jump to navigation

“Hi this is Nancy…… January 22, 2008

Posted by nsworld in ಮನಸಿನ ಪುಟಗಳು.
trackback

Come on.. speed up last 3 hours and another 100 ಅಂತ ಒಂದೇ ಸಮನೆ ಕೂಗುತ್ತಾ ಇದ್ದ Team lead. ಸಣ್ಣಗೆ ಒಂದೇ ಕಡೆ ನೋಯುತ್ತಿರುವ ತಲೆನೋವನ್ನು ಲೆಕ್ಕಿಸದೆ, ಮತ್ತೆ Phone ಎತ್ತಿಕೊಂಡು ” Hi this is Nancy calling from `Mega buck` can i talk to you for few minutes on our new Travellers card?” ಎಂದು ಪ್ರಾರಂಭಿಸಿದಳು. ಗೋಡೆಯ ಮೇಲಿನ ಒಂದು ಗಡಿಯಾರ ಅಮೇರಿಕಾದಲ್ಲಿ ಮಧ್ಯನ್ಹಾ 3 ಗಂಟೆ ಎಂದು ತೋರಿಸುತಿದ್ದರೆ, ಮತ್ತೊಂದು ಗಡಿಯಾರ ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆ ಎಂದು ಸೂಚಿಸುತಿತ್ತು. ಒಂದೇ ಸಮನೆ ಕೂಗಿ ಕೂಗಿ ಸುಸ್ತಾದ team lead ಸಹ, ಐದು ನಿಮಿಷ ಮಲ್ಗೋಣ ಅಂತ toilet ಗೆ ಹೋಗಿ ಬಾಗಿಲು ಹಾಕಿಕೊಂಡ.

6ಗಂಟೆ ಆಗುವುದನ್ನೇ ಕಾಯುತ್ತಿದ್ದ team ತಮ್ಮ ತಮ್ಮ system ನ log off ಮಾಡಿ ಹೊರಗೆ ಕಾಯುತ್ತಿರುವ cab ಗಳ ಹತ್ತಿರ ನಡೆಯಿತು.

8ಗಂಟೆ ಗಳ shift ನಲ್ಲಿ 10 product sale  ಮಾಡದೆ ಕಷ್ಟ್ಟ ಅಂತದ್ರಲ್ಲಿ ದರಿದ್ರದವರು target ನ 15 ಕ್ಕೆ ಏರಿಸಿದ್ದಾರೆ, ಇನ್ನು weekly review ನಲ್ಲಿ ಸರಿಯಾಗಿ perform  ಮಾಡಿಲ್ಲ ಅಂತ ಬೇರೆ, ಮಾತು ಕೇಳಬೇಕು, ಎಂದು ಗೊಣಗುತ್ತಾ cab ಬಳಿ ನಡೆಯುತಿದ್ರೆ, “ಏಯ್ ಶರ್ಮಿ… “ಎಂಬ ಧ್ವನಿಗೆ ತನ್ನ `ನ್ಯಾನ್ಸಿ` ಎಂಬ ಪ್ರಪಂಚದಿಂದ ಆಚೆಗೆ ಬಂದಳು ಶರ್ಮಿಳ ಅಲಿಯಾಸ್ ನ್ಯಾನ್ಸಿ. ಕೂಗಿದ್ದವಳು ಅವಳ ಗೆಳತಿ ಸುಮ ಅಲಿಯಾಸ್ ವಿನ್ಸಿ.

ಅಯ್ಯೋ ನಂದು ಬರೇ 8 ಆಯ್ತು, target reach ಅಗದೆದ್ರೆ ಕಷ್ಟ್ಟ, ಈ ಸಾರಿ appraisal ಏನಾಗುತ್ತೋ? ಎಂಬಷ್ಟ್ಟೇ ಮಾತುಗಳು cab ನ ತುಂಬೆಲ್ಲಾ ತುಂಬಿತ್ತು.

                                    ****************************************

ಎರಡನೆ ವರ್ಷದ BA English major ಓದುತಿದ್ದ, ಶರ್ಮಿಳಾ ಗೆ ಅವತ್ತು ರಾತ್ರಿ, ತನ್ನ ಅಪ್ಪ ಸತ್ತು ಹೋದ ಹಾಗೆ , ತಾನು ಅಪ್ಪನ ದೇಹದ ಎದುರು ಜೋರಾಗಿ ಅಳುತಿದ್ದ ಹಾಗೆ ಕನಸು ಬಿದ್ದಿತ್ತು. ಗಾಬರಿಯಿಂದ ಮೈ ಎಲ್ಲಾ ಬೆವರಿ ಧಡಾರನೆ ಎದ್ದು ಕುಳಿತಿದ್ದಳು. ಕಾಲೇಜಿನಲ್ಲಿ ಅವಳ favourite lecturer ಶಾಲಿನಿ ಮುಂದೆ ಈ ವಿಷಯ ಹೇಳಿದಾಗ, ಅಯ್ಯೋ ಮಂಕೆ ಅದಕ್ಕೆಲ್ಲ ಹೆದ್ರುಕೊಬೇಡ, ನಿನ್ನ ಕನಸಿನಿಂದ ನಿಮ್ಮಪ್ಪನಿಗೆ ಏನು ಆಗಲ್ಲ. Financial ಆಗಿ emotional ಆಗಿ ತಂದೆ ತಾಯಿಗಳ ಮೇಲೆ depend ಆಗಿರುವಂತಹ ವಯಸ್ಸಿನಲ್ಲಿ ಎಲ್ಲಾ ಮಕ್ಕಳಿಗೂ ಸಹಜವಾಗಿ ಬರೋ ಕನಸು ಇದು. ಮನೆಗೆ ಅಪ್ಪ,sole bread winner ಅವನಿಲ್ಲದಿದ್ರೆ, ನನ್ನ ಮತ್ತು ಅಮ್ಮನ ಗತಿ ಏನು ಅಂತ ನಿನ್ನ ಮನಸಿನಲ್ಲಿದ್ದ ಅವ್ಯಕ್ತ ಭಯ ಈ ರೀತಿ ಬಂದಿದೆ ಅಷ್ಟ್ಟೆ ಅಂತ ಅಂದಿದ್ದರು.

ಕಾಕತಾಳಿಯವೋ ಎಂಬಂತೆ ಇದಾದ ಒಂದು ತಿಂಗಳ ನಂತರ ಪುರೋಹಿತ ವ್ರತ್ತಿಯಿಂದ ತಮ್ಮ ಸಂಸಾರ ರಥವನ್ನು ನಡೆಸುತಿದ್ದ ಅವಳ ಅಪ್ಪ , ಹಠಾತ್ತನೆ ಬಂದೆರಗಿದ heart attack ನಿಂದ ಇಹ ಲೋಕದ ವ್ಯಾಪರವನ್ನು ಮುಗಿಸಿದ್ದರು. ಮುಂದೆ ಯಾವ ದಾರಿ ಇರಲಿಲ್ಲ, ಜೀವನ ಸಾಗ ಬೇಕಿತ್ತು, ಎದುರಿಗೆ ಇದ್ದ ಒಂದೇ ದಾರಿ ಅಂದ್ರೆ,  ಓದಿಗೆ ತಿಲಾಂಜಲಿ, ಹಾಗು ಕಾಲ್ ಸೆಂಟರ್ ಕೆಲಸ.

                  ***************************************************

ಮತ್ತೊಂದು ರಾತ್ರಿ, ಅಲ್ಲ ಅವಳ ಪಾಲಿಗೆ ದಿನದ ಕೆಲಸ ಶುರುವಾಗಿತ್ತು. ತನ್ನ ಕೆಲಸದ ಮಧ್ಯೆ, phone ಮಾಡಿ distrurb ಮಾಡಿದ್ದಕ್ಕೆ ಬಾಯಿಗೆ ಬಂದ ಹಾಗೆ ಬೈದಿದ್ದ ಒಬ್ಬನ ಬೈಗುಳವನ್ನು “Thanks very much Symonds, for your valuable time “ಎಂದು ಮುಕ್ತಾಯ ಮಾಡಿದ್ದಳು, ನ್ಯಾನ್ಸಿ. ಎರಡು ವರ್ಷದ ಹಿಂದೆ ಆಗಿದ್ರೆ ಈ ತರಹದ ಬೈಗುಳಗಳು, ಅಶ್ಲೀಲವಾದ comment ಗಳಿಗೆ ದಿನ ಎಲ್ಲಾ ತಲೆ ಕೆಡಿಸ್ಕೊಂಡು ಕೂತಿರ್ತಿದ್ದಳು. ಈಗ ಈ  inustry, business, culture, pressure ಎಲ್ಲಾ ಅರ್ಥವಾಗಿ ಬಿಟ್ಟಿದೆ. ದೂರವಾಣಿಯ ಆ ತುದಿಯಿಂದ ಯಾರು ಏನೇ ಅಂದರೂ,”Thank you for your valuable time” ಅನ್ನುವ ಮಂತ್ರ ಸಿದ್ದಿಸಿಹೋಗಿದೆ. ರಾತ್ರಿ ಎಲ್ಲ ಎಚ್ಹರವಾಗಿರುವ ಅಭ್ಯಾಸಕ್ಕೆbiological clock ಕೂಡ adjust ಆಗಿ ಬಿಟ್ಟಿದೆ. ತೀರ ನಿದ್ರೆ ಬಂದ್ರೆ ಇದ್ದೇ ಇದಯಲ್ಲ, toilet ನ seat ಮೇಲೆ ತೂಕಡಿಸೋದು, desk ಮೇಲೆ ನಿದ್ದೆ ಮಾಡೋ ಹಾಗಿಲ್ವಲಾ!!!

Team lead ಬಂದು toilet ನಲ್ಲಿ ಮತ್ತೆ used ಕಾಂಡೋಮ್ ಗಳು ಸಿಕ್ಕಿವೆ Admin ನವರು ಗಲಾಟೆ ಮಾಡ್ತಿದ್ದಾರೆ, this is the final warning, be careful ಅಂತೆಲ್ಲಾ ಹೇಳಿ ಹೋದ. ಯಾರೋ ಒಬ್ಬಿಬ್ರು ಮಾಡೊ ಕೆಲ್ಸಕ್ಕೆ ಎಲ್ರಿಗೂ ಕೆಟ್ಟ ಹೆಸರು ಅಂತ ಗೊಣಗಿಕೊಂಡು ಮತ್ತೆ phone ಎತ್ತಿದಳು ನ್ಯಾನ್ಸಿ.

ಜೇಮ್ಸ್ ಮತ್ತು ಲಿಂಡಾ ದು ಬ್ರೇಕ್ ಅಯ್ತು ಅಂತ ಅನ್ಸುತ್ತೆ, ಲಿಂಡಾ ಮತ್ತೆ orkut ನಲ್ಲಿ ಸಿಂಗಲ್ ಅಂತ ಹಾಕಿದ್ದಾಳೆ, ನೋಡು ಅಂತ ವಿನ್ಸಿ, messanger ನಲ್ಲಿ breaking news ಕಳಿಸಿದ್ದು ನೋಡಿ ಸಣ್ಣದಾಗಿ ತುಟಿ ಅಂಚಿನಲ್ಲಿ ನಕ್ಕು “sure our agent will drop at your place exactly at the appointed time “ಅಂತ ಹೇಳಿ phone disconnect ಮಾಡಿದಳು.

ಪಾಪ ಅಮ್ಮನ ಮೇಲೆ ಅಷ್ಟ್ಟೊಂದು ಕೂಗ ಬಾರದಿತ್ತು, ಅವಳು ಹೇಳಿದ್ರಲ್ಲಿ ತಪ್ಪೇನು ಇರಲಿಲ್ಲ. ಕಾಲ್ ಸೆಂಟರ್ ನಲ್ಲಿ ಇರೋ ಹುಡುಗಿ ಅಂದ್ರೆ ಗಂಡಿನ ಕಡೆಯವರು ಸಂಬಂಧ ಬೆಳಸಕ್ಕೆ ಹಿಂದೆ ಮುಂದೆ ನೋಡ್ತಾರೆ ಅನ್ನೋದು ಸತ್ಯ ತಾನೆ. ಅದ್ರೆ ಈ ಕೆಲಸ ಬಿಟ್ರೆ ತಿಂಗಳಿಗೆ 15000 ಸಿಗೋ ಇನ್ಯಾವ ಕೆಲಸ ಸಿಗತ್ತೆ? ಮನೆ ಬಾಡಿಗೆ ಆರು ಸಾವಿರ, ದಿನಸಿ, ಕರೆಂಟ್ ಬಿಲ್ಲು, ಫೋನ್ ಅಂತೆಲ್ಲಾ ಎಷ್ಟ್ಟು ಖರ್ಚಿರುತ್ತೆ, ಅಮ್ಮನಿಗೇನು ಗೊತ್ತಾಗುತ್ತೆ. ಹೋಗ್ಲಿ ನಾನು ಮದುವೆ ಆಗಿ ಹೋದ್ರೆ ಅಮ್ಮನ್ನ ನೋಡ್ಕೊಳೊಕ್ಕೆ ಅಣ್ಣ , ತಮ್ಮ ಅಂತನಾದ್ರು ಯಾರದ್ರು ಇದ್ದಾರ? ಅದು ಇಲ್ಲ… ಅಮೇಲೆ ಮದುವೆ ಆದ ಮೇಲೆ ತಾಯಿಗೆ ದುಡ್ಡು ಕೊಡೊದು ಬೇಡ ಅಂತ ಗಂಡ ಕೂಗಾಡಿದ್ರೆ, ಪಾಪ ಅವಳೇನು ಬೀದಿಲ್ಲಿ ಬೇಡಕ್ಕಾಗುತ್ತಾ? ಹೀಗೆ ತಲೆಯಲ್ಲಿ ನೂರಾರು ಯೋಚನೆ ತುಂಬಿಕೊಂಡು, ಇನ್ನು ಇಪ್ಪತ್ತು ನಿಮಿಷ ಬ್ರೇಕ್ ನಲ್ಲಿ ಏನಾದ್ರು ತಿಂದುಕೊಂಡು ಬರಬೇಕು ಅಂತ cafeteria ಕಡೆ ಹೆಜ್ಜೆ ಹಾಕಿದಳು.

smoking zone ನಲ್ಲಿ ದಟ್ಟವಾದ ಹೊಗೆಯ ನಡುವೆ, ಪಿಂಟೊ ತೊಡೆಯ ಮೇಲೆ ಕೂತ್ಕೊಂಡು ಕೇಕೆ ಹಾಕ್ತಿದ್ದ, ಲಿಂಡಾ Hey nancy…long time no see….ಅಂತ ಕೂಗಿದಳು. ಮತ್ತೆ ಹತ್ತಿರ ಹೋದರೆ ಆ ಪಿಂಟೊ ಮಖ ನೋಡಬೇಕಲ್ಲಾ ಅಂತ ಅಲ್ಲಿಂದಲೇ ಕೈ ಬೀಸಿ ಮುಂದೆ ಹೋದಳು.

ಕೆಲಸಕ್ಕೆ ಸೇರಿದ ಹೊಸದರಲ್ಲಿ ಇಲ್ಲಿಯ ವಾತವರಣ, ನಡವಳಿಕೆ ಎಲ್ಲಾ ನೋಡಿ ಗಾಬರಿ ಆಗಿದ್ದಳು. ಇದು ಸಾಲ್ದು ಅಂತ ನಿನ್ನ performance ಏನು ಸರಿ ಇಲ್ಲ you won`t survive here, ಅಂತ tem lead ಹೆದರಿಸಿದ್ದ ದಿನ ಅಂತು ಕಣ್ಣಲ್ಲಿ ನೀರು ಬಂದಿತ್ತು. ಸಮಾಧಾನದ ನಾಲ್ಕು ಮಾತುಗಳನ್ನು ಹೇಳಿದ್ದ, ಪಿಂಟೊ. ಆದರೆ ಸಮಾಧಾನ ಮಾಡುವ ನೆಪದಲ್ಲಿ ಅನವಶ್ಯಕವಾಗಿ ತನ್ನ ಮೈ , ಕೈ, ಎಲ್ಲಾ ಮುಟ್ಟುತಿದ್ದಾನೆ ಅಂತ ಗೊತ್ತದ ತಕ್ಷಣ ಅವನನ್ನ ದಬ್ಬಿ ಓಡಿ ಬಂದಿದ್ದಳು.

Marriage bureau ದಲ್ಲಿ ಹುಡುಗಿ private ಕಂಪನಿಲ್ಲಿ ಅಕೌಂಟೆಂಟ್ ಕೆಲಸ ಮಾಡ್ತಿದ್ದಾಳೆ ಅಂತ ಬರ್ಸಿದ್ದಿನಿ ಕಣೇ ಅಂತ ಅಮ್ಮ ಹೇಳಿದ್ದು ನೆನಪಾಯಿತು. ನಮ್ಮಗಳ ನಡುವೆ ಕೆಲವು ಜನ ಲಿಂಡಾ, ಪಿಂಟೊ, ಜೇಮ್ಸ್ ತರಹದವರು ಇರಬಹುದು, ಅದ್ರೆ, ನನ್ನಂತವರು, ವಿನ್ಸಿ, ರಾಬರ್ಟ್ ,ಕ್ಯಾಥರಿನ್ , ಮಾರ್ತಾ, ರಿಕ್ಕಿ, ರಿಚರ್ಡ್ , ತರಹ ದವರು ಸಾವಿರಾರು ಜನ ಹೊಟ್ಟೆ ಪಾಡಿಗಾಗಿ ನಿಯತ್ತಾಗಿ ದುಡಿತಾ ಇದಾರೆ ಅಂತ ಹುಡುಗನ ಕಡೆಯವರಿಗೆ ಹೇಗೆ convince ಮಾಡೋದು? ಅಥವಾ convince ಮಾಡೋಕ್ಕಾಗುತ್ತಾ? impossible … ಮತ್ತೆ ಯಾಂತ್ರಿಕ ವಾಗಿ phoneಎತ್ತಿದಳು “Hi this is Nancy calling from …..

Advertisements

Comments»

1. malnad hudgi - January 27, 2008

reallyyy nice!! you hv got hold nw

2. Srinivasa Acharya (Puli) - January 30, 2008

Naga, Wonderfull concepts choose madtiya and fantastic writing energy, which really occupies the reader mind…. but some time I feel you select or love tragedy ending stories (but honestly most of the times matches with fact).. Even some time your style remembers me Ravi Belagere writings …What ever it is my friend is a great writer …. I am proud of you 🙂

3. ಶ್ರೀ - April 6, 2008

ನಿಮ್ಮ ಕನ್ನಡ ಬರಹಗಳು ಚೆನ್ನಾಗಿವೆ… ಹೀಗೆಯೇ ಬರೆಯುತ್ತಾ ಇರಿ. ನೀವು ad agencyಯಲ್ಲಿ ಏನಾದ್ರು ಕೆಲ್ಸ ಮಾಡ್ತಿದ್ರಾ?

4. nsworld - April 7, 2008

Thanks, for the encouraging words. No i wasn`t working for any ad. agency.

5. Ganesh K - April 13, 2008

ಕಾಲ್ ಸೆಂಟರ್ ಉದ್ಯೋಗಗಳ ಬಗ್ಗೆ, ಉದ್ಯೋಗಿಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಅವರ ನೋವು ನಲಿವುಗಳು ಬರಹ ರೂಪದಲ್ಲಿ ಮತ್ತಷ್ಟು ಬರಲಿ. ನಿಮ್ಮೀ ಪ್ರತಿಸ್ಪಂದನ ಹೀಗೇ ಮುಂದುವರಿಯಲಿ ಎಂದು ಬಯಸುವ..
ಗಣೇಶ್.ಕೆ

6. dinesh - July 22, 2008

ಬರಹ ಚೆನ್ನಾಗಿದೆ….


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: