jump to navigation

ಇರುವುದೆಲ್ಲವ ಬಿಟ್ಟು….. January 15, 2008

Posted by nsworld in ಮನಸಿನ ಪುಟಗಳು.
trackback

“ರೀ ಇವತ್ತು ಕಾಗದ ಬಂದಿದೆ, ನಮ್ಮ ನಂದಿನಿದು ಹಾಗು ಹುಡುಗಂದು ಜಾತಕ ಬಹಳ ಚೆನ್ನಾಗಿ ಆಗುತ್ತಂತೆ, ಹುಡುಗನ photoನು ಕಳಿಸಿದ್ದಾರೆ. ಮುಂದಿನ ವಾರನೆ ನೋಡಕ್ಕೆ ಬರುತ್ತಾರಂತೆ” ಅಂತ ಬ್ಯಾಂಕಿನಿಂದ ಬಂದು ಇನ್ನು ಶೂ ಕಳಚುವ ಮೊದಲೆ ಗಂಡ ನಿಗೆ ವರದಿ ಒಪ್ಪಿಸಿದ್ದರು ಸೀತಮ್ಮ. ತನ್ನ ರೂಮಿನಲ್ಲಿ ಪುಸ್ತಕದ ನಡುವೆ ಶಾಹಿದ್ ಕಪೂರ್ ನ ಹೋಲುವ ಚಾಕೊಲೆಟ್ ಮುಖದ ಹುಡುಗನ ಮುದ್ದು ಮುಖದ photo ನೋಡುತ್ತಾ ಕುಳಿತಿದ್ದಳು ನಂದಿನಿ.

ಕೊನೆಯ ವರ್ಷದ ಕನ್ನಡ MA ಫಲಿತಾಂಶ ಕಾಯುತಿದ್ದ ನಂದಿನಿಗೆ ಏನು ನಡೆಯುತ್ತಿದೆ ಅನ್ನೋಷ್ಟ್ಟರಲ್ಲಿ ಹುಡುಗನ ಕಡೆಯವರು ಬಂದಿದ್ದು, ನೋಡಿದ್ದು, ಮಾತಾಡಿದ್ದು, ಒಪ್ಪಿಗೆ ಕೊಟ್ಟಿದ್ದು, ಎಲ್ಲಾ ನಡೆದು ಹೋಗಿತ್ತು.

ಅದರೆ ಸದಾ ಸಾಹಿತ್ಯ, ಕಥೆ, ಕಾವ್ಯ ಪ್ರಪಂಚದಲ್ಲಿದ್ದ ಅವಳಿಗೆ ಅವತ್ತು ತನ್ನ ನೋಡಲು ಬಂದ ವಿನಯ್ ಇದಾವುದರ ಬಗ್ಗೆ ತನಗೆ ಸಂಬಧವೇ ಇಲ್ಲದ ಹಾಗೆ “ok, ok thats fine” ಅಂತ ಬರಿ ಬಾಯಿ ಮಾತಿಗೆ ಮೆಚ್ಹುಗೆ ವ್ಯಕ್ತ ಪಡಿಸಿದ್ದ. ಅವಳ ಜೊತೆ ಮಾತನಾಡಿದಷ್ಟ್ಟು ಹೊತ್ತು, ತುಂಬಾನೆ open ಆಗಿ ತನ್ನ ವಿದ್ಯಾಭ್ಯಾಸ, ತನ್ನ software profession ಬರೋ ಸಂಬಳ, ಕೆಲಸದ ಮೇಲೆ visit ಮಾಡಿದ ದೇಶಗಳು, ಮುಂದಿನ plans, ಬೆಂಗಳೂರಿನಲ್ಲಿ ತನಗಿರುವ site ಇದರೆಲ್ಲದರ ಬಗ್ಗೆ ಹೇಳಿ “ನಿನ್ನ ಅಭಿಪ್ರಾಯ ಸಂಕೋಚ ಇಲ್ಲದೆ ಹೇಳು” ಅಂತ ಹೇಳಿದ್ದ.

ಈ ವಿಷಯ ಅಮ್ಮನ ಬಳಿ ಹೇಳಿದಾಗ ” ಗಂಡಸರು ಮದುವೆ ಅಂದ್ರೆ ಯೋಚಿಸೊದು ಹಾಗೆ ಅಲ್ಲವೇನೆ?  ತನಗೆ ಬರುತ್ತಿರುವ ಆದಾಯ ದಲ್ಲಿ ತನ್ನ ಹೆಂಡತಿ ಮಕ್ಕಳನ್ನ ಸುಖವಾಗಿ ನೋಡಿಕೊಳ್ಳೊಕೆ ಆಗುತ್ತಾ?, ಸುಖ ಸಂಸಾರಕ್ಕೆ ತನ್ನ ಜವಾಬ್ದಾರಿ ಏನು? ಅಂತ, ಇದು ನಿಜವಾಗ್ಲು ಒಬ್ಬ ಜವಾಬ್ದಾರಿಯುತ ಹುಡಗನ ಲಕ್ಶಣ. ನಿನಗಿಷ್ಟ್ಟವಾಗುವುದರ ಬಗ್ಗೆ ಅವನಿಗೆ ತಿಳಿದಿಲ್ಲಾ ಅನ್ನೋದು, ಅದು ಒಂದು ದೊಡ್ಡ ವಿಷಯಾನಾ? ಗುಣ ಮುಖ್ಯ” ಎಂದು ಉತ್ತರಿಸಿದ್ದರು ಸೀತಮ್ಮ.

ಹೌದು ಅಂತ ಅನ್ನಿಸಿತ್ತು, ನಂದಿನಿಗೆ.  ಎಲ್ಲರು ಕವಿರಾಜ ಮಾರ್ಗ ಓದಿರಲಿ, ಅವನಿಗು ನನ್ನಂತೆ ಲಕ್ಶ್ಮಿ ನಾರಾಯಣ ಭಟ್ಟರ ಕವಿತೆ ಗಳು ಇಷ್ಟ್ಟ ಆಗ್ಲಿ ಅನ್ನೋದು ತಪ್ಪಲ್ಲವಾ ಅಂತ ಸಮಾಧಾನ ಮಾಡಿಕೊಂಡಿದ್ದಳು.

ಮಧುಚಂದ್ರಕ್ಕೆ ಮೊದಲ ಬಾರಿಗೆ ವಿಮಾನದಲ್ಲಿ Maldives ಗೆ ಹಾರಿದ್ದು, ಎಲ್ಲೆಲ್ಲಿ ನೋಡಿದರು ಕಾಣುವ ನೀಲಿ ಆಕಾಶ, ನೀಲಿ ಕಡಲು, ನಡುವಿನ ಹಸಿರು ಗುಡ್ದಗಳು ನಡುವೆ ವಿನಯ್ ನ ಬೆಚ್ಹನೆ ಅಪ್ಪುಗೆ, ಇವೆಲ್ಲದರ ನಡುವೆ ದಿನಗಳು ಕಳೆದದ್ದು ನಂದಿನಿ ಗೆ ಗೊತ್ತೆ ಆಗಲಿಲ್ಲ.

                                                       *******************                                     

ಕಾಲಿಂಗ್ ಬೆಲ್ ನ ಶಬ್ದಕ್ಕೆ ಧಡಕ್ಕನೆ ಗತ ನೆನಪು ಗಳ ತೆಕ್ಕೆಯಿಂದ ಬಿಡಿಸಿಕೊಂಡು ಎದ್ದಳು ನಂದಿನಿ. ಬಾಗಿಲು ತೆರೆದಾಗ ಎಂದಿನ ಕಳೆಗುಂದಿದ ಮುಖದೊಂದಿಗೆ ನಿಂತಿದ್ದ ವಿನಯ್. ಒಳಗೆ ಬಂದವನೆ ಹೆಚ್ಹು ಮಾತನಾಡದೆ “ಹೊಟ್ಟೆ ಹಸಿವಿಲ್ಲ ಒಂದು ಲೋಟ ಹಾಲು ಕುಡಿದು ಮಲ್ಕೊತಿನಿ” ಅಂತ ಹೇಳಿ ರೂಮಿನ ಬಾಗಿಲು ಹಾಕಿಕೊಂಡ.
 ನಂದಿನಿ ಗೆ ಇದು ಇವತ್ತಿನ ಕಥೆಯಲ್ಲ, ಎರಡು ತಿಂಗಳಿನಿಂದ ನಡಿಯುತ್ತಿರುವುದು.ಯಾಕೆ, ಏನು ಅಂತ ಯೋಚನೆ ಮಾಡಿ, ಅವನನ್ನ ಕೇಳಿ ಅವಳಿಗೆ ಸಾಕಾಗಿಹೋಗಿತ್ತು. ಏನೂ ಪ್ರಯೋಜನ ಇಲ್ಲವೆಂದು ಸುಮ್ಮನಾಗಿದ್ದಳು.

“ಕೆಲಸದ ಒತ್ತಡನಾ ಅಥವಾ ಏನು, ಯಾಕೆ ಇಷ್ಟ್ಟೊಂದು ಸುಸ್ಥಾಗಿ, tension ನಲ್ಲಿ ಇರ್ತಿಯಾ, ವಿನಿ doctor ಹತ್ತಿರ ಹೋಗೋಣವಾ” ಅಂತ ಅಂದಿದ್ದಕ್ಕೆ ” ನಿನಗೇನು ಗೊತ್ತು ಅಂತ ಮಾತಾಡ್ತಿಯಾ ತೆಪ್ಪಗಿರು” ಅಂತ ಅಬ್ಬರಿಸಿದ್ದ. ಹೆಚ್ಹಿಗೆ ಮಾತು ಕಥೆಯಿಲ್ಲದ ಒಂದೊಂದು ಸಾರಿ ಪೂರ್ತಿ ಮೌನದ ದಿನಗಳು ಅವಳಿಗೆ ಅಸಹನೀಯ ವಾಗತೊಡಗಿದ್ದವು.

ಅಡುಗೆ ಮನೆಯಲ್ಲಿ ಕೆಲಸ ಮಾಡುತಿದ್ದವಳನ್ನು ಹಿಂದಿನಿಂದ ಸದ್ದಿಲ್ಲದೆ ಬಂದು ಬಲವಾಗಿ ಅಪ್ಪಿಕೊಂಡು ” ಇವೆಲ್ಲಾ ಬಿಸಾಕು `ನಂದು`, ಇವತ್ತು ಊಟಕ್ಕೆsouth indies ಗೆ ಹೋಗಣ, table book ಮಾಡಿದಿನಿ, get ready fast ಚಿನ್ನ” ಅಂತ ಅವಸರಪಡಿಸಿದ್ದ;

India twenty twenty World Cup ಗೆದ್ದಾಗ ಮಗುವಿನಂತೆ sofa ದ ಮೇಲೆ ಕುಣಿದು, ಟಿಪಾಯಿಯ ಮೇಲಿಟ್ಟಿದ್ದ flower vase ನ ಒಡೆದು ಹಾಕಿದ್ದ; ವಿನಿ ಎಲ್ಲಿ ಹೋದ? ಅವನಿಗ ಏನಾಯಿತು ಎಂಬುದು ಬಿಡಿಸಲಾಗದ ಸಮಸ್ಯೆಯಾಗಿತ್ತು. ಗಡಿಯಾರದ ಮುಳ್ಳು 11 ನ್ನ ತೋರಿಸುತಿದ್ದರೂ ನಿದ್ದೆಯ ಜಾಗವನ್ನು ಯೋಚನೆ ಗಳು ಆಕ್ರಮಿಸಿದ್ದವು.

“ವಿನಯ್ ಹುಚ್ಹು ನಿಂಗೆ ಎರಡು ವರೆ ಸಾವಿರದ ಚಪ್ಪಲಿನಾ ನನಗೆ, ಖಂಡಿತಾ ಬೇಡಾಪ್ಪ, ನಿಂಗೊತ್ತಾ? ನಮ್ಮಪ್ಪನ ಮನೆಲ್ಲಿ ನಮ್ಮ3 ಜನರ ಸಂಸಾರಕ್ಕೆ ತಿಂಗಳ ದಿನಸಿ ಖರ್ಚು ಇದಕ್ಕಿಂತ ಕಮ್ಮಿ ಆಗುತ್ತೆ” ಅಂದಿದ್ದಳು. ” `ನಂದು` ದುಡ್ದಿದ್ದಾಗ ಮಜ ಮಾಡಬೇಕು ಕಣೆ, ವಿನಯ್ ಹೆಂಡತಿ ಎಂತಾ cheap ಆಗಿರೊ ಚಪ್ಪಲಿ ಹಾಕ್ಕೊಂಡಿದ್ದಾಳೆ ಅಂತ ಜನ ಮಾತಾಡಿದ್ರೆ ನಂಗೆ ಅವಮಾನ ಗೊತ್ತ” ಅಂತೆಲ್ಲಾ ಹೇಳಿ ಅವಳನ್ನ convince ಮಾಡಿದ್ದ.

ಕೇವಲ ಎರಡೇ ವರ್ಷ ಹಳೆಯದಾದ ಚೆನ್ನಾಗಿರುವ 29 inchನ T V ಮಾರಿ LCD TVನ ತಂದಾಗಲಂತೂ ಅವಳಿಗೆ ಇವನು ಯಾಕೆ ಹೀಗೆ ಮಾಡ್ತಾನೆ ಅಂತ ಗೊತ್ತಾಗದೆ, ಬೆಪ್ಪಾಗಿ ಕುಳಿತಿದ್ದಳು. ” ಏ ನಂದು ನನ್ನ colleagues ಗಳಲ್ಲಿ LCD TV ತೋಗೊತಿರದು ನಾನೆ ಕೊನೆಯವನು ಗೊತ್ತಾ? ನಮ್ಮsenior manager ಮನೆಲಿ LCD TV ಬಂದು ಎರಡು ವರ್ಷ ಆಗಿದೆ, ಇದ್ರ clarity ಈ CRT technology ಗೆ compare ಮಾಡಕ್ಕಾಗಲ್ಲ ಗೊತ್ತ? ನೀನು happy ಆಗಿರು ಚಿನ್ನworry ಮಾಡ್ಕೊಬೇಡ just four instalments ಅಷ್ಟ್ಟೆ”.

ಅರೆ! ನಾನು ನೋಡೋದು ನಾಲ್ಕು ಸೀರಿಯಲ್ ಹಾಗು ಒಂದು ಸಾರೆಗಮ programme ಗೆ ಆ TV ನೆ ಜಾಸ್ತಿಯಾಗಿತ್ತು ನಾನ್ಯಾವತ್ತು LCD TV ಬೇಕು ಅಂತ ಹೇಳೇ ಇಲ್ವಲ್ಲ ಅಂತಾ ಹೇಳ್ತಿದ್ದ ಅವಳ ಮಾತನ್ನ ಕಿವಿ ಮೇಲೆ ಹಾಕಿಕೊಳ್ಳದೆ ” ಇದರ picture in picture technology ಸಕತ್ತಾಗಿದೆ” ಅಂತ ಕೂಗ್ತಿದ್ದ.

“ನೀನು driving class ಸೇರ್ಕೊ `ನಂದು `ನಿಂಗೆ ಅಂತನೆ separate ಕಾರ್ ತೊಗೊಳೊಣ” ಅಂದಿದ್ದಕ್ಕೆ,  ” ಇಲ್ಲ ನಂಗೆ ಕಾರ್ drive ಮಾಡೋದು ಇಷ್ಟ್ಟ ಇಲ್ಲ ನಿನ್ನ ಪಕ್ಕ ಕೂರ್ತಿನಲ್ಲ ಅದೆ ನಂಗೆ ಸಾಕು ನನ್ನ force ಮಾಡಬೇಡ please” ಅಂತ ಕೂಗಿ ಅತ್ತಿದ್ದು, ಹೀಗೆ ಒಂದೊಂದು ಘಟನೆ ಗಳು ಅವಳ ಕಣ್ಣ ಮುಂದೆ ಓಡ್ತಾ ಇದ್ರೆ ಗಡಿಯಾರದ ಮುಳ್ಳು ಮಧ್ಯ ರಾತ್ರಿ ಎರಡು ಗಂಟೆ ತೋರಿಸುತಿತ್ತು. Drawing room ನ ಸೀಲಿಂಗ್ fan ನ ನೋಡ್ತಾ ಕುಳಿತಿದ್ದ ನಂದಿನಿ ರೂಮಿನ ಬಾಗಿಲು ತೆರೆದ ಸದ್ದಿಗೆ ಹಿಂತಿರುಗಿ ನೋಡಿದಳು.

ರೂಮಿನ ಬಾಗಿಲಿನಲ್ಲಿ ಕಣ್ಣ ತುಂಬ ನೀರು ತುಂಬಿಕೊಂಡು ನಿಂತಿದ್ದ ವಿನಯ್ , ನಂದಿನಿ ಯ ಮುಖ ನೋಡಿದ ತಕ್ಶಣ ದುಃಖದ ಕಟ್ಟೆ  ಒಮ್ಮೇಲೆ ಒಡೆದಂತೆ ಜೋರಾಗಿ ಅಳುತ್ತಾ “ನಂದು ” ಅಂತ ಓಡಿ ಬಂದು ಅವಳ ತೊಡೆಯ ಮೇಲೆ ಮುಖವನ್ನಿಟ್ಟು ಜೋರಾಗಿ ಅಳತೋಡಗಿದ.”ಏಯ್ ವಿನಿ ಸಮಾಧಾನ ಮಾಡಿಕೊಳ್ಳೊ, ಏನಾಯ್ತು ಹೇಳು ,ಪುಟ್ಟ ಮಕ್ಕಳ ತರಹ ಅಳ್ತಿಯಲ್ಲೋ ಹುಚ್ಹ ನಾನಿಲ್ವ ನಿಂಜೊತೆ” ಎನ್ನುತ್ತಾ ಅವನ ಮುಖವನ್ನು ಮೇಲಕ್ಕೆತ್ತಿದಳು.

“ನಂದು ನಾನು ಕೆಲಸ ಮಾಡುತಿದ್ದ ಆ American Banking project, sub-prime crisis ನಿಂದ client  ಗೆ ತುಂಬಾ loss ಆಗಿ 50% rampdown ಆಗ್ತಿದೆ. ಕಂಪನಿ management ಈ project ನಲ್ಲಿ ಕೆಲ್ಸ ಮಾಡುತಿದ್ದ almost 50% engineers ನ layoff ಮಾಡಿದೆ. ನಾನು senior ಅಂತ ಇದೇ project ನಲ್ಲಿ ನನ್ನ ಹಳೇಯ salary ಯ 50% ಗೆ work ಮಾಡಬಹುದು ಅಥವಾ  ಇನ್ನೆರಡು ತಿಂಗಳಿನಲ್ಲಿ ಬೇರೆ ಕೆಲಸ ನೋಡ್ಕೊ ಅಂತ ಹೇಳಿದ್ರು, ಇದನ್ನ ನಾನು ನಿನಗೆ ಹೇಳಲೇ ಇಲ್ಲ. ಇಷ್ಟ್ಟು ಸಂಬಳಕ್ಕೆ ಇನ್ಯಾವುದಾದರು ಕೆಲ್ಸ ಸಿಕ್ಕೆ ಸಿಗುತ್ತೆ ಅನ್ನೋ confidence ನಂಗಿತ್ತು. ಆದ್ರೆ ಈ ಎರಡು ತಿಂಗಳಲ್ಲಿ ನನ್ನ profile ಗೆ suit ಆಗೊಂತ ನನ್ನ salary expectation ಗೆ ತಕ್ಕ ಯಾವ ಕೆಲ್ಸಾನು ಸಿಗಲಿಲ್ಲ. ಇದೇ ಕೆಲಸದಲ್ಲಿ, ಅರ್ಧ ಸಂಬಳಕ್ಕೆcontinue ಮಾಡೊ ಒಂದೆ option ನನಗುಳಿದಿರುವುದು. `ನಂದು` ನಮ್ಮfuture ಬಗ್ಗೆ ಏನೆಲ್ಲಾ ಕನಸು ಇತ್ತು, ನಿನ್ನ ತುಂಬಾ ಚೆನ್ನ್ನಾಗಿ ನೋಡ್ಕೊಬೇಕು ಅನ್ನೋ ಆಸೆ ನಂಗಿತ್ತು, ಬೇಜಾರಿಲ್ಲ ತಾನೆ”, ಎಂದು ಒಂದೇ ಉಸಿರಿನಲ್ಲಿ ಎಲ್ಲವನ್ನು ಹೇಳಿದ.
ಇಷ್ಟ್ಟು ದಿವ್ಸ ಮನಸಿನಲ್ಲಿ ಹೆಪ್ಪು ಗಟ್ಟಿದ್ದ ಭಾವನೆಗಳು ಹರಿದು ಬಂದದಕ್ಕೆ, ಒಂದು ಕಡೆ ಸಂತಸ, ಇನ್ನೊಂದು ಕಡೆ ಅವನ ಅಸಹಾಯಕತೆಯ ಬಗ್ಗಿ ಉಕ್ಕಿ ಬರುತಿದ್ದ ಅನುಕಂಪ ಪ್ರೀತಿ ಎಲ್ಲ ಕೂಡಿ ಗದ್ಗದಿತಳಾಗಿ “`ವಿನಿ`, ನನಗಿದಾವುದರಿಂದನು ಬೇಜಾರಿಲ್ಲ ಕಣೋ, ನಮ್ಮಪ್ಪನಿಗೆ ಬರುತಿದ್ದ ಹತ್ತು ಸಾವಿರ ರೂಪಾಯಿ ಸಂಬಳದಲ್ಲಿ ನಾವೆಷ್ಟ್ಟು ಸುಖ ವಾಗಿದ್ದೆವೋ ಅದಕ್ಕಿಂತ ಒಂದು ಚೂರೂ ಜಾಸ್ತಿ ಬೇಡ ನನಗೆ”.

“ನಾನು ನನಗಿಷ್ಟ್ಟವಾದ ನಾಲ್ಕು ಸಾಲುಗಳ ಪುಟ್ಟ ಕವಿತೆ ಓದಿ ಹೇಳ್ದಾಗ, ನೀನು ಚೆನಾಗಿದೆ ಅಂತ ಹೇಳೊದಿರಲಿ, ನಂಗರ್ಥ ಆಗಲಿಲ್ಲ ಇದರರ್ಥ ಹೇಳೆ ಅಂತ ಹೇಳಿದ್ರೂ ನನಗೆ ಖುಷಿ ಆಗ್ತಿತ್ತು. ಅದರೆ, ಜೀವನದಲ್ಲಿ ಇದಕ್ಕೆಲ್ಲ್ಲ ಏನು value ಇಲ್ಲ ಅಂತ ಮುಖ ಮಾಡುತ್ತಿದ್ದಿಯಲ್ಲ, ಅವಾಗ ನನಗೆ ಬೇಜಾರು ಆಗುತಿತ್ತು. ಕೆಮ್ಮಣ್ಣು ಗುಂಡಿಯಲ್ಲಿ ಸೂರ್ಯಾಸ್ತ ನೊಡ್ತಾ ನಾನು ಮೈ ಮರೆತಿದ್ರೆ, ಮುಂದಿನ ರಜಕ್ಕೆ switzerland ಗೆ ಹೋಗಬೇಕು, ಇಲ್ಲೇನಿದೆ ಅಂತ ನೀ ಹೇಳಿದಾಗ ನಂಗೆ ಬೇಜಾರಾಗಿತ್ತು”.

“ನಿನ್ನ ಜೊತೆ ಕೊರೆವ ಚಳಿಯಲ್ಲಿ ಶಾಲು ಹೊದ್ದುಕೊಂಡು ಬಿಸಿ ಬಿಸಿ ಕಾಫಿ, ಕುಡಿಯುತ್ತಾ, ಬೆಟ್ಟದ ಮೇಲಿನ ಕೆಂಪನೆ ಸೂರ್ಯನನ್ನು ನೊಡಬೇಕು ಅನ್ನುವ ನನ್ನ ಆಸೆ ಮುಂದೆ, ನಿನ್ನ ಕನಸಿನ lawn ಇರೋ ದೊಡ್ಡ ಬಂಗ್ಲೆ, ವರ್ಷದಲೊಂದು foreign holiday, Luxury sedan car ಯಾವುದುನೂ, ದೊಡ್ಡದು ಅಂತ ಅನ್ನಿಸೋದೆ ಇಲ್ಲ ಕಣೊ….
ಜೀವನ ಸಾಗಿಸಕ್ಕೆ ದುಡ್ಡು ಬೇಡ ಅಂತ ಹೇಳೊಷ್ಟ್ಟು ಪೆದ್ದಿ ನಾನಲ್ಲ. ನಿಂಗೆ ಬರೊ ಸಂಬಳದಲ್ಲಿ ಸುಖವಾಗಿ ಜೀವನ ಮಾಡಬಹುದು ಅರ್ಥ ಮಾಡಿಕೊ….”
 
ಹೀಗೆ ಒಬ್ಬರಿಗೊಬ್ಬರು ಸಮಾಧನ ಹೇಳಿಕೊಳ್ಳುತ್ತಾ, ಮನಸನ್ನು ಹಗುರ ಮಾಡಿಕೊಳ್ಳುತಿದ್ರೆ,  ಹೊಸ ದಿನದ ಆರಂಭ ವನ್ನು ಸೂಚಿಸುತ್ತಾ, ಸೂರ್ಯ ಕಿಟಕಿಯಿಂದ ಮುಗುಳ್ನಗುತಿದ್ದ.

Advertisements

Comments»

1. Shreeprada - January 15, 2008

This post is a real eye opener one…. I think most of the young couples are behind so called “status maintenance”…and only people who have strong fundamentals can get through all the good and bad times with no harm to the relationship……good one…

2. ಗಿರೀಶ ಕೆ ಎಸ್ - February 17, 2008

ನಿಜ್ವಾಗ್ಲೂ ಈ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಜೀವನದ ಅವಶ್ಯಕತೆಗಳ ಬಗ್ಗೆ, ಈವತ್ತಿನ ಯುವಜನ ಹೇಗೆ ತಿಳ್ಕೊಂಡ್ ಇರ್ಬೇಕು ಅನ್ನೋ ಆಶಯ ವ್ಯಕ್ತವಾಗಿದೆ.

3. ashwini - October 8, 2008

The article is very heart touching. Yes, young generation really need to think over this


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: