jump to navigation

ಹರ್ಷದ್ ಮೆಹ್ತ- ಒಂದು ನೆನಪು December 31, 2008

Posted by nsworld in Business and Economy.
trackback
harshad_mehta2  ಡಿಸೆಂಬರ್ 31 ಕ್ಕೆ ಹರ್ಷದ್ ಮೆಹ್ತ ಕೊನೆಯುಸಿರೆಳೆದು ಏಳು  ವರ್ಷಗಳಾಗುತ್ತದೆ ಎನ್ನುವುದನ್ನು ಬಿಟ್ಟರೆ, ಹರ್ಷದ್  ಮೆಹ್ತನನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ಕಾರಣಗಳೆನಿಲ್ಲ15,000 . ಅಡಿಯಷ್ಟು ದೊಡ್ಡದಾದ ಐಷಾರಾಮಿ ಬಂಗಲೆ ಯಲ್ಲಿ ಒಂದು ಕಾಲದಲ್ಲಿ ಜೀವಿಸುತಿದ್ದ, ಹತ್ತಾರು ವಿದೇಶಿ ಕಾರುಗಳ ಒಡೆಯನಾಗಿದ್ದಸುಮಾರು ಒಂದು ವರೆ ದಶಕಗಳ ಕಾಲ, ಮಾರುಕಟ್ಟೆ ವಲಯದಲ್ಲಿ ` ಬಿಗ್ ಬುಲ್ಎಂದೇ ಖ್ಯಾತನಾಗಿದ್ದ `Growmore Research and Asset Management ` ಒಡೆಯ ಹರ್ಷದ್ ಶಾಂತಿಲಾಲ್ ಮೆಹ್ತ, ನ್ಯಾಯಾಂಗ ಬಂಧನದಲ್ಲಿದ್ದ (ಥಾನೆ ಕಾರಾಗೃಹದಲ್ಲಿ) ಸಮಯದಲ್ಲಿ ಹೃದಯಾಘಾತ ಕ್ಕೊಳಗಾಗಿ, ಮುಂಬಯಿ ಸಿವಿಲ್ ಹಾಸ್ಪಿಟಲ್ ಒಂದರಲ್ಲಿ , ನಿರ್ಗತಿಕನೊಬ್ಬನಂತೆ ತನ್ನ ಕೊನೆಯುಸಿರೆಳೆದನು. ಅವನ ಸಾವು ಸಹಜವಾದದ್ದೇ? ಅಥವಾ, ಹಗರಣ ವೆಂಬ ವಿಷವರ್ತುಲದಲ್ಲಿ, ಇವನ ಜೊತೆಗಿದ್ದ ಅಥವಾ ಇದ್ದಿರ ಬಹುದಾದ ಮತ್ಯಾವುದೋ ಕಾಣದ ಕೈಯಿನ ಕೈವಾಡವಿತ್ತೇ ಎಂಬ ಮಾತುಗಳು ಇಂದಿಗೂ ಅಲ್ಲಲ್ಲಿ ಕೇಳಿಬರುತ್ತದೆ.

ಕೆಳ ಮಧ್ಯಮ ವರ್ಗದ ಗುಜರಾತಿ ಜೈನ್ ಕುಟಂಬದಲ್ಲಿ ಜನಿಸಿ, ಮುಂದೊಂದು ದಿವಸ ಭಾರತದ ಪ್ರಪ್ರಥಮ  Star Stock broker  ಆಗಿ ಪರಿವರ್ತನೆಗೊಂಡ, ವಾಣಿಜ್ಯ ಶಾಸ್ತ್ರದ ಪದವಿಧರ ಹರ್ಷದ್, ಬಹಳಷ್ಟ್ತು ಮಹತ್ವಾಕಾಂಕ್ಷಿ ಯಾಗಿದ್ದವನು. ” ನಾನು ಕನಸುಗಳ ನ್ನು ಮಾರುತ್ತೇನೆ, ಸಿರಿವಂತನಾಗುವುದು, ಪಾಪವಲ್ಲ, ನೀವು ಹರ್ಷದ್ ಮೆಹ್ತ ನಾಗಲೂ ಬಯಸುತ್ತಿರಾದರೆ, ಶೇರು ಮಾರುಕಟ್ಟೆ ಗೆ ಬನ್ನಿಎಂದು  ಸದಾ ಹೇಳುತ್ತಿದ್ದನು.

90  ದಶಕದಲ್ಲಿ ಅವನೆಷ್ಟ್ತು ಪ್ರಸಿದ್ದ್ದನು ಹಾಗೂ ಆರಾಧ್ಯನಾಗಿದ್ದಾನೆಂದರೆ, ಅವನನ್ನೇ ಅನುಸರಿಸುವ ಹೂಡಿಕೆದಾರರ ಒಂದು ದೊಡ್ಡ ಗುಂಪೇ ಇತ್ತು.92ರಲ್ಲಿ ಪ್ರಥಮ ಬಾರಿಗೆ ಹಗರಣ, ಬೆಳಕಿಗೆ ಬಂದು107 ದಿನಗಳ ಬಂಧನದ ನಂತರ ಜಾಮಿನಿನ ಮೇಲೆ ಹೊರಬಂದ ಹರ್ಷದ್ ನನ್ನು ಕೋರ್ಟ್ ಹೊರಗೆ ಸ್ವಾಗತಿಸುವುದಕ್ಕೆ, ಘೋಷಣೆಗಳನ್ನು ಕೂಗುತ್ತಾ,  ಹೂಡಿಕೆದಾರರ ಒಂದು ದೊಡ್ಡ ಗುಂಪೇ ನೆರದಿತ್ತು. ಹರ್ಷದ್ ಮಾರುಕಟ್ಟೆಗೆ ಮರಳಿ ಬಂದರೆ ಮತ್ತೆ ಮಾರುಕಟ್ಟೆ ಮೇಲಕ್ಕೇರುತ್ತದೆಂಬ ಅಚಲ ನಂಬಿಕೆ ಅನೇಕ ಹೂಡಿಕೆದಾರರಲ್ಲಿತ್ತು.

1990  ಸುಮಾರಿಗೆ ACC ಕಂಪನಿಯ ಶೇರೊಂದಕ್ಕೆ 10,000ರೂಪಾಯಿ ಗಳಿದ್ದ ಸಮಯದಲ್ಲೂ ಸಹ, ಹರ್ಷದ್ ತನಗಿಷ್ಟ್ಟವಾದ Replacement cost Theory ಯನ್ನು ಸದಾ ಉದಾಹರಿಸುತ್ತಾ, ” ಉತ್ತಮ ಹಾಗೂ ಹಳೆಯ ಕಂಪನಿಯ ಶೇರು ಗಳನ್ನು Replacement cost Theory ಆಧಾರದ ಮೇಲೆ value ಮಾಡ ಬೇಕುಎನ್ನುತ್ತಿದ್ದನು( Replacement cost Theory ಯು ಹಳೆಯ ಹಾಗೂ ಒಳ್ಳೆಯ ಕಂಪನಿಗಳನ್ನು, ಅದೇ ರೀತಿಯ ಮತ್ತೊಂದರ ಸ್ಥಾಪನೆಗೆ, ಷ್ಟ್ತು ಹಣ ಬೇಕಾಗುತ್ತದೆ, ಎಂಬ ಸರಳ ನಿಯಮದ ಆಧಾರದ ಮೇಲೆ value ಮಾಡಬೇಕೆನ್ನುತ್ತದೆ)

ಸ್ವತಂತ್ರ ಭಾರತದಲ್ಲಿ ನಡೆದ ಪ್ರತಿಯೊಂದು ಶೇರು ಮಾರುಕಟ್ಟೆ ಹಗರಣವು ಸಹ, ನಮ್ಮ ಆರ್ಥಿಕ/ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿದೆ. ಹರ್ಷದ್ ಮೆಹ್ತ ಹಾಗೂ ಅವನ ಸಂಗಡಿಗರು ಸಹ, ಬ್ಯಾಂಕಿಂಗ್ RF (Ready forwards) ಹಾಗೂ BR (Bankers receipt) ವ್ಯವಸ್ಥೆಯಲ್ಲಿದ್ದ ಲೋಪದೋಷವನ್ನುಪಯೋಗಿಸಿಕೊಂಡು, ತಮ್ಮ ಶೇರು ಮಾರುಕಟ್ಟೆ ವ್ಯವಹಾರಕ್ಕೆ ಬೇಕಾದ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಪಡೆಯುತ್ತಿದ್ದರು, ಅದನ್ನು ಮಾರುಕಟ್ಟೆಯಲ್ಲಿ ತೊಡಗಿಸುತಿದ್ದರು, ಇದರಿಂದ ಅವರು ಮುಟ್ಟಿದ ಶೇರು ಗಳೆಲ್ಲಾ ಗಗನದೆತ್ತರಕ್ಕೆ ಏರಿದವು.

1992ರಲ್ಲಿ ಹಗರಣ ಬೆಳಕಿಗೆ ಬಂದ ಮೇಲೂ ಸಹ ಪ್ರತಿ ಹಂತದಲ್ಲೂ ಅವನು, ತನ್ನ ಮೇಲಿದ್ದ ಕೇಸುಗಳನೆಲ್ಲ ಗೆದ್ದು, ಮರಳಿ ಬರುವ ಯತ್ನ ಮಾಡುತ್ತಲೇ ಇದ್ದ97 ಸುಮಾರಿಗೂ ಸಹ Times of India ಸೇರಿದಂತೆ, ಅನೇಕ ದೊಡ್ಡ ಆಂಗ್ಲ ದೈನಿಕಗಳು, ಹರ್ಷದ್ ಮೆಹ್ತ ಕಾಲಂ ತಮ್ಮ ಪೇಪರ್ ಪ್ರಸಾರವನ್ನು ಹೆಚ್ಚಿಸುತ್ತವೆ ಎಂದು ಬಲವಾಗಿ ನಂಬಿದ್ದವು. ಸಾಧಾರಣ ಕುಟುಂಬದಲ್ಲಿ ಜನಿಸಿ, ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಹು ಬೇಗ ಎತ್ತರಕ್ಕೇರಿದ ಹರ್ಷದ್ ಮೆಹ್ತ, ಒಂದು ರೀತಿಯಲ್ಲಿ White Tiger  ನಲ್ಲಿ ಬರುವ ಬಲರಾಮ್ ಹಲ್ವಾಯಿಯೆ!!.

ಇದುವರೆಗೂ, ಹರ್ಷದ್ ಮೆಹ್ತ ನಿಂದಾದ ಶೇರು ಮಾರುಕಟ್ಟೆ ಹಗರಣದ ರೂಪಾಯಿ ಪ್ರಮಾಣವೆಷ್ಟ್ಟೆಂಬುದು, ನಿಖರವಾಗಿ ತಿಳಿದಿಲ್ಲ ವಾದರೂ, ಬ್ಯಾಂಕುಗಳಿಗಾ ಮೋಸ, ಶೇರು ಬೆಲೆಯಲ್ಲಿನ ವ್ಯತ್ಯಯಗಳನ್ನು, ಅಂದಾಜಿಸಿ ಸುಮಾರು 4000 ಕೊಟಿ ಗಳೆಂದು ಹೇಳಲಾಗುತ್ತದೆ. (“The great Indian scam story of missing 4000 crores” – Samir K Barua and Jayanth R Varma)ಹರ್ಷದ್ ಮೆಹ್ತ ಮೇಲೆ CBI ಸುಮಾರು 72 ಕ್ರಿಮಿನಲ್  ಕೇಸು ಗಳನ್ನು ದಾಖಲಿಸಿತ್ತು. ಇದರ ಜೊತೆ ಸುಮಾರು 600 ಸಿವಿಲ್ ದಾವೆಗಳು ನಡೆಯುತ್ತಿದ್ದವು. ಅವನ ಕೊನೆಯ ದಿನದ ವರೆಗೆ ಲೆಕ್ಕ ಹಾಕಿದರೆ , ಕೇವಲ ನಾಲ್ಕು ಕೇಸುಗಳಲ್ಲಿ ಮಾತ್ರ ಅವನು convict ಆಗಿದ್ದ.

92 ರಲ್ಲಿ ಪ್ರಕರಣವನ್ನು ಬಯಲಿಗೆಳೆದ, ಹಾಗೂ ಇದರ ಬಗ್ಗೆ ಒಂದು ಧೀರ್ಘವಾದ, ಅನೇಕ ವರ್ಷಗಳ ಕಾಲ best seller ಆಗಿದ್ದ ಪುಸ್ತಕ `The Scam` ಬರೆದ ಪತ್ರಕರ್ತೆ ` ಸುಚೆತ ದಲಾಲ್`` ,ಹರ್ಷದ್ ಮೆಹ್ತ ನಿಧನ ನಂತರ ತಮ್ಮ ಅಂಕಣವೊಂದರಲ್ಲಿ ಹೀಗೆ ಬರೆಯುತ್ತಾರೆ.

“It is a pity that Harshad`s eternal optimism and furious stream of `get rich` ideas were never channelled to more productive ways”

 
Advertisements

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: