jump to navigation

ಕಳೆದೇ ಹೋದ ಹತ್ತು ದಿನಗಳು.. January 3, 2009

Posted by nsworld in ಮನಸಿನ ಪುಟಗಳು.
trackback

ಅಯ್ಯೋ  ಕಳೆದೇ  ಹೋಗಿಬಿಟ್ಟಿತು, ಹತ್ತು ದಿನಗಳುಸುಮಾರು ಒಂದು ತಿಂಗಳು ಹಿಂದಿನಿಂದ ಹೊಡೆದಾಡಿ,  ಸ್ಯಾಂಕ್ಶನ್ ಮಾಡಿಸಿಕೊಂಡಿದ್ದ ಹತ್ತು ದಿನಗಳ year end leave ಮುಗಿದೆ ಹೋಗಿದೆ. ೨೪ ಡಿಸೆಂಬರ್ ರಾತ್ರಿ  ತಯಾರಿಸಿದ್ದ ಒಂದು ವರೆ ಮೊಳ ಉದ್ದದ `to do list`  ನಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು `to do` ಗಳು ಟಿಕ್ ಆಗದೇ ಉಳಿದಿದೆ. ಆದರೆ ಕ್ಯಾಲಂಡರ್ ನಲ್ಲಿ ಹತ್ತು ದಿನಗಳು ಟಿಕ್ ಆಗೋಗಿದೆ. ನಿಜವಾಗ್ಲೂಜಿಪುಣ ಅಂದ್ರೆ ಜಿಪುಣ ಕಾಲ..” ಶಿವಮೊಗ್ಗ ಕಡೆ ತಲೆ ಹಾಕಿ ಮೂರು ವರ್ಷಗಳು ಆಯ್ತು ಅನ್ನುವ record ಆಗಕ್ಕೆ ಬಿಡಬಾರದೆಂದು ಎಷ್ತ್ತೆ ಅಂದು ಕೊಂಡರೂ, ಆಗಲಿಲ್ಲ record ಆಗೇ ಹೋಯ್ತು.

ಹತ್ತು ದಿನಗಳ ಮಹತ್ಸಾಧನೆಯೆಂದರೆ ಸಂಪೂರ್ಣ ಐದು ದಿನಗಳನ್ನು ಮೈಸೂರಿನ ಮನೆಯಲ್ಲಿ ಕಳೆದದ್ದು. ನಂಜನಗೂಡು, ಕ್ಯಾಲಿಕಟ್ ಅಥವಾ ಹುಣಸೂರು ರಸ್ತೆಗಳಲ್ಲಿ ಅರ್ಲೀ ಮಾರ್ನಿಂಗ್ ಲಾಂಗ್ ಡ್ರೈವ್ ಗಳು (with front windows open 🙂 ), ಹಾಗೂ ಕಣ್ತುಂಬಾ ಮಾಡಿದ ನಿದ್ದೆ, ಹೊಟ್ಟೆ ತುಂಬಾ ಮನೆಯ ಉಟ, ಸಂಜೆಯ ಮೇಲೆ ಶಾಸ್ತ್ರಕ್ಕೆ ಒಂದು ಬಾರಿ ಮೈಲ್ ಚೆಕ್ ಮಾಡಿದರೆ ಆಯ್ತು, ಇದೆ ಐದು ದಿನಗಳ ದಿನಚರಿ.

ಚಿಕ್ಕವನಿದ್ದಾಗ ಶಾಲೆಯಿಂದ ಬರ್ತಾ ಬೀದಿಲಿ ಕಂಡ ಕಂಡ, ನಾಯಿ ಮರಿಗಳನ್ನು ಎತ್ತಿ ಕೊಂಡು ಬರ್ತಿದ್ದ ನನ್ನ ಮೇಲೆ ಹರಿಹಾಯುತಿದ್ದ ನನ್ನಪ್ಪ, ಇಂದು ಪ್ರತಿ ದಿನಾ ಬೆಳಿಗ್ಗೆ ಹಾಲು ತರುವಾಗ ಬೀದಿಯ ಟಾಮಿಗೆ ಒಂದು ಬನ್ ಹಾಕ್ತಾರಲ್ಲ ಇದು ನಿಜವಾಗ್ಲೂ ಪವಾಡವೆ ಸರಿ!!!!

