jump to navigation

ತೀರ್ಮಾನ December 27, 2007

Posted by nsworld in ಮನಸಿನ ಪುಟಗಳು.
trackback

ಪ್ರೀತಿಯ ಶಾಲು,
ನೀ ಎದುರುಗಡೆ ಇದ್ದಿದ್ರೆ, ಇಷ್ಟ್ಟೊಂದು ಸಲೀಸಾಗಿ ಹೇಳಕ್ಕೆ ಧೈರ್ಯ ಬರ್ತಿತ್ತೋ ಇಲ್ವೋ
ಗೊತ್ತಿಲ್ಲ. ಈ ವಿಷಯ phone ಮಾಡಿ ಹೇಳಣಾ ಅಂದ್ರೆ ನನ್ನ voice shake ಆಗೋದು ಖಂಡಿತಾ ನಿನಗೆ ಗೊತ್ತಾಗಿ ಬಿಡತ್ತೆ ಅಂತಾ. ಹೆಚ್ಹು ಕಮ್ಮಿ ಒಂದು ವರೆ ವರ್ಷ ಕಾದು ಕೊನೆಗೂ ಹೇಳೇಬಿಡಣ ಅಂತ ಮಾಡಿದಿನಿ. ಧೈರ್ಯ ಬರಕ್ಕೆ ಇಷ್ಟ್ತುದಿವಸ ಬೇಕಾಯ್ತ ಅಥವ ಸ್ವಲ್ಪ ಜಾಸ್ತೀ ನೆ ಯೋಚಿಸಿ , ಯೋಚಿಸಿ ದಿನ ಹಾಳು ಮಾಡಿದ್ನಾ ಗೊತ್ತಿಲ್ಲ.

ಚೆನ್ನಾಗಿ ನೆನಪಿದೆ ಅವತ್ತು Chennai-Bangalore flight 2 hours delay ಆಗಿತ್ತು. ಈ time ನಲ್ಲಿ Bangalore ನಲ್ಲಿ ಮನೆನ ಸೇರಬಹುದಿತ್ತು ಅಂತ ಬೈಕೊಂಡು ಕೂತ crowd ನಲ್ಲಿ ಒಬ್ಬರಿಗೊಬ್ಬರು ಗುರುತು ಪರಿಚಯ ವಿಲ್ಲದ ನಾವಿಬ್ಬರು ಸಹ ಇದ್ವಿ. ಗಂಟೆ ಗಳು ಕಳೆದು ಕೊನೆಗು Boarding call ಬಂದಾಗ, ಧಾವಂತ ದಲ್ಲಿ ನೀನುBoarding pass ನ ಅಲ್ಲೆ ಬೀಳಿಸಿಕೊಂಡು, ಒಡ್ತಾ ಇದ್ರೆ, ನಿನ್ನ ಹಿಂದೆ , ಹಳೇ ಹಿಂದಿ film Hero ತರಹ”excuse me” ಅಂತ ಕೂಗ್ತಾ ಬಂದೆ. “ತುಂಬಾ ಥ್ಯಾಂಕ್ಸ್” ಅಂತಾ ನಿನ್ನ ಬಾಯಿಂದ ಬಂದ ಕನ್ನಡ ಕೇಳಿ, ಕನ್ನಡದ ಹುಡುಗಿ ಅಂತಾ ಖುಷಿ ಆಗಿತ್ತು.

ಅದ್ರುಷ್ಟ್ಟನೊ ಏನೋ ಗೊತ್ತಿಲ್ಲ, ನನ್ನ  window seat ಪಕ್ಕದಲ್ಲೇ ನಿನ್ನ seat .”ನಂದು maiden flight, take off and  landing   ನೋಡ ಬೇಕು window ಪಕ್ಕ ನಾ ಕುತ್ಕೋತಿನಿ please” ಅಂತ ನೀನು innocent ಆಗಿ ಕೇಳಿದಾಗ, ಇಲ್ಲ ಅಂತ ಹೇಳೋ ಯೋಚನೇನು ಸಹ ಬರ್ಲಿಲ್ಲ. ಮುಂದಿನ ಗಂಟೆ ಯಲ್ಲಿ ನೀನು ಏನೇಲ್ಲಾ ಹೇಳಿದೆ. ನಿನ್ನ ಊರು ಯಾವುದು ಅಂತ, ಅಪ್ಪ ಅಮ್ಮ ಏನು ಮಾಡ್ತಾರೆ ಅಂತ, Quantum Physics ನಲ್ಲಿ specialise ಮಾಡ್ತಿರೋದು, JP Nagar ನಲ್ಲಿ Room ಮಾಡಿಕೊಂಡಿರೋದು.Chennaiನಲ್ಲಿ Seminarಇದ್ದದ್ದು.

Quantum Physics ಬಗ್ಗೆ ನಂಗೆ ಗೊತ್ತಿದ್ದನ್ನ ಸ್ವಲ್ಪ ಹೇಳಿ ನಾ ನಿನ್ನ impress ಮಾಡಕ್ಕೆ try ಮಾಡಿದ್ದೆ. “ಪರವಾಗಿಲ್ಲ,Finance Professional  ಅಂತಿಯಾ, ಏನೇನೋ ತಿಳ್ಕೋಂಡಿದ್ದಿಯಲ್ಲಾ” ಅಂತ cool ಆಗಿ ಏಕವಚನದಲ್ಲೇ ಸರಾಗವಾಗಿ ಹೇಳಿಬಿಟ್ಟೆ ನಮ್ಮಿಬ್ಬರ ಮಾತಿನ ಮಧ್ಯದಲ್ಲಿ Bangalore ಬಂದಿದ್ದು, ಗೊತ್ತೇ ಆಗಲಿಲ್ಲ. ಹೊರಟೇ ಹೋಗಿಬಿಡ್ತಾಳಲ್ಲ ಅಂತ ಮನಸ್ಸು ಕೊರಗುತ್ತಾ ಇತ್ತು.

“Can you give me your mobile number please ” ಅಂತ ಅಂದೇ ಬಿಟ್ಟೆ  ನೀನು.
ವಾಹ್ ! ನಮ್ಮಪ್ಪನಾಣೆ ನನಗಂತು ಈ ತರಹ ಕೇಳಕ್ಕಾಗುತ್ತಿರಲಿಲ್ಲ.

ಮನೆಗೆ ಬಂದ ಮೇಲು ನಿಂದೆ ನೆನಪು ಕಾಡುತಿತ್ತು, ನೀನು ಹಾಕಿಕೊಂಡಿದ್ದ Light yellow colour ಚೂಡಿದಾರ್, ಮಾತು ಮಾತಿಗು ಕಣ್ಣರಳಿಸಿ ಆಶ್ಚರ್ಯ ವ್ಯಕ್ತ ಪಡಿಸುತಿದ್ದ ನಿನ್ನ ದೊಡ್ದ ಕಣ್ಣುಗಳು, ಮಾತಿನ ಮಧ್ಯದಲ್ಲಿ ನೀನು ಉಪಯೋಗಿಸುತಿದ್ದ “ಹೌದ”, “ಹಾಗ” ಏಂಬ ಆಶ್ಚರ್ಯ ಸೂಚಕ ಪದಗಳು ನನ್ನನ್ನ ಮೋಡಿ ಮಾಡಿ ಬಿಟ್ಟಿದ್ದವು.

ಎರಡು ದಿವಸ ಬಿಟ್ಟು ಧೈರ್ಯ ಮಾಡಿ ನಿನಗೆ message ಮಾಡಿದ್ದೆ , “Shalini do you remember me? ” ಮರು ನಿಮಿಷದಲ್ಲೇ ನಿನ್ನ ಉತ್ತರ ಬಂದಿತ್ತು, “Do you think am suffering from Amnesia? Pavan I was about to call u ”  ಅರ್ಧ ಗಂಟೆ ನಂತರ phone ಮಾಡಿದ್ದೆ, ಅರಳು ಹುರಿದಂತೆ ಮಾತಾಡಿದ್ದೆ. ಆಗ ಏನು ಹೇಳುತಿದ್ದಿಯ ಅನ್ನುವುದನ್ನ ಕೇಳುವುದಕ್ಕಿಂತ ನಿನ್ನ ದ್ವನಿಯಲ್ಲೇ ಮುಳುಗಿ ಹೋಗಿದ್ದೆ.
ಅವತ್ತಿನಿಂದ ನಮ್ಮಿಬ್ಬರ ನಡುವೆ ಏಷ್ಟ್ತುphone ಗಳು ಹಾಗು message ಗಳು ಹರಿದಾಡಿತ್ತು.
ಸರಿಯಾಗಿ ನಮ್ಮ ಮೊದಲ ಭೇಟಿ ಯ ಆರು ತಿಂಗಳ ನಂತರ ಒಂದು ಶನಿವಾರ ಸಂಜೆ phone ಮಾಡಿ “ರಂಗ ಶಂಕರ ದಲ್ಲಿ ಒಂದು ಒಳ್ಳೆ ನಾಟಕ ಇದೆ, ಯಾವುದು ಅಂತ ಕೇಳುತ್ತಾ ತಡ ಮಾಡಬೇಡ ticket ತೊಗೊಂಡು ಕಾಯಿತ್ತಿರುತ್ತಿನಿ” ಅಂತ ಹೇಳಿದ್ದೆ. ಆರು ತಿಂಗಳ ನಂತರ ಮತ್ತೆ ನಿನ್ನನ್ನು ನೋಡ್ತಿರೋ ಸಂತೋಷದಲ್ಲಿ ಹೊಸ Allen Solly shirt ಹಾಕ್ಕೋಂಡು ಬಂದಿದ್ದೆ. ಸ್ವಲ್ಪಾ ಜಾಸ್ಥಿ Body spray ಸಹ. ಅರು ತಿಂಗಳ ನಂತರ ನೋಡಿದ್ರೂ ಸಹ ನಿನ್ನೆ, ಮೊನ್ನೆ ಭೇಟಿಯಾದವರ ತರಹ ಮಾತಾಡಿದ್ದೆ. “ಏನೋ ಒಳ್ಳೆ Board meeting attend ಮಾಡೋ ತರಹ ಬಂದಿದ್ದಿಯಲ್ಲಾ ” ಅಂತ ಹಾಸ್ಯ ಮಾಡಿದ್ದೆ. ಅದಾದ ನಂತರ ಎಷ್ಟ್ಟುdinner, lunch, message ಗಳು ನಡೆದು ಹೋಗಿ, ದಿನಗಳು ಕಳೆದದ್ದು ಗೊತ್ತೇ ಆಗಲಿಲ್ಲ.

ದಿನ ದಿನಕ್ಕು, ನಿನ್ನ ಪ್ರತಿ ಮಾತು, ನಡವಳಿಕೆ ಗೆ ಸೋಲುತ್ತಾ ಬಂದೆ. ಬಹಳಷ್ಟ್ಟು ದಿವಸ ಇದು infatuation ಅಥವಾ short term attraction ಅನ್ಕೊಂಡೆ. ಅಥವ ನಿನಗಿಂತ ಸುಂದರವಾದ ಇನ್ನ್ಯಾರೋ ಸಿಕ್ಕರೆ ಮರೆತು ಹೋಗ ಬಹುದು ಅಂತ , ಅಥವಾ ನನ್ನ ಬಾಳಿನಿಂದ ಹೇಳದೆ ಕೇಳದೆ ಹೋರಟೆ ಹೋದ ಪ್ರಿಯಾಳ ಜಾಗ ತುಂಬಲು ಇನ್ನ್ನ್ಯಾರಾದರು ಬೇಕಿತ್ತಾ ?ಅದಕ್ಕೆ ಮನಸ್ಸು ಹೀಗೆ ಮಾಡುತ್ತಿದೆ ಎಂದು ಸಮಾಧಾನ ಮಾಡಿಕೊಳ್ಳೂತ್ತಿದ್ದೆ.

ಇದು ಪ್ರೀತಿನಾ ಅಂತಾ ಮನಸ್ಸು ಒಂದು ಕಡೆ ಕೇಳುತಿದ್ದರೆ, ಪ್ರೀತಿ ಅಂದರೆ ಏನು ಅಂತ ಗೊತ್ತಿಲ್ಲದೆನೇ ಇದು ಅದು ಹೌದ ಅಥವಾ ಇಲ್ಲ ಅಂತ ಹೇಗೆ ಹೇಳೋದು? ಎಂಬ ಮೂಲಭೂತ ಪ್ರಶ್ನೆ ಕಾಡುತ್ತಿದೆ.

ನಿನ್ನ ಊರಲ್ಲಿರುವ ನಿನ್ನ ಅಪ್ಪ, ಅಮ್ಮ, ತಮ್ಮ, ನಿನ್ನ ನಾಯಿ ಬ್ರುನೋ, ಇವರೆಲ್ಲರೂ ನನ್ನವರೆ ಆಗಿ ಬಿಟ್ತಿದ್ದಾರೆ. ಆದರು ನಿಜ ಹೇಳುತ್ತಿನಿ, ನನ್ನ ಮನಸಿನ್ನಲ್ಲಿರುವ ಪ್ರಶ್ನೆ ಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ದಿನಗಳು ಉರುಳುತ್ತಿವೆ, ಇದು ಏನು ಹೌದೋ  ಏನು ಅಲ್ಲವೋ ಅಂತ ಗೊತ್ತಿದ್ದರು, ಗೊತ್ತಿಲ್ಲದಿದ್ದರು, ಪರವಾಗಿಲ್ಲ, ನನಗನಿಸಿದ್ದನ್ನ ನಾನು ಹೇಳೆ ಬಿಡುತ್ತಿನಿ ಕೇಳು. Bangalore ನಗರದಲ್ಲಿ ಆರಾಮವಾಗಿ two bed room flat ನಲ್ಲಿ ಸಂಸಾರ ಸಾಗಿಸುವಷ್ಟ್ಟು, ಅದಾಯ ನನಗಿದೆ, ಇನ್ನು ಆರು ತಿಂಗಳಲ್ಲಿ ಕಾರು ತೊಗೊಳೋಣ ಅಂತಿದ್ದಿನಿ, ಇದೆಲ್ಲಕ್ಕಿಂತ ಮಿಗಿಲಾಗಿ, ನೀನು ಇನ್ನ್ನ್ಯಾರನ್ನ್ನೋ ಮದುವೆ ಆಗೋದು ನನ್ನ ಕಣ್ಣಲ್ಲಿ ನೋಡೋಕ್ಕಾಗಲ್ಲ. ಮುಂದಿನ ದಿನಗಳಲ್ಲಿ ನಿನ್ನ ಮದುವೆ ಆಗಿ ತಪ್ಪು ಮಾಡಿದೆ ಅಂತ ಅನ್ನಿಸಿದರೂ ಪರವಾಗಿಲ್ಲ, ನಿನ್ನ ಹತ್ತಿರ ನನ್ನ ಭಾವನೆ ಹೇಳಿಕೊಳ್ಳಲಿಕ್ಕೆ ಆಗಲಿಲ್ಲ ಅನ್ನೋ ಕೊರಗು ಜಿವನ ಪೂರ್ತಿ ನನ್ನ ಕಾಡೋದು ಬೇಡ.

ನನ್ನ ಮದುವೆ ಆಗ್ತಿಯಾ ಶಾಲು?
ನಿನ್ನ ಉತ್ತರಕ್ಕೆ ಕಾಯುತ್ತಿರುತ್ತಿನಿ.
ನಿನ್ನ ಎದುರಿಗೆ ಬಂದು ಪತ್ರ ಕೊಡೋ ಧೈರ್ಯನೂ ಇಲ್ಲ ನನಗೆ. ಹೇಗೂ ಇವತ್ತು office ಬಿಡೋದು ತುಂಬಾನೆ ತಡ ಆಗುತ್ತೆ. ದಾರಿಯಲ್ಲಿ, ನಿನ್ನ ರೂಮಿನ ಕಿಟಕಿಯಲ್ಲಿ ಪತ್ರ ಇಟ್ಟು ಹೋಗುತ್ತಿದ್ದೀನಿ.

ನಿನ್ನನ್ನೇ ತಲೆಯ ತುಂಬಾ ತುಂಬಿ ಕೊಂಡಿರುವ ನಿನ್ನ,
ಪವನ್.

                                                   *********************************
ಮಧ್ಯ ರಾತ್ರಿ ಗಂಟೆ 12.30  ದಾಟಿತ್ತು. ಡಿಸೆಂಬರ್ ತಿಂಗಳಿನ ಥಂಡಿ ಗಾಳಿ ಬೀಸುತಿತ್ತು. ಆಗೊಂದು ಈಗೊಂದು ವಾಹನ ಗಳು ವೇಗವಾಗಿ ಹೋಗುತ್ತಿರುವ ಹೊಸೂರ್ ರೋಡಿನಲ್ಲಿ, ಆಗಷ್ಟ್ತೆ, ಕೆಲಸ ಮಾಡಿ ಮುಗಿಸಿ ಮನೆ ಕಡೆ ತೆರಳುತಿದ್ದ ಬೈಕ್ ಸವಾರನನ್ನು ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ವಾಹನ ನಾಪತ್ತೆ ಯಾಗಿತ್ತು. ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರನ ಜೇಬಿನಿಂದ ತೆಗೆದ ಪತ್ರವನ್ನು ಓದುತಿದ್ದ traffic inspector, ambulance ಗೆ phone ಮಾಡುತಿದ್ದ……..

Advertisements

Comments»

1. Sharath Kumar - December 27, 2007

prasad, you took me to one heck of a journey, i dont really know if this is real or otherwise, but this fell hard on me, it all started with “i didnt know this about you….” and all the stories……but was taken aback when it all ended……. Felt like our life may be past in a blink of an eye….

2. Prithvi - December 28, 2007

Guru, yaake sad ending?? i wish this is not real life incident…but u r awesome i wish i could get some inspiration to write in my blogspot which is empty since the day i created it 😦

3. Sharath - December 29, 2007

spellbound….

4. Malnad hudgi - December 29, 2007

ಹುಡ್ಗ ಇನ್ನೂ strong ಆಗಿ ಬರೀಬಹುದಿತ್ತು! ಇನ್ನೊಂದ್ ಸಲ ನೀನೇ ಒದು. ಇಷ್ಟು ಬರೆಯೊನಿಗೆ ಇನ್ನೂ ಬರೆಯೋ ಆಗುತ್ತೆ! I M sure.. happy writing…

5. Sandhya - December 8, 2008

ನಂಗೆ ತುಂಬ ಇಷ್ಟ ಆಯ್ತು.. ಹೀಗೆ ಬರೀತಿರಿ …


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: