jump to navigation

ಸುಬ್ಬಮ್ಮ ಹಾಗೂ ಇನ್‌ವೆಸ್ಟ್‌ಮೆಂಟ್ ಬ್ಯಾಂಕುಗಳು…. October 4, 2008

Posted by nsworld in Business and Economy.
trackback

ಇತ್ತೀಚೆಗೆ ಆಚೆ ಮನೆ ಸುಬ್ಬಮ್ಮನೂ ಕೂಡ, ಎಕನಾಮಿಕ್ ಟೈಮ್ಸ್ ಓದಕ್ಕೆ ಹಾಗೂ CNBC ನೋಡಕ್ಕೆ ಶುರುಮಾಡಿದ್ದಾರೆ. ಸಬ್ ಪ್ರೈಮ್ ಕ್ರೈಸಿಸ್ ಅಂದರೆ ಏನು?, ಲೇಮನ್ ಬ್ರದರ್ಸ್ ಯಾಕೆ ಬ್ಯಾಂಕ್ರಪ್ಟ್ ಆಯ್ತು ಅನ್ನೋ ಪ್ರಶ್ನೆ ಎಲ್ಲಾ ಅವರ ತಲೆಯಲ್ಲೂ ಬರ್ತಾ ಇದೆ. ಸಾಫ್ಟ್‌ವೇರ್ ಕೆಲಸ ಮಾಡ್ತೀರೋ ಮಗನ ವರ್ತನೆ, ಹಾಗೂ ಮನೆಯ ಆರ್ಥಿಕ ಪರಿಸ್ಥಿತಿಗೂ ಹಾಗೂ ಅಮೇರಿಕಾದ ಆರ್ಥಿಕ ಪರಿಸ್ಥಿತಿಗೂ, ಸರಿಯಾಗಿ ಅಲ್ಲದಿದ್ರೂ, ಅಂತೂ ಏನೋ ಸಂಬಂಧ ಇದೆ ಅಂತ ಅವರಿಗೂ ಚೆನ್ನಾಗಿ ಗೊತ್ತಾಗಿ ಹೋಗಿದೆ. ೧೯೯೮ ಸುಮಾರಿಗೆ y2k ಅಂತ ಸಂತೋಷದಿಂದ ಅಮೇರೀಕಾಗೆ ಹೋದ ದೊಡ್ಡ ಮಗ ೨೦೦೧ ಇಸ್ವಿ ಹೊತ್ತಿಗೆ ಡಾಟ್ ಕಾಮ್, ಬಿದ್ದೋಯ್ತು, ರಿಸೆಶನ್ ಅಂತೆಲ್ಲಾ ಹೇಳಿಕೊಂಡು ಕೆಲ್ಸಾ ಕಳ್ಕೊಂಡು ವಾಪಸ್ಸು ಬೆಂಗಳೂರಿಗೆ ಬಂದು ಇಲ್ಲೇ ಕಷ್ಟ ಪಟ್ಟು ಕೆಲಸ ಹುಡುಕಿಕೊಂಡಿದ್ದು ಅವರ ನೆನಪಿನಿಂದ ಇನ್ನೂ ಮಾಸಿಲ್ಲ.

ಕುದುರೆಯಂತೆ ವೇಗವಾಗಿ ಓಡುತ್ತಿರುವ ಆರ್ಥಿಕತೆ ಎಂದು ವೇಗ ಕಡಿಮೆ ಮಾಡುವುದೇ ಇಲ್ಲವೆನ್ನುವ ಹುಮ್ಮಸ್ಸಿನಲ್ಲಿ, ಕಳಪೆ ದರ್ಜೆ ಸಾಲಗಾರರಿಗೆಲ್ಲ, ಗೃಹ ಸಾಲ ಮಂಜೂರು ಮಾಡಿದ ತಪ್ಪು ಒಂದು ದಿವಸ ಸಬ್ ಪ್ರೈಮ್ ಕ್ರೈಸಿಸ್ ಎಂಬ ದೊಡ್ಡ ಭೂತವಾಗಿ ಕಾಡುತ್ತದೆಂದೂ, ಇದರಿಂದ ದೊಡ್ಡ ದೊಡ್ಡ ಬ್ಯಾಂಕ್‌ಗಳು ಹಾಗೂ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ನೂರಾರು ಬಿಲಿಯನ್ ಡಾಲರ್‌ಗಳ ಪಂಗನಾಮ ಹಾಕಿಸಿಕೊಳ್ಳ ಬೇಕಾಗುತ್ತದೆಂದೂ ಯಾವ ದೊಡ್ಡ ದೊಡ್ಡ ಆರ್ಥಿಕ ತಜ್ಞನೂ ಉಹಿಸಿರಲಿಲ್ಲ . ಈ ಸಬ್ ಪ್ರೈಮ್ ಕ್ರೈಸಿಸ್‌ನಿಂದ  ಅಮೆರಿಕದ ಬ್ಯಾಂಕ್‌ಗಳಿಗೆ ಬಿದ್ದ ಹೊಡೆತ ಭಾರತದ ಸಾಫ್ಟ್‌ವೇರ್ ಕಂಪನಿಗಳಿಗೂ ಬಿದ್ದು ಸಾವಿರಾರು ಜನ ನೌಕರಿ ಕಳೆದುಕೊಂಡಿದ್ದು ಇನ್ನೂ ನೆನಪಿನಲ್ಲೇ ಹಸಿರಾಗಿರುವಾಗಲೇ, ಇದರಿಂದಲೇ ಶುರುವಾಗಿರಬಹುದಾದ ಅಥವಾ ಇದು ಒಂದು ಕಾರಣವಾಗಿರಬಹುದಾದ, ಮತ್ತೊಂದು ಸುನಾಮಿ ಅಮೆರಿಕಾದ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳನ್ನು ನೆಲಸಮ ಮಾಡಲು ದಾಳಿ ಮಾಡಿದೆ.

ಈ ಬಾರಿ ದಾಳಿ ಮಾಡಿದ ಶತ್ರು derivative ಎಂಬ complicated financial instrument ಹಾಗೂ liquidity crisis ಎಂಬ ನಾನಾ ರೂಪವನ್ನು ಧರಿಸಿ ಎಲ್ಲ ದಿಕ್ಕಿನಿಂದಲೂ ಆರ್ಥಿಕತೆಯ pillar ಗಳಾದ ಬ್ಯಾಂಕ್‌ಗಳ ಮೇಲೆ ನೇರ ಧಾಳಿ ಮಾಡಿ ಲೇಮನ್ ಬ್ರದರ್ಸ್ ಎಂಬ ದೈತ್ಯನನ್ನೇ ಕೆಡವಿದೆ. ಮುನ್ನುಗ್ಗುತ್ತಿರುವ ಗೂಳಿಯನ್ನೇ ಲಾಂಛನ ವಾಗಿಟ್ಟುಕೊಂಡಿರುವ ಮೆರಿಲ್ಲ್ ಲಿಂಚ್‌ನನ್ನು ಮಣ್ಣು ಮುಕ್ಕಿಸಿದೆ. ಸಾಲಗಿ ಜೋಡಿಸಿಟ್ಟ ಇಸ್ಪೀಟ್ ಎಲೆಗಳು ಒಂದಾದ ಮೇಲೆ ಒಂದು ಬೀಳುವಂತೆ ಈ ಪ್ರಪಂಚದಾದ್ಯಂತ ಶೇರು ಮಾರುಕಟ್ಟೆಗಳ ಮೇಲೆ,  ಕರೆನ್ಸಿ ಮಾರುಕಟ್ಟೆಗಳ ಮೇಲೆ cascading effect ಪ್ರಾರಂಭವಾಗಿದೆ. ಭಾರತದಲ್ಲಿನ ಬಹುಪಾಲು ಸಾಫ್ಟ್‌ವೇರ್ ಕಂಪನಿಗಳ  ಶೇಕಡ ೬೦ ರಷ್ಟು ಆದಾಯ ಬರುವುದು BFSI (Banking, Financial service, Insurance) ಸೆಗ್‌ಮೆಂಟ್‌ನಿಂದಲೇ. ಹಾಗಾಗಿ, ಇದು ಭಾರತದ ಸಾಫ್ಟ್‌ವೇರ್  ಕಂಪನಿಗಳ ಪಾಲಿಗೆ ದೊಡ್ಡ ತಲೆ ನೋವಾಗಿದೆ. ಪ್ರತಿ ವರ್ಷ ಸಾವಿರಾರು ಪಧವಿಧಾರರಿಗೆ ಉದ್ಯೋಗ ನೀಡುತ್ತಿರುವ ಭಾರತೀಯ BPO ಗಳ ಬಹುಮಟ್ಟಿನ ವ್ಯವಹಾರ ಬರುವುದು ಈ ಸೆಗ್‌ಮೆಂಟ್ ನಿಂದಲೇ.

ಈ ತರಹದ ತಲೆ ಹನ್ನೆರಡಾಣೆ ಆಗೊಂತಹ ವ್ಯವಹಾರಗಳನ್ನು ನೋಡುತಿದ್ರೆ,  “ನಮ್ಮ ಮಕ್ಕಳು  ಈ ಸುಡುಗಾಡು ಸಾಫ್ಟ್‌ವೇರ್ ಬದಲು ನಮ್ಮೆಜಮಾನರ ತರಹ ಯಾವುದಾದರೋ ಸರ್ಕಾರಿ ಉದ್ಯೋಗದಲ್ಲಿದ್ದು ನೆಮ್ಮದಿಯಾಗಿರಬಹುದಿತ್ತಲ್ವಾ” ಅಂತ ಸುಬ್ಬಮ್ಮನಿಗನಿಸಿದರೆ  ಆಶ್ಚರ್ಯವೇನಿಲ್ಲವಲ್ಲವೇ?

 

(ಕೆಂಡಸಂಪಿಗೆ ಗಾಗಿ ಬರೆದದ್ದು, ಸೆಪ್ಟೆಂಬರ್ ೨೨`೦೮)

Advertisements

Comments»

1. sambhavami - October 22, 2008

ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

2. ಶ್ರೀ - October 25, 2008

ಈಗೇನಂತೀರಿ ಇಕನಾಮಿಕ್ ಕ್ರೈಸಿಸ್ ಬಗ್ಗೆ? 🙂 ಏನಾದ್ರೂ ಬರೀರಲ್ಲ…


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: