jump to navigation

Book Talk: Stay Hungry… December 16, 2008

Posted by nsworld in Books/Literature.
trackback

thebookಹಾರ್ಲಿಕ್ಸ್ ನಂತಹ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೂ ಸಹ ಪ್ರತಿ ಹದಿನೈದು ದಿನಕ್ಕೊಮ್ಮೆ , ‘ಬಿಸ್ನೆಸ್ ಇಂಡಿಯಾ’ ದ ಕೊನೆಯ ಪುಟಗಳನ್ನು ಬೇರೆ ಬೇರೆಯ ಕಡೆ ಇರಬಹುದಾದ ಕೆಲಸಗಳಿಗಾಗಿ ನೋಡುತ್ತಾರೆ ಎಂದರೆ, ‘ಕೆಲಸ ಹುಡುಕುವ ಕೆಲಸ, ಕೇವಲ ಕೆಲಸ ಇಲ್ಲದವರಿಗೆ ಮಾತ್ರವಲ್ಲ, you may not be looking FOR a job, but you would look AT a job’. ‘ಕೆಲಸವೇ ಇಲ್ಲದ ಅನೇಕ ಲಕ್ಷ ಜನ ಪ್ರತಿ ದಿನ ನೌಕರಿಗಾಗಿ ಎಲ್ಲೆಲ್ಲಿ ನೋಡ್ತಾ ಇರಬಹುದು? ಇವರಿಗೆಲ್ಲಾ ಒಂದೇ ಕಡೆ ಸಾವಿರಾರು ಕೆಲಸಗಳ ಬಗ್ಗೆ ಮಾಹಿತಿ ಸಿಗೋ ಹಾಗಾದ್ರೆ ಎಷ್ಟು ಚೆನ್ನಾಗಿರುತ್ತೆ? ಹಾಗೂ ಇದೊಂದು ಒಳ್ಳೆಯ ಬಿಸ್ನೆಸ್ ಐಡಿಯಾನೂ ಸಹ ಆಗಬಹುದಲ್ಲ ?’  ಹೀಗೆ ಒಂದೇ ಸಮಯದಲ್ಲಿ, ಹಾರ್ಲಿಕ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತಿದ್ದ ‘ಸಂಜೀವ್ ಬಿಕ್ಚಂದಾನಿ’ಯ ತಲೆ ಅನೇಕ ದಿಕ್ಕು ಗಳಲ್ಲಿ ಓಡುತಿತ್ತು.

ಯಾವತ್ತೋ ಒಂದು ದಿವಸ ಫ್ಲ್ಯಾಶ್ ಆದ ಐಡಿಯಾ ಸಂಜೀವ್ ನ ತಲೆಯಲ್ಲಿ ಕಾರ್ಯರೂಪಕ್ಕೆ ತರುವಷ್ಟುಮಟ್ಟಿಗೆ  ಬಹಳ ದಿವಸಗಳ ಕಾಲ ಬೆಳೆಯಲೇ ಇಲ್ಲ. ಒಂದು ದೊಡ್ಡ ‘ಡ್ಯಾಟ ಬೇಸ್’ ಮಾಡಬಹುದು ಸರಿ, ಆದರೆ ಅದನ್ನ ಸಾವಿರಾರು ಜನಕ್ಕೆ ತಲುಪಿಸುವ ಮಾಧ್ಯಮ ಯಾವುದು?, ಇದರಿಂದ ಹಣ ಗಳಿಸಲಿಕ್ಕೂ ಸಾಧ್ಯವಾ ಎಂಬ ಪ್ರಶ್ನೆಗಳು ಹಾಗೆಯೇ ಉಳಿದವು. ೯೦ ರ ದಶಕದ ಮಧ್ಯ ಭಾಗದಲ್ಲಿ, ಇದೇ ತರಹದ ನೂರೆಂಟು ಯೋಚನೆಗಳನ್ನೂ ತಲೆಯಲ್ಲಿಟ್ಟು ಕೊಂಡು ದೆಹಲಿ ಯ ಪ್ರಗತಿ ಮೈದಾನದಲ್ಲಿ IT ASIA ಎಂಬ ಪ್ರದರ್ಶನದಲ್ಲಿ  ಹೆಜ್ಜೆ ಹಾಕುತಿದ್ದ , ಸಂಜೀವ್ ಗೆ , ಅಲ್ಲಿದ್ದ VSNL ನವರ ಸ್ಟಾಲ್ ನಿಂದ ಭಾರತಕ್ಕೆ ಆಗಿನ್ನೂ ಕಾಲಿಟ್ಟಿದ್ದ ‘ಇಂಟರ್‌ನೆಟ್’  ಹಾಗೂ ‘ವೆಬ್ ಸೈಟ್ ’ ಎಂಬ ಹೊಸ ಬೆಳವಣಿಗೆಗಳ ಬಗ್ಗೆ ಗೊತ್ತಾಯಿತು. ಬಹುಶಃ ಸಂಜೀವ್ ನ ಜೀವನದ ‘ಯುರೇಕ ಮೊಮೆಂಟ್ ’ ಅವನಿಗಾಗಿ ಅಲ್ಲಿ ಕಾಯುತಿತ್ತು.

‘ಸಧ್ಯಕ್ಕೆ ನಿನ್ನ ಸಂಬಳದಲ್ಲಿ ಜೀವನ ನಡೆಸುವ ಗಂಡನಾಗ್ತಿನಿ ನಾನು’ ಎಂದು ಹೇಳಿ ನೌಕರಿಗೆ ವಿದಾಯ ಹೇಳಿ ತಮ್ಮ ಮನೆಯ ಔಟ್ ಹೌಸ್ ನಲ್ಲಿ ಪ್ರಾರಂಭ ಮಾಡಿದ, INFO EDGE ಮುಂದೆ ಅನೇಕ ಕಷ್ಟ ಕೋಟಲೆಗಳನ್ನೆದುರಿಸಿ, ಡಾಟ್ ಕಾಮ್ ಮೆಲ್ಟ್‌ಡೌನ್  ನಿಂದಲೂ ಪಾರಾಗಿ, ಒಂದು ದಿನ ಸುಮಾರು ವಾರ್ಷಿಕ 240 ಕೋಟಿಗೂ ಮೀರಿದ ಆದಾಯವುಳ್ಳ(2500 ಕೋಟಿಗೂ ಮೀರಿದ ಮಾರ್ಕೆಟ್ ಕ್ಯಾಪಿಟಲೈಸೇಶನ್), ನೌಕರಿ.ಕಾಮ್ (Naukari.com)ಎಂಬ ಕಂಪನಿಯಾಗಿ ಬೆಳೆದು ನಿಂತ ಕಥೆ ನಿಜವಾಗಿಯೂ ಕುತೂಹಲಕಾರಿಯೇ.

ಒಂದು ಡಾಟ್ ಕಾಮ್ ಕಂಪನಿಯಾಗಿ ಪ್ರಾರಂಭವಾಗಿ ಆರು ತಿಂಗಳಾದರೂ ಸಹ INFO EDGE ನ ಕಛೇರಿಯಲ್ಲಿ ಇಂಟರ್‌ನೆಟ್ ಸಂಪರ್ಕವೇ ಇಲ್ಲದಿದ್ದದ್ದು, ಹಾಗೂ ೨೦೦೦ ನೇ ಇಸ್ವಿಯ ಹೊತ್ತಿಗೆ ಕೇವಲ ೩೬ ಲಕ್ಷ ವಹಿವಾಟಿದ್ದ ಈ ಕಂಪನಿಯನ್ನು ICICI Ventures, ೪೫ ಕೋಟಿಗೂ ಮೀರಿ value ಮಾಡಿದ್ದು, ಹೀಗೆ ಇನ್ನೂ ಅನೇಕ ಹುಬ್ಬೆರಿಸುವಂತಹ ವಿಷಯಗಳಿವೆ ಇಲ್ಲಿ.

ಇದೊಂದೇ ಅಲ್ಲ, ಇದೇ ತರಹದ ಅಥವಾ ಇನ್ನೂ ಕುತೂಹಲಕಾರಿಯಾದ SINTEX, MPHASIS, MAKEMYTRIP.COM ಸೇರಿದಂತೆ ಒಟ್ಟು ಇಪ್ಪತ್ತೈದು motivating ಆಗಿರತಕ್ಕಂತಹ, ಜೀವನ ಪೂರ್ತಿ ಮಲ್ಟಿನ್ಯಾಶನಲ್ ಗಳ ಹಂಗಿನ ನೌಕರಿಗೆ ಬೀಳದೇ, ತಮ್ಮ ಕನಸುಗಳನ್ನು ನನಸು ಮಾಡುವ ಗುರಿಯನ್ನಿಟ್ಟುಕೊಂಡು ಕಡಿಮೆ ಜನರು ನಡೆದ ಹಾದಿಯಲ್ಲಿ ನಡೆದು ಅತ್ಯುತ್ತಮ ಭಾರತೀಯ ಹಾಗೂ ಭಾರತೀಯ ಮಲ್ಟಿನ್ಯಾಶನಲ್ ಕಂಪನಿಗಳನ್ನು ಕಟ್ಟಿ ಬೆಳಸಿದ ಇಪ್ಪತ್ತೈದು IIM ಅಹ್ಮದಾಬಾದ್ ನ ಹಳೆಯ ವಿಧ್ಯಾರ್ಥಿಗಳ ರೋಚಕ ಕಥೆ ರಶ್ಮಿ ಬನ್ಸಾಲ್ ರವರ ಇತ್ತೀಚಿನ ಪುಸ್ತಕ ‘STAY HUNGRY STAY FOOLISH’.

‘ಗ್ಯಾರೇಜ್ ಒಂದರಲ್ಲಿ ಪ್ರಾರಂಭವಾಗಿ, ಮುಂದೆ ವಿಶ್ವ ವಿಖ್ಯಾತ ಕಂಪನಿಯ ಯಾಯಿತೆಂದು’ ಸರಳವಾಗಿ ಸಿನಿಮೀಯ ಮಾದರಿಯಲ್ಲಾಗಲಿ ಅಥವಾ ಕಂಪನಿಗಳು ಬೆಳೆದು ಬಂದ ಹಾದಿಯನ್ನು ‘ಕೇಸ್ ಸ್ಟಡೀ’ ಯ ತರಹ ಅಂಕಿ ಅಂಶಗಳಿಂದಾಗಲಿ ರಶ್ಮಿ ತುಂಬಿಸಿಲ್ಲ. ಒಂದು ಕಥೆಯಲ್ಲಿರಬಹುದಾದ ರೋಚಕತೆಯನ್ನು ಹಾಗೂ ಪ್ರತಿಯೊಂದು ಕಂಪನಿಯೂ ತನ್ನ ಹಾದಿಯಲ್ಲಿ ಎದುರಿಸಿದ ಸವಾಲುಗಳನ್ನು ನೈಜವಾಗಿ ಚಿತ್ರಿಸುತ್ತಾ ಸಾಗುತ್ತಾರೆ ಬನ್ಸಾಲ್. ಇದು ಕೇವಲ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆನ್ನುವ ಆಕಾಂಕ್ಷಿಗಳಿಗೆ ಹಾಗೂ ಮ್ಯಾನೇಜ್ಮೆಂಟ್ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾದ ಪುಸ್ತಕವಲ್ಲ. ಒಬ್ಬ ಸಾಮಾನ್ಯ ಓದುಗನು ಸಹ ಆಸಕ್ತಿಯಿಂದ ಓದಬಹುದಾದ Value for your money ಪುಸ್ತಕ ಇದು.

Advertisements

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: