jump to navigation

IPL ತಪ್ಪೇನು ? January 20, 2011

Posted by nsworld in Generally Speaking.
add a comment

IPL Auction ಬಗ್ಗೆ ಇತ್ತೀಚಿನ ದಿನಗಳಲ್ಲಿ, ದಿನ ಪತ್ರಿಕೆ ಗಳಲ್ಲಿ, ಬ್ಲಾಗ್ ಗಳಲ್ಲಿ, ಬುದ್ದಿ ಜೀವಿ ಗಳು ಹಾಗು ನಮ್ಮಂತಹ ಸಾಮಾನ್ಯರು ಬರೆಯುತ್ತಿರುವುದನ್ನು ಓದಿದ್ದೇನೆ.ಇದರ ಬಗ್ಗೆ ಬರೆದಿರುವ ಬಹು ಸಂಖ್ಯಾತರ ಅಭಿಪ್ರಾಯ, ಇದೊಂದು, ugly show of money and power , ನೈತಿಕ ಅಧಃ ಪತನ , against spirit of sports , etc etc .

ಆದರೆ ನನಗನ್ನಿಸುತ್ತಿರುವುದು, ಇದೊಂದು (IPL) ಕೇವಲ ಮನೋರಂಜನೆ ಯ ವ್ಯವಹಾರ, ಚಲನ ಚಿತ್ರ , ನಾಟಕ, ಸರ್ಕಸ್, ನಲ್ಲಿರುವಂತೆ, ಇಲ್ಲಿಯೂ ಸಹ ಕಲಾವಿದರು ಗಳು ಇದ್ದಾರೆ, ಅವರು ಕ್ರಿಕೆಟ್ ಆಟ ಆಡುತ್ತಾರೆ.
ವ್ಯವಹಾರವೆಂದ ಮೇಲೆ, ಲಾಭ ನಷ್ಟ ಗಳ ಲೆಕ್ಕಾಚಾರ ಇದ್ದೆ ಇರುತ್ತದೆ, ಇದರ ಬಗ್ಗೆ ದೂರುವುದು, ತಪ್ಪು.

ಹೆಚ್ಚು ಸಂಬಳ ಸವಲತ್ತು, ಇರುವ ಕಡೆ, ಒಬ್ಬ ಕೆಲಸಗಾರ, ಕೆಲಸಕ್ಕೆ ಸೇರಲು ಇಚ್ಚಿಸುತ್ತಾನೆ, ಲಾಭ ಬರುವ ವ್ಯಾಪಾರವನ್ನು ಒಬ್ಬ ವ್ಯಾಪಾರಿ ಮಾಡ ಬಯಸುತ್ತಾನೆ , ಲಾಭ ಬರುವ ಬೆಳೆಯನ್ನು ರೈತ ಬೆಳೆಯಲು ಬಯಸುತ್ತಾನೆ , ಹಾಗೆ, ಅತಿ ಹೆಚ್ಚು bid ಮಾಡುವ ತಂಡವನ್ನು ಒಬ್ಬ ಕ್ರಿಕೆಟ್ ಆಟಗಾರ ಸೇರುತ್ತಾನೆ. ಆಟಗಾರನ ಹರಾಜು, ಬಹಿರಂಗ ವಾಗಿ ಆಗುತ್ತಿದೆ ಎನ್ನುವುದನ್ನು ಬಿಟ್ಟರೆ, ಬೇರೆ ವ್ಯತ್ಯಾಸವೇನು ನನಗೆ ಕಾಣುವುದಿಲ್ಲ. ಈ ಪ್ರಪಂಚದಲ್ಲಿ, ಯಾರು ತಾನೆ, ಲಾಭದಾಯಕ ವಾದದ್ದನ್ನು ಮಾಡಲು ಬಯಸುವುದಿಲ್ಲ ಹೇಳಿ.

IPL ಎಂಬ ವ್ಯವಹಾರ ದಿಂದ, ಹರಿಯುತ್ತಿರುವ ಹಣದ ಹೊಳೆಯಿಂದ ಹೊಸದಾಗಿ ಹುಟ್ಟುತ್ತಿರುವ ಉದ್ಯೋಗಾವಕಾಶಗಳು ಹಾಗು, ಯಾವುದೇ ಉದ್ಯಮದ ಪ್ರಾರಂಭ ದಿಂದ ಆರ್ಥಿಕತೆ ಯಲ್ಲಿ ಉಂಟಾಗುವ trickle down ಎಫೆಕ್ಟ್ ಇವುಗಳೆಲ್ಲದರ ದೃಷ್ಟಿ ಯಿಂದ ನೋಡುವುದಾದರೆ, ನಮಗೆ ಆದ ನಷ್ಟ ವಾದರೂ ಏನು ಎಂಬುದು ನನ್ನ ವಾದ.

ದೇವದತ್ತರ Business Sutra July 24, 2010

Posted by nsworld in Generally Speaking.
add a comment

ಇವರು ವಾರದಲ್ಲಿ ಒಂದು ದಿನ, television ನಲ್ಲಿ ಬರುತ್ತಾರೆ, ಅರ್ಧ ಗಂಟೆ ಯ ಕಾರ್ಯಕ್ರಮದಲ್ಲಿ, ರಾಮಾಯಣ , ಮಹಾಭಾರತ, ಭಗವದ್ ಗೀತಾ ,ಭಾಗವತ ದ ಕಥೆ , ಉಪಕಥೆ ಹೇಳುತ್ತಾರೆ,ಪಂಚತಂತ್ರ, ಪುರಾಣ ಪುಣ್ಯ ಕಥೆ ಗಳಲ್ಲಿ ಅಡಗಿರುವ ನೀತಿ ಯನ್ನು ಇಂದಿನ ನಮ್ಮ ಜೀವನದಲ್ಲಿ, ಹೇಗೆ ಅಳವಡಿಸಿಕೊಳ್ಳಬೇಕೆಂದು , ಎದುರಿಗೆ ಒಂದು ಕರಿಯ ಬೋರ್ಡ್ ಇಟ್ಟುಕೊಂಡು,chalkpiece ನಲ್ಲಿ ಬರೆಯುತ್ತ,ಅಳಿಸುತ್ತ,ಮತ್ತೆ ಬರೆಯುತ್ತ ಕೇಳುಗರ ಕಿವಿಗೆ ಹಿತ ವಾಗುವ ಹಾಗೆ,ಹೇಳುತ್ತಾರೆ.

ಇದರಲ್ಲೇನು,ವಿಶೇಷ, ಈ ತರಹದ,ನೂರಾರು ಜನ,ನಮ್ಮ ಹತ್ತಾರು ಟಿವಿ ಚಾನೆಲ್ ಗಳಲ್ಲಿ, ಬರುತ್ತಾರೆ ಎಂದು ಎರಡನೆ ಆಲೋಚನೆ ಬರುವ ಮೊದಲೆ,ಇಲ್ಲಿದೆ ಅವರ ಪರಿಚಯ.
ಕಾರ್ಯಕ್ರಮ ಹಾಗು ಚಾನೆಲ್ : ಬಿಸಿನೆಸ್ ಸೂತ್ರ ; CNBC
ವ್ಯಕ್ತಿ ಯ ಹೆಸರು : ದೇವದತ್ತ ಪಟ್ಟನಾಯಕ್
ಹುದ್ದೆ : CBO Future ಗ್ರೂಪ್

ಕಿಶೋರ್ ಬಿಯಾನಿ ಒಡೆತನದ Future group, Retail (Big bazaar, Pantaloon, Central, Home town etc) Real estate, Insurance, Media, Venture capital, supply chain management ಹಾಗು ಇನ್ನಿತರೇ ಕ್ಷೇತ್ರಗಳಲ್ಲಿ, ವಹಿವಾಟು ನಡೆಸುತ್ತಿರುವ ವಿವಿಧ ಕಂಪನಿ ಗಳ ಮಾತೃ ಸಂಸ್ಥೆ. ಈ ಫ್ಯೂಚರ್ ಗ್ರೂಪ್ ನ ಉನ್ನತ ಹುದ್ದೆಗಳಲ್ಲಿ ಒಂದು CBO (Chief Belief Officer ) .
ವೃತ್ತಿಯಲ್ಲಿ ವೈದ್ಯಕೀಯ ಡಾಕ್ಟರ್ ಆದ, ದೇವದತ್ತ, corporate ವಲಯದಲ್ಲಿ, ಒಂದೂವರೆ ದಶಕಕ್ಕೆ, ಮೀರಿದ ಅನುಭವ ಹೊಂದಿದವರು ಹಾಗು, ಕಳೆದ ಕೆಲ ವರ್ಷ ಗಳಿಂದ, ಫ್ಯೂಚರ್ ಗ್ರೂಪ್ ನಲ್ಲಿ, CBO ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಕಾರ್ಯದಲ್ಲಿ, ದೇವದತ್ತ, ಫ್ಯೂಚರ್ ಗ್ರೂಪ್ ನ ದೇಶದ ವಿವಿಧ ಭಾಗದಲ್ಲಿರುವ ನೌಕರ ವರ್ಗವನ್ನು ಭೇಟಿ ಯಾಗಿ, ರಾಮಾಯಣ, ಮಹಾಭಾರತ, ಭಾಗವತ, ಪಂಚತಂತ್ರ ದ ಕಥೆ , ಉಪ ಕಥೆ ಗಳನ್ನೂ ಹೇಳುತ್ತಾ, ಅದರ ಮುಖಾಂತರ ಏನನ್ನು ಕಲಿಯಬಹುದು ಹಾಗು, ಈ ಸರಳ ತತ್ವಗಳನ್ನು, management ಎದುರಿಸುತ್ತಿರುವ, ಸಮಸ್ಯೆ ಗಳನ್ನೂ ಬಗೆ ಹರಿಸುವುದರಲ್ಲಿ ಹೇಗೆ ಬಳಸಿ ಕೊಳ್ಳ ಬಹುದು ಎಂದು ಹೇಳುತ್ತಾ ಹೋಗುತ್ತಾರೆ.

ನೂರಾರು, ಪುಟಗಳ case study ಯಲ್ಲಿ ವಿವರಿಸ ಬಹುದಾದ, management concept ಅನ್ನು, ಕೆಲ ಸಣ್ಣ ಸಣ್ಣ ಕಥೆಗಳಿಂದ ಅತಿ ಸಾಮಾನ್ಯ ದರ್ಜೆಯ ನೌಕರನಿಗು ಅರ್ಥವಾಗು ವ ಹಾಗೆ ಹೇಳುವ ಕಲೆ, ಇವರಲ್ಲಿದೆ.ಉದಾಹರಣೆ ಗೆ Change management ನ ಅವಶ್ಯಕತೆ ಹಾಗು ಅನಿವಾರ್ಯತೆ ಯನ್ನು, ಇವರು, ಪುರಾಣದಲ್ಲಿ ಬರುವ ಮಥುರೆಯ ಹೊರಬಾಗದಲ್ಲಿರುವ ಸರೋವರದಲ್ಲಿ, ಗರುಡನ ಭೀತಿಯಿಂದ, ಅಡಗಿಕೊಂಡು, ಸರೋವರದ ನೀರನೆಲ್ಲ, ವಿಷಯುಕ್ತ ಮಾಡಿದ್ದ, ಕಾಳಿಂಗ ಸರ್ಪದ ಕಥೆಯ ಮುಖಾಂತರ ಸರಳವಾಗಿ ನಿರೂಪಿಸುತ್ತಾರೆ.

so ಯಾವಾಗಲಾದರು, CNBC ಯಲ್ಲಿ ಪ್ರಸಾರ ವಾಗುವ ಇವರ ಕಾರ್ಯಕ್ರಮ ನೋಡಿ,(ಶನಿವಾರ ಮಧ್ಯಾನ್ಹ repeat telecast ಸಹ ಇದೆ) ಇವರೇನು ದೇವ ಮಾನವರಲ್ಲ ಸ್ವಾಮಿ ಸನ್ಯಾಸಿ, ವಿರಾಗಿ ಮೊದಲೇ ಅಲ್ಲ. ಪಕ್ಕಾ practical ಮನುಷ್ಯ .Management ನ ಕಠಿಣ ಸಮಸ್ಯೆ ಗಳ ವಿಷಯ ಬಂದಾಗ, ಬಹುಪಾಲು, harvard /oxford ಕೇಸ್ studies ಗಳು ಹಾಗು ಪಾಶ್ಚಿಮಾತ್ಯ management ಗುರು ಗಳ ಮೊರೆ ಹೋಗುತ್ತಿರುವ ಕಾಲದಲ್ಲಿ, India centric case studies ಗಳ, ಬೆಳವಣಿಗೆ ಹೇಗೆ ಮಹತ್ವವಾಗಿದೆಯೋ ಹಾಗೆ, ಆಲೋಚನೆಯ ಕ್ರಮದಲ್ಲಿ, ದೇಸಿ ತನದ ಬೆಳವಣಿಗೆ ಯ ನಿಟ್ಟಿನಲ್ಲಿ ಇದು ಒಂದು ಬದಲಾವಣೆ ಎನ್ನಬಹುದು .

“ಎಲ್ಲೋ ಮಳೆಯಾಗಿದೆ”,Stock market ಕರೆಯುತಿದೆ.. July 10, 2010

Posted by nsworld in Business and Economy.
add a comment

ಮುಂಗಾರು ಶುರುವಾಗೋ ಹೊತ್ತಿಗೆ, ಯಾರ್ಯಾರಿಗೆ, ಏನೇನೊ ಅನ್ನಿಸೋಕ್ಕೆ ಶುರುವಾಗುತ್ತೆ. ಕೆಲವರು ಕಥೆ, ಕವನ ಅಂತ, ಇನ್ನು ಕೆಲವರು, ಫೋಟೋಗ್ರಫಿ ಅಂತ, ಮತ್ತೆ ಕೆಲವರು ಟ್ರೆಕ್ಕಿಂಗ್ ಅಂತ ಕೊಡವಿ ಕೊಂಡು ಎದ್ದರೆ, ಸದಾ ದಲಾಲ್ ಸ್ಟ್ರೀಟ್ ನ ಮೇಲೆ ದೃಷ್ಟಿ ಇಟ್ಟ ಜನರಿಗೆ,ಏನನ್ನಿಸುತ್ತೆ?

ಶೇರು ಮಾರುಕಟ್ಟೆ ಯ ಮೇಲೆ ದೃಷ್ಟಿ ಇಟ್ಟವರಿಗೆ, ಜ್ಞಾಪಕ ಆಗೋದು ಈ ಸ್ಟಾಕ್ ಗಳು.
1.Chambal Fertilisers
2.Tata chemicals
3.Nagarjuna Fertilisers
4.spic
5.Zurai Agro, etc

ಮಳೆ, ಶುರುವಾದರೆ, ಬಿತ್ತನೆ ಶುರುವಾಗುತ್ತೆ ಬಿತ್ತನೆ ಅಂದ್ರೆ, ಗೊಬ್ಬರ, ಗೊಬ್ಬರ ಅಂದ್ರೆ, ಈ ಮೇಲ್ಕಂಡ ಸ್ಟಾಕ್ ಗಳು. ಬೇಡಿಕೆ ಹೆಚ್ಚಾದರೆ, ವಹಿವಾಟು ಹೆಚ್ಚಾಗುತ್ತೆ, ವಹಿವಾಟು ಹೆಚ್ಚಾದರೆ, ಲಾಭ, ಲಾಭ ಹೆಚ್ಚಾದರೆ, ಶೇರಿನ ಬೆಲೆ ಮೇಲೆ. ಈ ಒಂದು ಕನೆಕ್ಷನ್ ನ ಹಿಡಿದುಕೊಂಡು, ಒಂದೆರಡು, ತಿಂಗಳುಗಳಲ್ಲಿ, ಈ ಶೇರುಗಳಲ್ಲಿ, ಹಣ ಹೂಡಿ, ಒಂದು ಹತ್ತರಿಂದ ಇಪ್ಪತ್ತು ಪರ್ಸೆಂಟ್ ಲಾಭ ಗಳಿಸುವ ಯೋಚನೆ ಮುಂಗಾರು ಹೂಡಿಕೆದಾರರದ್ದು.

ಮುಂಗಾರು ಹೂಡಿಕೆದಾರರು ಕೇವಲ ಗೊಬ್ಬರದ ಮೇಲೆ ಮಾತ್ರ ಗಮನ ಇಟ್ಟಿರೋಲ್ಲ, ಇವರ ಗಮನ,Irrigation, Agriculture technology, FMCG ಹಾಗು Automobile ಸ್ಟಾಕ್ ಗಳ ಮೇಲು ಸಹ ಸಮವಾಗಿಯೇ ಇರುತ್ತೆ, ಈ ಸೀಸನ್ ನಲ್ಲಿ FMCG(Hindustan Uniliver, ITC etc) Automobile (Tata motors, Mahindra, Hero honda,Bajaj, TVS Motors etc) ಕಂಪನಿ ಗಳ ಬಹುಪಾಲು earnings growth ಉತ್ತಮ ಮುಂಗಾರು ಹಾಗು ಉತ್ತಮ ಬೆಳೆ ಗಳ ಮೇಲೆ ಆಧಾರ ವಾಗಿರುತ್ತೆ. Rural demand ಕಂಪನಿ ಗಳ ವ್ಯಾಪಾರದ ಮೇಲು ಪರಿಣಾಮ ಬೀರುತ್ತೆ. ಮಳೆ ಬೆಳೆ ಚೆನ್ನಾಗಿದ್ರೆ, ಇವುಗಳ ಸೆಕೆಂಡ್ ಹಾಗು ಥರ್ಡ್ quarter ವರಮಾನ ಸೂಪರ್ ಆಗಿರುತ್ತೆ. ಆದ್ದರಿಂದ, ಮಳೆ, ಚೆನ್ನಾಗಿ ಬೀಳುತ್ತಿದೆ ಎಂಬ ಸುದ್ದಿ ಹೂಡಿಕೆ ದಾರರನ್ನ ಈ ಕಂಪನಿ ಗಳ ಶೇರು ಗಳನ್ನೂ ಕೊಳ್ಳಲು ಪ್ರಚೋದಿಸುತ್ತೆ

ಮಳೆ ಕೇವಲ, ಕವಿ ಮನಸ್ಸಿನವರು ಹಾಗು ಭಾವಜೀವಿ ಗಳನ್ನೂ ಮಾತ್ರ ಪ್ರಚೋದಿಸುತ್ತದೆ ಅಂತ ಅಂದ್ರೆ. ಇಲ್ಲಪ್ಪ ಮಳೆ ಬರಲಿ ನಮ್ಮ ಬೆಳೆ ಬೇಯಲಿ ಅಂತ ನಾವು ಕಾದು ಕೂತಿದ್ದೇವೆ ಅನ್ನುತ್ತಾರೆ, ಮುಂಗಾರು ಹೂಡಿಕೆದಾರರು. Happy South-West Monsoon 🙂

ಒಟ್ಟಾರೆ ಮಾಧ್ಯಮಗಳಿಗೆ “ನಿತ್ಯಾನಂದ” !! March 17, 2010

Posted by nsworld in Generally Speaking.
add a comment

“ಮಕ್ಕಳ ಎದುರಿಗೆ ನ್ಯೂಸ್ ನೋಡೋದು ಕಷ್ಟ ಆಗಿದೆ, TV ಹಾಕಿದ್ರೆ, ಅದ್ರಲ್ಲಿ ಏನು ತೋರಿಸ್ತಿರುತ್ತಾರೋ, ಅದು ಮಕ್ಕಳ ಮನಸ್ಸಿನ ಮೇಲೆ ಯಾವ ತರಹ ಪರಿಣಾಮ ಬೀರುತ್ತದೋ ಎಂದು ಹೆದ್ರುಕೊಂಡು ಜೀವನ ಮಾಡೋ ಹಂಗಾಗಿದೆ” ಎಂದು ಸಹೋದ್ಯೋಗಿಯೊಬ್ಬರು ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರೆ, ” ಚಿಕ್ಕ ಮಕ್ಕಳಿರುವ ಮನೆಗಳಲ್ಲಿ pogo ಹಾಗು ಕಾರ್ಟೂನ್ ನೆಟ್ವರ್ಕ್ ಬಿಟ್ಟರೆ ಬೇರಾವ ಚಾನೆಲ್ ನು ಹಾಕ ಬಾರದು” ಎಂದು ಖಡ ಖಂಡಿತವಾಗಿ ಹೇಳಿದ ನನ್ನ ಕಸಿನ್ ಒಬ್ಬಳ ಮಾತು ನೆನಪಾಯಿತು.

ಹೌದು ಇವರೆಲ್ಲರ ಮಾತು ಅಕ್ಷರಶಃ ಸತ್ಯ. ಇಂದು ನೀವು TV ಯನ್ನು ಆನ್ ಮಾಡಿದರೆ, ಅದರಲ್ಲಿ ಬರುತ್ತಿರುವ ಕಾರ್ಯಕ್ರಮ ಅಥವಾ ದೃಶ್ಯಾವಳಿ, ಯಾರೋ ಒಬ್ಬರು ತಮ್ಮ ಬೆಡ್ ರೂಂ ನಲ್ಲಿ ನಡೆಸಿದ ಲೀಲೆಯೋ, ಇನ್ನ್ಯಾರದೋ ಬರ್ಬರ ಹತ್ಯೆಯೋ, ಯಾವುದೊ ಬಂಗಲೆ ಯಲ್ಲಿರುವ ಭೂತ ಪಿಶಾಚಿ ಗಳ ಕಥೆಯೋ ಅಥವಾ ಭಯಂಕರವಾಗಿ ಕಾಣುವ ಜ್ಯೋತಿಷಿಯೊಬ್ಬರ ಅಬ್ಬರವೋ, ಕಾಣುವ ಸಾಧ್ಯತೆ ಶೇಕಡ ೯೦ ರಷ್ಟಿರುತ್ತದೆ. ಇನ್ನು specific ಆಗಿ ಹೇಳ ಬೇಕೆಂದರೆ ಇಂದು ನಮ್ಮ ಕನ್ನಡ TV ವಾಹಿನಿಗಳು ಯಾಕೆ, ಮೂಡ ನಂಬಿಕೆ , ಅಶ್ಲೀಲ ದೃಶ್ಯಾವಳಿ, ಹಿಂಸೆ, ದ್ವೇಷ ಹಾಗು ಪ್ರಚೋದಕ ಕಾರ್ಯಕ್ರಮಗಳನ್ನು ಬಿತ್ತರಿಸುವಲ್ಲಿ ಒಬ್ಬರಿಗೊಬ್ಬರು ಈ ಪರಿಯ ಪೈಪೋಟಿ ನಡೆಸುತ್ತಿದಾವೆಂದು ಅರ್ಥ ಮಾಡಿ ಕೊಳ್ಳುವುದೇ ಕಷ್ಟ್ಟ ವಾಗಿದೆ. ಇದು TRP ಗಾಗಿ ನಡೆಯುತ್ತಿರುವ ಮಹಾ ಸಮರವೋ ಅಥವಾ ಈ ವಾಹಿನಿಗಳನ್ನು ನಡೆಸುತ್ತಿರುವವರ ಬೌದ್ದಿಕ ದಿವಾಳಿತನವೋ ಒಂದು ತಿಳಿಯದಾಗಿದೆ.

ಕೇವಲ TV ಚಾನೆಲ್ ಗಳಿಗೆ ಬೈದು ಪ್ರಯೋಜನವಿಲ್ಲ ನಮ್ಮ mainstream ಪತ್ರಿಕೆಗಳು ಸಹ ಈ ಸ್ಪೀಡ್ ಅಲ್ಲದಿದ್ದರೂ ಸ್ವಲ್ಪ ನಿಧಾನವಾಗಿಯಾದರೂ ಇದೆ ದಾರಿಯನ್ನು ತುಳಿಯುತ್ತಿವೆ. ಕಪ್ಪು ಬಿಳುಪು, ಪೀತ ಪತ್ರಿಕೆಗಳು ಹಾಗು ಸೊ ಕಾಲ್ಡ್ ಬುದ್ದಿ ಜೀವಿಗಳ ಮುಖವಾಣಿ ಗಳು ಮಾಡುತ್ತಿರುವ style of reporting ಹಾಗು treatment of subject ಇಂದು ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಕಾಣಿಸುತ್ತಿರುವುದು ದುರಾದ್ರುಷ್ಟ್ತವೆ ಸರಿ.

ಹಗರಣಗಳನ್ನು ಬಯಲಿಗೆಳೆಯುವುದು, ಜನರು ಮೊಸಹೊಗದಂತೆ ತಿಳುವಳಿಕೆ ನೀಡುವುದು ಹಾಗು ಅಧಿಕಾರದಲ್ಲಿರುವವರು ಹಾದಿ ತಪ್ಪದಂತೆ ಹದ್ದಿನ ಕಣ್ಣು ಇಡುವುದು ಮಾಧ್ಯಮಗಳ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಮಾಡುವ ಭರದಲ್ಲಿ, ತಾವೆಷ್ಟು ವಾತಾವರಣವನ್ನು ಕಲುಷಿತ ಗೊಳಿಸುತ್ತಿದ್ದೇವೆ ಎಂಬುದರ ಅರಿವು ಇವರಿಗೆ ಇದ್ದಂತಿಲ್ಲ. And also When they over do it , ಇದರ ಪರಿಣಾಮಗಳು ಏನು ಎಂಬುದರ ಬಗ್ಗೆ ಒಂದು ಕ್ಷಣವಾದರೂ ನಿಂತು ಯೋಚಿಸುವ ವ್ಯವಧಾನ ಇವರಿಗಿಲ್ಲ.

ಇತ್ತೀಚಿಗೆ ಬಯಲಾದ ಸ್ವಾಮಿಗಳ ವೀಡಿಯೊ ಪ್ರಕರಣ ಒಂದು ಕ್ಲಾಸಿಕ್ ಉದಾಹರಣೆ. ಈ ವಿಷಯದ ಬಗ್ಗೆ, ಕೇವಲ ನಾಲ್ಕೈದು ದಿನಗಳ ಗ್ಯಾಪ್ ನಲ್ಲಿ ನಮ್ಮ ಚಾನೆಲ್ ಗಳು ಪ್ರಸಾರ ಮಾಡಿದ ಚರ್ಚೆ / ಕಾರ್ಯಕ್ರಮಗಳ ಸಂಖ್ಯೆ ಸುಮಾರು ೨೦. (ಪ್ರತಿ ಅರ್ಧ ಗಂಟೆಗೊಮ್ಮೆ ನ್ಯೂಸ್ ನಲ್ಲಿ ತೋರಿಸುತಿದ್ದ ಅದೇ ದೃಶ್ಯಾವಳಿಗಳನ್ನು ಹೊರತುಪಡಿಸಿ). ಈ ಎಲ್ಲ ಕಾರ್ಯಕ್ರಮಗಳು ಕೇವಲ ಅದೇ ದೃಶ್ಯಾವಳಿಗಳನ್ನು ಪದೇ ಪದೇ ಪ್ರಸಾರ ಮಾಡಲು ಕಂಡು ಕೊಂಡ excuse ಮಾತ್ರವೇ ಹೊರತು ಇವುಗಳಲ್ಲಿ ಯಾವ ಹೊಸ ಅಂಶವು ಇರಲಿಲ್ಲ. ಇದು ಯಾವ ರೀತಿಯ ಸಾಮಾಜಿಕ ಜವಾಬ್ದಾರಿ?

ಕೇವಲ Breaking News , TRP ಹಾಗು ಪ್ರಸಾರ ಸಂಖ್ಯೆ ಅಷ್ಟೆ ಅಲ್ಲದೆ, ಸಾಮಾಜಿಕ ಜವಾಬ್ದಾರಿಯು ನಮಗಿರ ಬೇಕು ಅನ್ನುವ ಅರಿವು ಯಾವಾಗ ಇವರಿಗೆ ಮೂಡುವುದೋ ದೇವರೇ ಬಲ್ಲ.

ಕನ್ನಡ TV ವಾಹಿನಿಗಳ ಫಾರ್ಮುಲ January 30, 2010

Posted by nsworld in ವಿಡಂಬನೆ.
1 comment so far

ಹೊಸದಾಗಿ ಕನ್ನಡ ವಾಹಿನಿ ಒಂದನ್ನು, ಆರಂಭ ಮಾಡುತ್ತಿದ್ದೀರ ? ಅಥವಾ ಯಾವುದಾದರು ಹೊಸದೊಂದು ವಾಹಿನಿಗೆ ಕಾರ್ಯಕ್ರಮ ನಿರ್ವಾಹಕರಾಗಿಯೋ ಅಥವಾ ಚೀಫ್ ಆಗಿಯೋ ನಿಯುಕ್ತಿಗೊಂಡಿದ್ದಿರ ? ಕನ್ನಡ ವಾಹಿನಿಗಳ ಕಾರ್ಯಕ್ರಮಗಳು ಹೇಗಿರ ಬೇಕೆಂಬ ಬಗ್ಗೆ ಇಲ್ಲಿದೆ ನಿಮಗೊಂದು ಸಿದ್ದ ಫಾರ್ಮುಲ. (ಈ ಫಾರ್ಮುಲ ಜನರಿಂದ ಓಕೆ ಆಗಿದೆಯೋ ಅಥವಾ ಬರುವ ದಿನಗಳಲ್ಲಿ ತಿರಸ್ಕರಿಸಲ್ಪಡುವುದೋ ಕಾದು ನೋಡ ಬೇಕು)

ಬೆಳಗಿನ ಕಾರ್ಯಕ್ರಮ ಪ್ರಾರ್ಥನೆ / ಯೋಗ / ವೇದ , ಪುರಾಣ / ಹಾಡು ಹಸೆಗಳಿಂದ ಪ್ರಾರಂಭ ಮಾಡಿ ತಪ್ಪೇನಿಲ್ಲ. ಆದರೆ ನಂತರದ ಕಾರ್ಯಕ್ರಮಕ್ಕೆ, ಅಂದರೆ ` ದಿನ ಪಂಚಾಗ / ಭವಿಷ್ಯ ` ಹೇಳುವ ಕಾರ್ಯಕ್ರಮಕ್ಕೆ ಒಬ್ಬ ಬಲವಾದ ಜ್ಯೋತಿಷಿ ಒಬ್ಬರನ್ನು ನೇಮಿಸಿಕೊಳ್ಳಿ. ಇವರ ದೇಹದ ಗಾತ್ರ, ಅಲಂಕಾರ, ಮಾತು ಕತೆ, ಹಾಗು ಸ್ಟೈಲ್ ನೋಡುವವರ ಎದೆಯಲ್ಲಿ ನಡುಕ ಹುಟ್ಟಿಸ ಬೇಕು. ೧೨ ರಾಶಿಗಳಲ್ಲಿ minimum ೬ ರಿಂದ ೭ ರಾಶಿಯ ಜನರಿಗೆ ” ಇವತ್ತು ಹೊರಗೆ ಹೋಗಲೇ ಬೇಡಿ, ಹೋದರೆ ಜೀವ ಭಯ” ಅಥವಾ ” ಇಂದು ಕಚೇರಿಗೆ ತೆರಳುವ ಮುನ್ನ ಬಲಗಿವಿಗೆ ಒಂದು ವೀಳ್ಯದೆಲೆಯನ್ನು ಸಿಕ್ಕಿಸಿಕೊಂಡು ಹೋಗಿ” ಎಂದು ನಿಖರವಾಗಿ, ಕಡ್ಡಿ ತುಂಡು ಮಾಡಿದ ಹಾಗೆ, ಹೇಳುವ ಪ್ರಕಾಂಡ ಪಂಡಿತರಿದ್ದರಂತು ಬಹಳ ಒಳ್ಳೆಯದು.

ನಂತರದ, ಅನೇಕ ಬೆಳಗಿನ ಕಾರ್ಯಕ್ರಮಗಳು, ಮರು ಪ್ರಸಾರ ವಾಗುವ ಧಾರಾವಾಹಿಗಳು.ಆದ್ದರಿಂದ ಹೆಚ್ಚೇನು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇಂದು ಬಹುತೇಕ ಚಾನೆಲ್ ಗಳಲ್ಲಿ ಬರುತ್ತಿರುವ ಧಾರಾವಾಹಿಯ subject , ಅತ್ತೆ ಸೊಸೆ, ನಾದಿನಿ ವಾರಗಿತ್ತಿ, ಅಣ್ಣ ತಮ್ಮಂದಿರ, ದ್ವೇಷ ಅಸೂಯೆ ಜಗಳ, ಕೋರ್ಟು ಕಚೇರಿ, ದೃಶ್ಯಗಳು, ಬಿಸಿನೆಸ್ ರೈವಲ್ರಿ ವಿಷಯಗಳಾದ್ದರಿಂದ, ಇಂತಹ ವಿಷಯದ ಬಗ್ಗೆ ೪೦೦ ರಿಂದ ೫೦೦ ಎಪಿಸೋಡುಗಳ ಅನೇಕ ಧಾರಾವಾಹಿಗಳನ್ನು ಅನೇಕ ಚಾನೆಲ್ ಗಳಿಗೆ ಮಾಡಿದ, ಪ್ರಸಿದ್ದ ನಿರ್ದೇಶಕರಿದ್ದಾರೆ, ಅಂತಹವರ ಸಹಾಯವನ್ನು ಪಡೆಯಬಹುದು. ಇನ್ನು ಮಧ್ಯಾನ್ಹ ದ compulsory ಕಾರ್ಯಕ್ರಮ ಅಡುಗೆಯದಾದ್ದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಸಿಕೊಳ್ಳುವ ಅವಶ್ಯಕತೆಯಿಲ್ಲ.

ನಂತರದ ಬಹುಮುಖ್ಯವಾದ ಹಾಗು ಇತ್ತೀಚಿಗೆ, ಪ್ರತಿಯೊಂದು ವಾಹಿನಿಯವರು ತಪ್ಪದೆ, ಪ್ರಸಾರ ಮಾಡುತ್ತಿರುವ ಜಟಕಾ ಬಂಡಿ / ಉಗಿ ಬಂಡಿ ಗಳಂತಹ ಕಾರ್ಯಕ್ರಮ, ವೈಯಕ್ತಿಕ ಹಾಗು ಸಂಸಾರಿಕ ಸಮಸ್ಯೆ ಹಾಗು ಹೊಡೆದಾಟಗಳನ್ನು ಒಂದು ಸಾಮಾಜಿಕ ಸಮಸ್ಯೆ ಎಂದು ಬಿಂಬಿಸುವ ಹಾಗು ಮೀಡಿಯಾ trial ನಡೆಸುವ ಪ್ರಯತ್ನ. ಇದನ್ನು ನಡೆಸಿಕೊಡಲು, ಯಥೇಚ್ಚವಾಗಿ ಕಣ್ಣಿರು ಹಾಕಬಲ್ಲ, ಪ್ರೇಕ್ಷಕರ ಕರುಳು ಕಿವುಚ ಬಲ್ಲ, ಹಳೆಯ ನಟಿ ಮಣಿಯರು ಅನೇಕರು ಸಿಗುತ್ತಾರೆ.

ಇನ್ನು ಸಂಜೆಯ prime time ಕಾರ್ಯಕ್ರಮಗಳು. ಇದಕ್ಕೂ ಸಹ ಒಂದೆರಡು ಧಾರವಾಹಿ ಗಳನ್ನೂ ಹಾಕಿ. ೨೦೧೨, ೧೩, ೧೫, ೧೮ ಅಥವಾ ಮುಂದೆದಾದರೋ ಪ್ರಳಯ ವಾಗುವ ಬಗ್ಗೆ ಒಂದಿಬ್ಬರು ತ್ರಿಕಾಲ ಜ್ನಾನಿಗಳೊಂದಿಗೆ ಸಂದರ್ಶನ ಕಾರ್ಯಕ್ರಮ ನಡೆಸ ಬಹುದು, ನಡುವಿನಲ್ಲಿ ಎದೆ ನಡುಗಿಸುವಂತಹ, ಭೀಕರ ದೃಶ್ಯಗಳು ಹಾಗು sound effects ಇರಬೇಕು. ಇಂದಿನ ಜನ್ಮ ಬಿಟ್ಟು, ಹಿಂದೂ, ಹಾಗು ಮುಂದಿನ ಜನ್ಮದ ಬಗ್ಗೆ ಆಸಕ್ತಿಯಿರುವ ವೀಕ್ಷಕರಿಗೆ ಒಂದು ಕಾರ್ಯಕ್ರಮವಂತೂ compulsory ಇರಬೇಕು.

ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯವಾದ ಮತ್ತೊಂದು ಬಗೆಯ ಕಾರ್ಯಕ್ರಮವೆಂದರೆ, reality show ಗಳು ಇದು ಹಾಡು / ಹಾಸ್ಯ / ನೃತ್ಯಕ್ಕೆ ಸಂಬಂಧ ಪಟ್ಟದ್ದಗಿರಬಹುದು. ಚಿಕ್ಕ ಮಕ್ಕಳ ಕೈಲಿ ಹಾಡು ಹಾಡಿಸಿ, ಅವುಗಳನ್ನು, ಇಂಚಿಂಚಾಗಿ ವಿಶ್ಲೇಷಿಸಿ, ಅವುಗಳಲ್ಲಿರುವ ತಪ್ಪನ್ನು ಕಂಡು ಹಿಡಿದು ಆ ಮಕ್ಕಳ ಹಾಗು ಪೋಷಕರ ಕಣ್ಣಲ್ಲಿ ನೀರು ಬಂದರಂತೂ ನಿಮ್ಮ ಕಾರ್ಯಕ್ರಮ ಯಶಸ್ವಿಯಾದಂತೆಯೇ ಸರಿ. ಚಿಕ್ಕ ವಯಸ್ಸಿನ ಮುಗ್ಧ ಮಕ್ಕಳು third rate ಸಾಹಿತ್ಯದ ಹಾಡಿಗೆ, ಅಶ್ಲೀಲ ಭಾವ ಭಂಗಿ ಗಳನ್ನೂ ಪ್ರದರ್ಶಿಸಿದರಂತು ನಿಮ್ಮ ಡಾನ್ಸ್ Reality Show ಸೂಪರ್ success .

ಈ ಮೇಲ್ಕಂಡ ಫಾರ್ಮುಲ ವನ್ನು ಚಾಚು ತಪ್ಪದೆ, ಅನುಸರಿಸಿದರೆ, ನಿಮ್ಮ ವಾಹಿನಿ popular ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ಒಂದಂತು ನಿಜ ನಿಮ್ಮ ಚಾನೆಲ್, odd man out ಅಂತು ಖಂಡಿತ ಆಗುವುದಿಲ್ಲ, ಯಾಕೆಂದರೆ, ಇಂದಿನ ಎಲ್ಲ ಕನ್ನಡ ಚಾನೆಲ್ ಗಳು ಶ್ರದ್ದೆಯಿಂದ ಅನುಸರಿಸುತ್ತಿರುವ ಮಾರ್ಗ ಇದು.

2010 ರ ಹೊಸ್ತಿಲಲ್ಲಿ, 2009 ರ Trial Balance !! December 31, 2009

Posted by nsworld in ಮನಸಿನ ಪುಟಗಳು.
add a comment

Numerology ಯಲ್ಲಿ ಮಾಸ್ಟರ್ ನಂಬರ್ ಎಂದು ಪರಿಗಣಿಸುವ 11, (2+0+0+9) ಬರುವ 2009, ನನ್ನ ಪಾಲಿಗೆ Great ಅಲ್ಲ ದಿದ್ದರು ಸಹ ,Very bad ಆಗದೆ, Ok not bad ಎಂದು ಮುಕ್ತಾಯವಾಗಿದೆ.

Relationship and Friends:
ದೊಡ್ಡ confusing year, ಹೊಸದಾಗಿ ಪ್ರವೇಶ ಪಡೆದವರು ಹಾಗೂ Tata bye ಎಂದು ಹೇಳಿದವರ ಸಂಖ್ಯೆ ಸಮವಾಗಿದೆ. Net net,2009 ರ ಪ್ರಾರಂಭದಲ್ಲಿಯ ಪರಿಸ್ಥಿತಿಯ ಮುಂದುವರಿಕೆ.`ರಾಮಕೃಷ್ಣ ವಿವೇಕಾನಂದ` ಸಾಹಿತ್ಯ ಜಗತ್ತಿನ ಪರಿಚಯ ಮಾಡಿಸಿದ, ನನ್ನನ್ನು ಬಾಲ್ಯದಿಂದಲೂ ಎತ್ತಿ ಆಡಿಸಿದ, ನೆಚ್ಚಿನ `ಗೋಪಿ ಮಾವ`ನ ಅಗಲಿಕೆ ತೀವ್ರ ನೋವುಂಟು ಮಾಡಿದ ಸಂಗತಿ.

Career:
Promotion ಹಾಗು hike ಇಲ್ಲದೆ ಕೆಲಸ ಭದ್ರವಾಗಿ ಮುಂದುವರೆದ Recession ವರ್ಷ. ಕೆಲಸದ ಜಾಗ, ವಾಹನ ದಟ್ಟಣೆ ಹಾಗೂ ಹೊಗೆಯುಕ್ತ ಕೋರಮಂಗಲ ದಿಂದ, ಹಚ್ಚ ಹಸುರಿನ Global Village Tech park ಗೆ ಸ್ಥಳಾಂತರಗೊಂಡಿದ್ದು, ನೆಮ್ಮದಿ ಹಾಗೂ ಸಂತಸದ ವಿಷಯ. Pollution ಹಾವಳಿ ಇಲ್ಲದೇ ಇತ್ತೀಚೆಗೆ ಸ್ವಲ್ಪ ಬೆಳ್ಳಗೆ ಕಾಣುತ್ತೇನೆಂಬುದು ಅವಳ ಅಭಿಪ್ರಾಯ!!!!!!

Stock Market/ Mutual Funds:
ಹೂಡಿದ ಹಣವಂತೂ ದ್ವಿಗುಣ ವಾಗಲಿಲ್ಲ ಆದರೆ, ತಕ್ಕಮಟ್ಟಿಗೆ ಅಭಿವೃದ್ದಿಯಾಯಿತು. Thanks to ರಾಮಾಲಿಂಗ ರಾಜು-ಸತ್ಯಂ, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಹಾಗೂ ಟಾರೆಂಟ್ ಫಾರ್ಮ, ಷೇರುಗಳಿಗೆ, ಹಾಗೂ Fidelity Mutual Fund ನ ನುರಿತ Fund Managers ಗಳಿಗೆ.

Finance:
ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಸ್ವಲ್ಪ ಚೇತರಿಕೆ. Debt, Nil ಇದ್ದ ನನ್ನ ಬ್ಯಾಲೆನ್ಸ್ ಶೀಟ್ ನಲ್ಲಿ ಅಲ್ಪ ಪ್ರಮಾಣದ ಸಾಲದ ಸೇರ್ಪಡೆ. Thanks to Axis Bank.

Technology/Gizmos:
3 ವರ್ಷ ಹಳೆಯ Samsung mobile ಅಸುನೀಗಿ ಅದರ ಜಾಗದಲ್ಲಿ ಮತ್ತೊಂದು Samsung ಮೊಬೈಲ್ ಬಂದಿದೆ. TV ಗೆ ಹೊಸ Set top Box ಬಂದಿದೆ, clarity ವೃದ್ದಿಯಾಗಿದೆ.

ಓದು / ಬರಹ :
NLSIU ನ MBL ಗೆ Join ಆಗಿದ್ದು,ಹಾಗೂ ಶಾಲೆಯ ಪುಸ್ತಕಗಳ ಜೊತೆ ಇತರೆ ಓದು ಸಹ, ಪರ್ವಾಗಿಲ್ಲ ಚೆನ್ನಾಗಿ ನಡೆದ ವರ್ಷ.

New year Resolution:
ಪ್ರತೀ ವರ್ಷದಂತೆ, ಈ ಬಾರಿಯೂ ಹೊಸ ಫಾಂಟ್ ನಲ್ಲಿ ಮುದ್ರಿತವಾಗಿದೆ, ಸರ್ಕಾರಿ ಯೋಜನೆಗಳ ಹಾಗೆ, execution ನಲ್ಲಿ ಸದಾ ಹಿಂದುಳಿಯುವ ಈ document ಈ ಬಾರಿಯಾದರೂ ಅನುಷ್ಟಾನಗೊಳ್ಳುತ್ತದೆ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಘೋಷಿಸುತ್ತೇನೆ!!!

“Wish you and your dear ones Happy New Year and a great year Ahead”

ಮಹಾಲಯ ಅಮಾವಾಸ್ಯೆ-short Nifty @5000!!! September 18, 2009

Posted by nsworld in Generally Speaking.
add a comment

“ಶಾರ್ಟ್ ನಿಫ್ಟೀ @ ೫೦೦೦” ಅಂತ ಬಂದ ಮೆಸೇಜ್, ಇದು ಇವತ್ತಿನ ಹತ್ತನೆಯ ಮೆಸೇಜ್. Do not Distrurb ಅಂತ ಸರ್ವಿಸ್ ಪ್ರವೈಡರ್ ಹತ್ತಿರ ನೋಂದಾಯಿಸಿ ಕೊಂಡ ಮೇಲೂ, ಈ ತರಹದ ಕಾಟ ತಪ್ಪಿಲ್ಲವಲ್ಲ, ದಿನಕ್ಕೆ ಬೇಡದ ಹತ್ತು ಮೆಸೇಜ್ ಗಳು ಬಂದರೆ ಆಗೋ ಹಿಂಸೆ , ಅನುಭವಿಸಿದವರಿಗೆ ಗೊತ್ತು. ಹೋದ ಬಾರಿ Alumni Association ಮೀಟಿಂಗ್ ನಲ್ಲಿ ಸಿಕ್ಕಿ, ನಾನು ಸ್ಟಾಕ್ ಮಾರ್ಕೆಟ್ Derivative ಸ್ಟ್ರ್ಯಾಟಜೀ ಕೊಡೋ ಬಿಸ್ನೆಸ್ ಶುರು ಮಾಡಿದ್ದೀನಿ ಸಬ್‌ಸ್ಕ್ರೈಬ್ ಮಾಡಿ ಅಂತೆಲ್ಲಾ ಕೊರೆದಿದ್ದನಲ್ಲ, ಅವನದೇ ಕಿತಾಪತಿ ಇರಬಹುದು ಅಂತ ಅನ್ನಿಸ್ತು. “ಸಧ್ಯಕ್ಕೆ ಕ್ಯಾಶ್ ಮಾರ್ಕೆಟ್ ನಲ್ಲೇ ನನ್ನದೇನಿದ್ರೂ ವ್ಯವಹಾರ, Derivative ಸ್ಟ್ರ್ಯಾಟಜೀ ನನಗೆ ಬೇಡ” ಅಂತ, ಖಡ ಖಂಡಿತವಾಗಿ ಹೇಳಿದ್ದರೂ, mass message ಲಿಸ್ಟ್ ನಲ್ಲಿ ನನ್ನ ನಂಬರ್ ಸೇರಿಸಿಕೊಂಡಿದ್ದಾನಲ್ಲ, ದರಿದ್ರದವನು ಅಂತೆಲ್ಲಾ ಬೈಕೊಂಡು ಸುಮ್ಮನಾದೆ.

ನಾನು ಹಾಕಿದ ಶುಕ್ರವಾರದ ರಜೆಯು ಸೇರಿ, ಕಂಟಿನ್ಯುವಸ್ ನಾಲ್ಕು ದಿವಸ ರಜೆ ಇಂದಿನಿಂದ. ಮಹಾಲಯ ಅಮಾವಾಸ್ಯೆ ದಿನ ಡ್ರೈವ್ ಮಾಡ್ಕೊಂಡು ಬರ್ಬೇಡ ಶನಿವಾರ ಬಂದ್ರೆ ಸಾಕು ಊರಿಗೆ ಅಂತ ನಿನ್ನೆನೆ ಅಮ್ಮ ಉಪದೇಶ ಕೊಟ್ಟಿದ್ದಾಳೆ. ಇದೆಲ್ಲ ಕೇಳದ ಪ್ರಾಣಿ ನಾನು ಅಂತ ಗೊತ್ತಿದ್ದರು ಸಹಿತ. ಇವತ್ತು ಹೊರಟರೆ ಊರು
ತಲುಪೊ ಹೊತ್ತಿಗೆ ಇನ್ನೊಂದು ಹತ್ತು ಸಲ ಫೋನ್ ಮಾಡಿ ತಲೆ ತಿನ್ನೋದು ಗ್ಯಾರೆಂಟೀ ಅದರ ಬದಲು, ನಾಳೆ ಹೋಗೋದೆ ವಾಸಿ ಅಂತ ತೀರ್ಮಾನಿಸಿ , ವಾರ್ಡ್‌ರೋಬ್ ಕ್ಲೀನ್ ಮಾಡಿ ಬಿಡೋಣ ಅನ್ನುವ ತಿಂಗಳಿನಿಂದ ಪೆಂಡಿಂಗ್ ಇರುವ ಕಾರ್ಯವನ್ನ to do ಲಿಸ್ಟ್ ಗೆ ಹಾಕಿಕೊಂಡಿದ್ದೀನಿ.

CNBC ನಲ್ಲಿ ಉದಯನ್ ಮುಖರ್ಜಿ ಸಹ ಮಾರ್ಕೆಟ್ ಡೈರೆಕ್ಶನ್ ಬಗ್ಗೆ ತಲೆ ಕೆಡಿಸ್ಕೊಂಡಿದ್ದಾನೆ. ಬೀದಿ ಕೊನೆಯ ದೇವಸ್ಥಾನದಲ್ಲಿ, ಮಹಾಲಯ ಅಮಾವಾಸ್ಯೆ ಯ ಶಾಂತಿ ಹೋಮ ನಡೀತಿದೆ. ಬಹಳ ದಿನಗಳ ನಂತರ ಫೋನ್ ಮಾಡಿದ, ಗೆಳೆಯನೊಬ್ಬ, ಹೊದಬಾರಿ ಸಿಕ್ಕಾಗ “ಸತ್ಯಂ ಈಸ್ ನೌ ಇನ್ ಸೇಫ್ ಹ್ಯಾಂಡ್ಸ್” ಅಂತ ಹೇಳಿದ್ದೀಯಲ್ಲ, ಈ ರೇಟ್ ನಲ್ಲಿ ಇನ್‌ವೆಸ್ಟ್ ಮಾಡ್‌ಬಹುದೇನೋ ಅಂತ ಕೇಳಿದ. ಅವನ ಹತ್ತಿರ ಒಂದತ್ತೂ ನಿಮಿಷ ಮಾತಡಿ ಮುಗಿಸೋದ್ರಲ್ಲಿ ಮತ್ತೊಂದು ಮೆಸೇಜ್ ಈ ಬಾರಿ ಮತ್ತೊಬ್ಬ ಗೆಳೆಯ ಫಾರ್ವರ್ಡ್ ಮಾಡಿದ, ಖ್ಯಾತ ಜ್ಯೋತಿಷಿ ಯೊಬ್ಬರು ಸ್ಟಾಕ್ ಮಾರ್ಕೆಟ್ ಬಗ್ಗೆ ನೀಡಿದ, ಫೋರ್ಕಾಸ್ಟ್.

ಎಂಟು ವರ್ಷದ ಹಿಂದೆ ಷೇರು ಮಾರುಕಟ್ಟೆ ಗೆ ಮೊದಲ ಬಾರಿ ಪಾದಾರ್ಪಣೆ ಮಾಡಿದಾಗ, ಮುಹೂರತ್ ಟ್ರೇಡಿಂಗ್ ನಲ್ಲಿ ಯಾವುದಾದರೂ ಒಂದು ಸ್ಟಾಕ್ ಖರೀದಿ ಮಾಡಿದರೆ, ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ ಎಂದು ಪುಣ್ಯಾತ್ಮರೊಬ್ಬರು, ಷೇರು ಮಾರುಕಟ್ಟೆಯ ಮೊದಲ ಮೂಢ ನಂಬಿಕೆಯ ಪಾಟ
ವನ್ನು ಹೇಳಿದ್ದರು. ಕೆಲವು ವರ್ಷ ಗಳ ನಂತರ, ಆ ಮನುಷ್ಯ k-10 ಸ್ಕ್ರೀಪ್ಸ್ ನಲ್ಲಿ ಸಾಕಷ್ತ್ಟುಕೈ ಸುಟ್ಟಿ ಕೊಂಡಿದ್ದವರು ಎಂದು ತಿಳಿಯಿತು.
ಪಕ್ಕಾ ವ್ಯವಹಾರಸ್ತರೂ ತುಂಬಿರುವ ಈ ಷೇರು ಮಾರುಕಟ್ಟೆಯಲ್ಲಿನ ಕೆಲವು ಪಾಪ್ಯುಲರ್ ಮೂಢ ನಂಬಿಕೆಗಳು ಹಾಗೂ ಕೆಲವು ವಿಲಕ್ಷಣ ವ್ಯಕ್ತಿತ್ವದ ಟೇಡರ್ಸ್ ಗಳ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ. ಸಧ್ಯಕ್ಕೆ ದಕ್ಷಿಣ ಬೆಂಗಳೂರಿನಲ್ಲಿ ಧಾರಾಕಾರ ಮಳೆ.

`Forbes` in India May 25, 2009

Posted by nsworld in Business and Economy.
add a comment

Forbes, not a very unfamiliar name amongst Indians, even amongst those who never read a business paper or magazine. The name Forbes, makes every one of us remember its most popular, List of Richest people, published every year and couple of Indians, who always find a mention there. 

I was waiting to have the touch and feel of India Forbes, since the time I learnt that, Network 18(Parent of CNBC, CNN IBN, Awaaz), is partnering with Forbes LLC(Owner of Forbes Magazine) to bring the Indian version/edition of Forbes. And also was very curious about its approach, content, treatment and importance to India centric stories along with the best qualities of its world famous parent. 

Now the very first issue of “INDIA Forbes” is out and after having gone through each and every page of it for two days, I feel it can make a difference in the overcrowded Business News market in India, where more than ten players both in print and electronic are fighting for TRP/Readership. 

Forbes is not a kind of magazine, which always focuses on the issue/event, that happened last week or fortnight, which is the most common format of all other Business magazines. And “India Forbes” seems to be following the path of its parent, if the first issue is anything to go by. 

First issue is very rich in India centric contents. The cover page article on Lakshmi Mittal and his fight to save his Steel Empire from the onslaught of recession and host of other Industry related problems is a good piece to read. You can also see the other side of Vijay Mallya in this issue, the warrior Mallya fighting all odds to save his debt ridden empire. 

Rs.50 for a fortnightly issue, is bit high when compared to other competitors, but content wise seems to be fairly priced. Whether it succeeds in becoming, a widely read and respected magazine, or ends up as a great brand to showcase in ones house or office? I think, next few issues will clearly tell us that.

“Maggi” 25 not out!! April 16, 2009

Posted by nsworld in Generally Speaking.
1 comment so far

ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ, ದೂರದರ್ಶನದಲ್ಲಿ ಬರುತಿದ್ದ- “ಮಮ್ಮಿ ಭೂಕ್ ಲಗಿ ಹೈ” ಎಂದು ಕೂಗುತ್ತಾ ಬರುವ ಹುಡುಗನನ್ನು, “ಬಸ್ ದೊ ಮಿನಿಟ್” ಎಂದು ಹೇಳಿ ಆಕರ್ಷಕವಾಗಿ ಕಾಣುತಿದ್ದ `ಮ್ಯಾಗಿ` ಮಾಡಿಕೊಡುತಿದ್ದ ಮಮ್ಮಿ- ಜಾಹೀರಾತು ಬಹಳವಾಗಿ ಆಕರ್ಷಿಸಿತ್ತು. ನಮ್ಮಮನಿಗೆ “ನಮ್ಮನೆಯಲ್ಲೂ ಇದನ್ನು ಮಾಡು” ಎಂದು ಪೀಡಿಸಿದರೆ, “ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂಬ ಸಿದ್ದ ಉತ್ತರದ ಜೊತೆಗೆ ಎರಡೇ ನಿಮಿಷದಲ್ಲಿ ತಯಾರಿಸಬಹುದಾದ ದೇಶಿ ಆಲ್ಟರ್ನೇಟಿವ್ “ರಾಗಿ ಹುರಿ ಹಿಟ್ಟು” ಸಿಗುತ್ತಿತ್ತು. ಆದರೂ ಮ್ಯಾಗಿ ಯ ಮೇಲಿನ ಆಕರ್ಷಣೆ ಕಮ್ಮಿಯಾಗಿರಲಿಲ್ಲ.

ಮೊದಲ ಬಾರಿ ಹೈ ಸ್ಕೂಲ್ ನಲ್ಲಿರುವಾಗ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ, ಮ್ಯಾಗಿ ಮಾಡಲು ಪ್ರಯತ್ನಿಸಿ, ಹೇಗೆ ಮಾಡಬೇಕೆಂದು ತಿಳಿಯದೇ, ಪಾತ್ರೆಯಲ್ಲೇ ಅದು ಸೀದು ಹೋಗಿ, ಅಮ್ಮನ ಕೈಲಿ, ಸರಿಯಾಗಿ ಬೈಸಿಕೊಂಡಿದ್ದು ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ.

ಕಾಂಪಿಟೇಶನ್ ಇಲ್ಲದ ಸಮಯದಲ್ಲಿ ಭಾರತದ Ready to eat food segment ಗೆ ಕಾಲಿಟ್ಟ Nestle ಯವರ ಮ್ಯಾಗಿ, ಇಂದಿಗೂ ಸಹ ಶೇಕಡ 90 ರಸ್ಟ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದರೆ, ಒಂದು ಪ್ರಾಡಕ್ಟ್ ನ 25 ವರ್ಷದ ಪ್ರಯಾಣದಲ್ಲಿ ಕಡಿಮೆ ಸಾಧನೆಯೇನಲ್ಲ. ಇಂದು ಮ್ಯಾಗಿ ದೇಶದ FMCG ವಲಯದಲ್ಲಿನ ಒಂದು ಉತ್ತಮ ಹಾಗೂ ಪಾಪ್ಯುಲರ್ ಬ್ರ್ಯಾಂಡ್. ಪ್ರಾರಂಭ ವಾದಾಗಿನಿಂದ ಪ್ರತಿ ಹಂತದಲ್ಲೂ ಬದಲಾವಣೆ ಗಳಿಗೆ ತನ್ನನ್ನು ಅಳವಡಿಸಿಕೊಳ್ಳುತ್ತ, ಮ್ಯಾಗಿ ಸಾಗಿ ಬಂದಿದೆ. ಇದರ Noodles ನ ಸಫಲತೆಯಿಂದ, ಉತ್ತೇಜಿತರಾಗಿ Nestle ಯವರು ಇದೆ ಬ್ರ್ಯಾಂಡ್ ನ ಅಡಿಯಲ್ಲಿ ಪ್ರಾರಂಭಿಸಿದ, ಸೂಪ್, ಸಾಸ್, ಹಾಗೂ ಕೋಕನಟ್ ಮಿಲ್ಕ್ ಗಳು, Noodles ನಷ್ತ್ಟು ಸಫಲವಾಗಲಿಲ್ಲ.

ತನ್ನ 25 ವರ್ಷಗಳ ಪ್ರಯಾಣದಲ್ಲಿ- ನಡುವಿನ ಕೆಲವು ವರ್ಷಗಳಲ್ಲಿ, `ಪ್ರೀತಿ ಜಿಂಟ` ಇದಕ್ಕಾಗಿ ಜಾಹೀರಾತು ನೀಡಿದ್ದರೆಂಬುದನ್ನು, ಹೊರತು ಪಡಿಸಿದರೆ – ಯಾವುದೇ Celebrity ಯ ಸಹಾಯವಿಲ್ಲದೆ, ಕೇವಲ “Health bhi, Taste bhi” ಎಂಬ ಪಂಚ್ ಲೈನಿ ನೊಂದಿಗೆ, ಯಶಸ್ಸಿನ ಹಾದಿಯಲ್ಲಿ ನಡೆದ ಏಕೈಕ ಬ್ರ್ಯಾಂಡ್ ಮ್ಯಾಗಿ.

ಮ್ಯಾಗಿಯ ಜಾಹಿರಾತುಗಳು ಮಕ್ಕಳನ್ನು ಕೇಂದ್ರೀಕೃತ ವಾಗಿರಿಸಿಕೊಂಡಿದ್ದರು ಸಹ, ಅನೇಕ Consumer research report ಗಳ ಪ್ರಕಾರ, ಇಂದು ಮ್ಯಾಗಿ ಕೇವಲ ಮಕ್ಕಳು ಬಯಸುವ, Impulsive buy (eg, chocolate, cold drink) ಆಗಿ ಉಳಿಯದೆ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ತಿಂಗಳ ದಿನಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ Essential buy ಆಗಿದೆ.

ಇವತ್ತಿಗೂ ಸಹ ಕೆಲವೊಮ್ಮೆ ಆಫೀಸ್ ನಲ್ಲಿ ಕೆಲಸ ಮುಗಿಸುವ ಹೊತ್ತಿಗೆ ,ಹೊಟೆಲ್ ಗಳೆಲ್ಲಾ ಮುಚ್ಚಿ, ಅರ್ಧ ಬೆಂಗಳೂರು ನಿದ್ರೆಗೆ ಶರಣಾಗಿ ರುವ ಸಮಯದಲ್ಲೂ, ಮನೆಯ ಅಡುಗೆ ಮನೆಯಲ್ಲಿ ನನಗಾಗಿ ಕಾದಿ ಕುಳಿತುರುವ, ಹಸಿರು ಪ್ಯಾಕೆಟ್ ನ Maggi Atta Noodles ಗೆ ಥ್ಯಾಂಕ್ಸ್ ಹೇಳಲು ಇದರ 25ನೇ ಬರ್ತ್‌ಡೇ ಒಂದು ಒಳ್ಳೆಯ ಸಂದರ್ಭ.

Why ANANTH still has an edge in Blore-South? April 2, 2009

Posted by nsworld in Generally Speaking.
1 comment so far

With the announcement of candidature of Krishna Byre Gowda, from INC, fierce contest to the prestigious Bangalore South has entered its final stage. Now it is crystal clear, fifth time aspirant Ananth Kumar, will be facing US educated, young and clean face of youth Congress, Krishna Byre Gowda. 

 

A close look at the results and the candidates who contested, from 1977 to 1996 shows us that, never at any point of time, any political party/ candidate showed interest in nurturing this constituency,(except for a brief period in 80s when Venkatagiri Gowda, contested multiple times from BJP and won in 1991). This constituency was always used as a ground to field educated and some times popular candidates, who seldom had interest in working for and nurturing the constituency.

 

Continuation of the same trend and attitude can be observed when we look at Capt. Gopinath choosing Blore south to test his luck and JD (s) bringing in Prof Radhakrishna. This attitude was also showed by, INC when reorganization of areas forming part of Constituency showed a different caste equation and Congress contemplated fielding retired and re-entered S M Krishna and finally deciding on Krishna Byre Gowda.

 

Ananth Kumar (four time winner 1996-98-99-2004)is the only candidate who has shown interest in nurturing the constituency with development projects and that’s probably the reason for his consecutive wins. May be Ananth, has not done exceptionally well when evaluated from the point of view of many of the  performance related parameters but still stands as the lone loyal and most reachable candidate, both to the elite and the common voters of the constituency.

 

Amnesia, pub attack in Mangalore, and Varun Gandhi’s hate speech are being used in the election campaign by candidates opposing Ananth, shows their lack of understanding and interest when it comes to the development of constituency per se. On a micro level, these two issues doesn’t have any relevance at all, for the voters of Bangalore south. Though termed as the constituency of elite and educated, but like any other ordinary voters of any other constituency, voters of Bangalore south are also, more interested in the quality of drinking water they get and issues like road, electricity, public library, Health centers, infrastructure and the approachability of the candidate representing them. Keeping this in mind, it would not be a surprise, if people of Bangalore south, prefer Ananth for the fifth time, rejecting all other migratory birds.

 

All said and done, this time its also not going to be a cake walk for Ananth, whose victory margin (in terms of the percentage of votes) has been decreasing since 1998 elections and also now he has a youthful, formidable candidate in the form of Krishna Byre Gowda. So this time it would make more sense for everybody, if candidates talk only about development and Bangalore South.