jump to navigation

December 6ರ ಲಹರಿ December 7, 2008

Posted by nsworld in ಮನಸಿನ ಪುಟಗಳು.
trackback

cake1ಇವತ್ತಿಗೂ ಅಮ್ಮನ ಪ್ರಕಾರ ನನ್ನ ಹುಟ್ಟಿದ ಹಬ್ಬವೆಂದರೆ ಕಾರ್ತಿಕ ಬಹುಳ ದಶಮಿ  ದಿನವೇ. ಡಿಸೆಂಬರ್  ಏನಿದ್ದರೂ ನನಗೆ, ನನ್ನ ಕೆಲವು ಮಿತ್ರರಿಗೆ ಹಾಗೂ ಅಫೀಶಿಯಲ್ ರೆಕಾರ್ಡ್ಸ್ ಗಳಿಗೆ ಸೀಮಿತವಾದದ್ದು. ನಿನ್ನೆ ನನಗೆ ಫೋನ್ ಮಾಡಿದ ಪರಿಚಯದವರೆಲ್ಲಾ, ” ಹುಷಾರಪ್ಪ, ಅಲ್ಲಿ ಇಲ್ಲಿ ಅಂತ ಹೋಗಬೇಡ. ದೊಡ್ಡ ದೊಡ್ಡ ಹೊಟೆಲ್ ಗಳು, ಮಾಲ್ ಗಳು, ಏರ್ ಟ್ರಾವೆಲ್ ಅಂತೂ ಖಂಡಿತಾ ಬೇಡಅಂತಾನೆ ಹೇಳಿದ್ರು. ಇಲ್ಲಪ್ಪ ನನ್ನ ಜನ್ಮದಲ್ಲಿ ಇದುವರೆಗೂ ಬರ್ತ್‌ಡೇ ಅಂತೆಲ್ಲಾ ಆಚರಿಸಿಕೊಂಡವನೆ ಅಲ್ಲ, ನಾನೇನಿದ್ದರು ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ ಮಾಡಕ್ಕೆ ಮೈಸೂರು ಗೆ ಹೋಗ್ತೀನಿ ಅಂತ ಹೇಳಿದೆ.

ಹೋದ ವರ್ಷ ಇದೆ ಸಮಯದಲ್ಲಿ ಅಹ್ಮದಾಬಾದ್ ಗೆ ಹೊರಟಾಗ, “ಡಿಸೆಂಬರ್ , ಗುಜರಾತ್ ಗೆ ಅದು ಅಲ್ಲಿ ಎಲೆಕ್ಶನ್ ಟೈಮ್ , ಜೊತೆಗೆ ಏರ್ ಟ್ರಾವೆಲ್, ಬೇಡ ಅಂದ್ರೆ ಕೇಳ್ತಿಯ? ನೀ ಯಾವತ್ತು ನಮ್ಮ ಮಾತು ಕೇಳಿದ್ದೀಯ?” ಅಂತ ಹೇಳಿ ಮುಗಿಸಿದ್ರು ಹತ್ತಿರದವರೊಬ್ಬರು. ಡಿಸೆಂಬರ್  ನೇ ತಾರೀಖು ಸಂಜೆ ಏಳು ಗಂಟೆಗೆ ಹೊರಡ ಬೇಕಿದ್ದ ವಿಮಾನ, ಮೂರು ಗಂಟೆ ತಡವಾಗಿ ಕೊನೆಗೆ ಅಹ್ಮದಾಬಾದ್ ತಲುಪಿದಾಗ ರಾತ್ರಿ ೧೧:೪೫ ಆಗಿತ್ತು. ಬ್ಯಾಗೇಜ್ ಗೆ ಕಾಯುತ್ತಾ ನಿಂತಾಗ, ಅಲ್ಲಿ ಕಂಡಿದ್ದು ಎಲೆಕ್ಶನ್ ಕವರೇಜ್ ಗೆ ಅಂತ ಬಂದಿದ್ದ NDTV  ಬರ್ಖಾದತ್ ಮತ್ತವಳ ತಂಡ. ಫೋನ್ ಸ್ವಿಚ್ ಆನ್ ಮಾಡಿದ ತಕ್ಷಣ, ಬೆಂಗಳೂರಿನಿಂದ ಕರೆ ಮಾಡಿದ ಗೆಳತಿಮೆನೀ ಮೆನೀ………ಟೇಕ್ ಕೇರ್  “ಅಂತ ಹೇಳಿ ಮುಗಿಸಿದಳು ಜೀವನದಲ್ಲಿ ಸಾಧನೆ ಏನು ಮಾಡದಿದ್ರೂ ಸಹ, ಖಾಲಿ ಡೇಟ್ ಆಫ್ ಬರ್ತ್ ಇಂದ ಇದ್ದಕ್ಕಿದ್ದಂತೆ ನನ್ನ ಪರಿಚಯದವರ ನಡುವಿನಲ್ಲಿ ಪಾಪ್ಯುಲರ್ ಆಗಿಬಿಟ್ಟೇನಲ್ಲ ಅಂತ ಅನ್ನಿಸ್ತು.

ನಿನ್ನೆ ಕರೆಮಾಡಿದ ಕೊಲೀಗ್ ಒಬ್ಬರು ಇನ್‌ವೆಸ್ಟ್‌ಮೆಂಟ್ ಬ್ಯಾಂಕ್  ಒಂದರಲ್ಲಿ ಕೆಲಸ ಮಾಡುತಿದ್ದ, ಮದುವೆಗೆ ಇನ್ನೊಂದು ತಿಂಗಳು ಬಾಕಿಯಿದ್ದ ಅವರ ಮಿತ್ರ ಕೆಲಸ ಕಳೆದುಕೊಂಡಿದ್ದಾನೆ, ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಗಳ ಗ್ರಹಚಾರ ನೆಟ್ಟಗಿಲ್ಲದಿರುವ  ಸಮಯದಲ್ಲಿ ತಕ್ಷಣ ಕೆಲಸ ಸಿಗುವುದು ಕಷ್ಟ್ಟ ಇದೆ, ಮನೆ ಸಾಲ ಬೇರೆ ಮಾಡಿದ್ದಾನೆ, ತಿಂಗಳಿಗೆ ಸುಮಾರು ನಲವತ್ತು ಸಾವಿರ ಕಂತು ಅಂತ ಹೇಳಿದರು. ನಾನು ಹೌಸಿಂಗ್ ಲೋನ್ ಮಾಡಕ್ಕೆ ಮನೇನೆ ಕಟ್ಟಿಲ್ಲ, ಹಾಗೂ ತಿಂಗಳಿಗೆ ಸುಮಾರು ನಲವತ್ತು ಸಾವಿರದಷ್ಟ್ತು ಹೌಸಿಂಗ್  ಲೋನ್ ಗೆ ಕಟ್ಟೋ ಅಷ್ಟ್ತು ಸಂಬಳ ನನಗೆ ಬರಲ್ಲ ಅನ್ನೋ ವಿಷಯ ಮೊದಲ ಬಾರಿಗೆ ಬೇಜಾರುಂಟು ಮಾಡಲಿಲ್ಲ.

ಹೋದ ವಾರ Alumni association ನ  ಮೀಟಿಂಗ್ ನಲ್ಲಿ ಭೇಟಿ ಮಾಡಿದ್ದ ಖಾಸಗಿ ರೀಟೇಲ್ ಬ್ಯಾಂಕ್ ಒಂದರ Associate Vice president   ಒಬ್ಬರು ಫೋನ್ ಮಾಡಿ, ನನ್ನ ಟೀಮ್ ನಲ್ಲಿ ನಿಮಗೆ ಕೆಲ್ಸಾ ಮಾಡಲು ಆಸಕ್ತಿ ಇದೆಯಾ ಅಂತ ಕೇಳಿದ್ರು. ” ತುಂಬಾ ಥ್ಯಾಂಕ್ಸ್ , ಸಧ್ಯಕ್ಕೆ ಬದಲಾವಣೆ ಯೋಚನೆ ಮಾಡ್ತಿಲ್ಲ, ಅದರ ಯೋಚನೆ ಬಂದಾಗ ನಿಮ್ಮನ್ನೇ, ಮೊದಲು ಭೇಟಿ ಮಾಡ್ತೀನಿಅಂತ ಹೇಳಿ ಸುಮ್ಮನಾದೆ. ನಿಜ ಹೇಳಬೇಕಂದ್ರೆ, ಈ, laptop, spreadsheet, budgeting, forecast ಗಳ ಸಹವಾಸನೆ ಸಾಕಾಗಿ ಹೋಗಿದೆ. Travel and living channel ನಲ್ಲಿ  ಬರತ್ತೆ ನೋಡಿ, ಕಂಡ ಕಂಡ ಕಡೆ ಗೊತ್ತು ಗುರಿ ಇಲ್ಲದೇ ಸುತ್ತಿಕೊಂಡು ಕಂಡ ಕಂಡ ಹೊಟೆಲ್ ನಲ್ಲಿ ತಿನ್ನುತ್ತಾ ಅದರ ಬಗ್ಗೆ ತಮ್ಮ ಒಪೀನಿಯನ್ ಕೊಡ್ತಾರಲ್ಲ, ತರಹದ ಕೆಲಸ ಮಾಡಬೇಕಂತ ಮನಸ್ಸಾಗ್ತಿದೆ. ನೋಡಣ ಮುಂದಿನ ಡಿಸೆಂಬರ್ ಹೊತ್ತಿಗೆ ಅಲ್ಲ್ಲಲ್ಲ, ಕಾರ್ತಿಕ ಬಹುಳ ದಶಮಿಯ ಹೊತ್ತಿಗೆ ಏನಾಗಿರುತ್ತೆ ಅಂತ!!!!!!

Advertisements

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: