.
ಚಿಕ್ಕವನಿದ್ದಾಗ ಶಾಲೆಯಿಂದ ಬರ್ತಾ ಬೀದಿಲಿ ಕಂಡ ಕಂಡ, ನಾಯಿ ಮರಿಗಳನ್ನು ಎತ್ತಿ ಕೊಂಡು ಬರ್ತಿದ್ದ ನನ್ನ ಮೇಲೆ ಹರಿಹಾಯುತಿದ್ದ ನನ್ನಪ್ಪ, ಇಂದು ಪ್ರತಿ ದಿನಾ ಬೆಳಿಗ್ಗೆ ಹಾಲು ತರುವಾಗ ಬೀದಿಯ ಟಾಮಿಗೆ ಒಂದು ಬನ್ ಹಾಕ್ತಾರಲ್ಲ ಇದು ನಿಜವಾಗ್ಲೂ ಪವಾಡವೆ ಸರಿ!!!!
ಮೂವತ್ತು ವರ್ಷಕ್ಕೂ ಮೀರಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪಾಠ ಮಾಡಿದ್ದು ಸಂಪೂರ್ಣವಾಗಿ ಮರೆತು, ಮನೆಯ ಹಿತ್ತಿಲಿನಲ್ಲಿರೋ ಬೆರಳೆಣಿಕೆಯಷ್ಟ್ತು ತೆಂಗಿನ ಮರ ಹಾಗೂ ಬಾಳೆ ಗಿಡಗಳ, ಆರೈಕೆ ಮಾಡುತ್ತಾ full time ಕೃಷಿಕ ರಾಗಿರುವ ಅಪ್ಪ, VR ತೊಗೊಂಡ ಮೇಲೆ ಸಂಪೂರ್ಣವಾಗಿ ಮಹಿಳಾ ಸಮಾಜ ದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಮ್ಮ, ಇವರೆಲ್ಲರ ಪ್ರಪಂಚ ಎಷ್ಟ್ತೊ೦ದು ಆರಾಮವಾಗಿ ಟೆನ್ಶನ್ ಫ್ರೀ ಆಗಿ ಇದ್ಯಲ್ಲ ಅನ್ನುವ ಹೊಟ್ಟೆ ಉರಿ ಶುರುವಾಗಿ ಬಿಟ್ಟಿದೆ. ದಸರ ರಜ ಮುಗಿದ ಮೇಲೆ ಮತ್ತೆ ಸ್ಕೂಲ್ ಗೆ ಹೋಗಬೇಕೆನ್ನುವ , ಸಂಕಟ ಏನು ಅಂತ ಮಕ್ಕಳಿಗೆ ಮಾತ್ರ ಗೊತ್ತು, ಅದೇ ತರಹದ್ದು ನನ್ನದು ಸಹಾ.
ಸೋಮವಾರದಿಂದ ಶುರುವಾಗುವ ಯುದ್ದಕ್ಕೆ ನಾನು ತಯಾರಿ ಮಾಡಿಕೊತಿದ್ದರೆ, “ಕಾಯಿ ಕೀಳೊ ಹೊತ್ತಿಗೆ ಮರಾನೂ ಕ್ಲೀನ್ ಮಾಡೋ ಅಂದಿದ್ದೆ, `ಹೂ ಬುದ್ದಿ` ಅಂತ ಹೇಳಿ ಆ ಕಳ್ಳನನ್ಮಗ ಹಾಗೆ ಇಳಿದಿದ್ದಾನೆ” ಅಂತ ಅಪ್ಪ ಕೂಗಾಡಿಕೊಂಡು ಓಡಾಡುತಿದ್ರೆ, ಕೈಲೊಂದು `ಸುಧಾ` ಹಿಡ್ಕೊಂಡು ನರಸಿಂಹ ಸ್ವಾಮಿಯವರ ” ಹತ್ತು ವರ್ಷದ ಹಿಂದೆ…”ಕೇಳುತ್ತಾ ವೆಸ್ಟ್ ಬಾಲ್ಕನಿ ಯಲ್ಲಿ ಕೂತಿದ್ಡಾಳೆ ಅಮ್ಮ. ಹಾಗೆಯೇ ಒಂದೆರಡು ನಿಮಿಷ ಹಾಡನ್ನು ಕೇಳಿದ ನನಗೆ, ” ನನ್ನ ಕಾಲದ ಸಂಬಂಧ ಗಳಲ್ಲಿ ಈ ಪ್ರಾಮಾಣಿಕತೆ ಹಾಗೂ ಸರಳತೆ ಇದ್ಯಾ? ಅಥವಾ ನನ್ನ ಅನುಭವಕ್ಕೆ ಬಂದವುಗಳು ಮಾತ್ರ ಬೇರೆಯ ತರಹದವೇ…” ಎಂಬ ಯೋಚನೆ ಹಾದು ಹೋಯ್ತು. ಯೋಚನೆ ಮಾಡಕ್ಕೆ ಟೈಮ್ ಇಲ್ಲ ಹಾಗೂ ಅದ್ರಿಂದ ಉಪಯೋಗನು ಇಲ್ಲ, I should get back now thats it…
ಹಾರ್ಲಿಕ್ಸ್ ನಂತಹ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೂ ಸಹ ಪ್ರತಿ ಹದಿನೈದು ದಿನಕ್ಕೊಮ್ಮೆ , ‘ಬಿಸ್ನೆಸ್ ಇಂಡಿಯಾ’ ದ ಕೊನೆಯ ಪುಟಗಳನ್ನು ಬೇರೆ ಬೇರೆಯ ಕಡೆ ಇರಬಹುದಾದ ಕೆಲಸಗಳಿಗಾಗಿ ನೋಡುತ್ತಾರೆ ಎಂದರೆ, ‘ಕೆಲಸ ಹುಡುಕುವ ಕೆಲಸ, ಕೇವಲ ಕೆಲಸ ಇಲ್ಲದವರಿಗೆ ಮಾತ್ರವಲ್ಲ, you may not be looking FOR a job, but you would look AT a job’. ‘ಕೆಲಸವೇ ಇಲ್ಲದ ಅನೇಕ ಲಕ್ಷ ಜನ ಪ್ರತಿ ದಿನ ನೌಕರಿಗಾಗಿ ಎಲ್ಲೆಲ್ಲಿ ನೋಡ್ತಾ ಇರಬಹುದು? ಇವರಿಗೆಲ್ಲಾ ಒಂದೇ ಕಡೆ ಸಾವಿರಾರು ಕೆಲಸಗಳ ಬಗ್ಗೆ ಮಾಹಿತಿ ಸಿಗೋ ಹಾಗಾದ್ರೆ ಎಷ್ಟು ಚೆನ್ನಾಗಿರುತ್ತೆ? ಹಾಗೂ ಇದೊಂದು ಒಳ್ಳೆಯ ಬಿಸ್ನೆಸ್ ಐಡಿಯಾನೂ ಸಹ ಆಗಬಹುದಲ್ಲ ?’ ಹೀಗೆ ಒಂದೇ ಸಮಯದಲ್ಲಿ, ಹಾರ್ಲಿಕ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತಿದ್ದ ‘ಸಂಜೀವ್ ಬಿಕ್ಚಂದಾನಿ’ಯ ತಲೆ ಅನೇಕ ದಿಕ್ಕು ಗಳಲ್ಲಿ ಓಡುತಿತ್ತು.
ಇವತ್ತಿಗೂ