ಮೂವತ್ತು ವರ್ಷಕ್ಕೂ ಮೀರಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪಾ ಮಾಡಿದ್ದು ಸಂಪೂರ್ಣವಾಗಿ ಮರೆತು, ಮನೆಯ ಹಿತ್ತಿಲಿನಲ್ಲಿರೋ ಬೆರಳೆಣಿಕೆಯಷ್ಟ್ತು ತೆಂಗಿನ ಮರ ಹಾಗೂ ಬಾಳೆ ಗಿಡಗಳ, ಆರೈಕೆ ಮಾಡುತ್ತಾ  full time ಕೃಷಿ ರಾಗಿರುವ ಅಪ್ಪ, VR ತೊಗೊಂಡ ಮೇಲೆ ಸಂಪೂರ್ಣವಾಗಿ ಮಹಿಳಾ ಸಮಾಜ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಮ್ಮಇವರೆಲ್ಲರ ಪ್ರಪಂಚ ಎಷ್ಟ್ತೊದು ಆರಾಮವಾಗಿ ಟೆನ್ಶನ್ ಫ್ರೀ ಆಗಿ ಇದ್ಯಲ್ಲ ಅನ್ನುವ ಹೊಟ್ಟೆ ಉರಿ ಶುರುವಾಗಿ ಬಿಟ್ಟಿದೆ. ದಸರ ರಜ ಮುಗಿದ ಮೇಲೆ ಮತ್ತೆ ಸ್ಕೂಲ್ ಗೆ ಹೋಗಬೇಕೆನ್ನುವ , ಸಂಕಟ ಏನು ಅಂತ ಮಕ್ಕಳಿಗೆ ಮಾತ್ರ ಗೊತ್ತು, ಅದೇ ತರಹದ್ದು ನನ್ನದು ಸಹಾ.

ಸೋಮವಾರದಿಂದ ಶುರುವಾಗುವ ಯುದ್ದಕ್ಕೆ ನಾನು ತಯಾರಿ ಮಾಡಿಕೊತಿದ್ದರೆ, “ಕಾಯಿ ಕೀಳೊ ಹೊತ್ತಿಗೆ ಮರಾನೂ ಕ್ಲೀನ್ ಮಾಡೋ ಅಂದಿದ್ದೆ, `ಹೂ ಬುದ್ದಿ` ಅಂತ ಹೇಳಿ  ಕಳ್ಳನನ್ಮಗ ಹಾಗೆ ಇಳಿದಿದ್ದಾನೆಅಂತ ಅಪ್ಪ ಕೂಗಾಡಿಕೊಂಡು ಓಡಾಡುತಿದ್ರೆ, ಕೈಲೊಂದು `ಸುಧಾ` ಹಿಡ್ಕೊಂಡು ನರಸಿಂಹ ಸ್ವಾಮಿಯವರಹತ್ತು ವರ್ಷದ ಹಿಂದೆ…”ಕೇಳುತ್ತಾ ವೆಸ್ಟ್ ಬಾಲ್ಕನಿ ಯಲ್ಲಿ ಕೂತಿದ್ಡಾಳೆ ಅಮ್ಮ. ಹಾಗೆಯೇ ಒಂದೆರಡು ನಿಮಿಷ ಹಾಡನ್ನು ಕೇಳಿದ ನನಗೆ, ” ನನ್ನ ಕಾಲದ ಸಂಬಂಧ ಗಳಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ಇದ್ಯಾ? ಅಥವಾ ನನ್ನ ಅನುಭವಕ್ಕೆ ಬಂದವುಗಳು ಮಾತ್ರ ಬೇರೆಯ ತರಹದವೇ…” ಎಂಬ ಯೋಚನೆ ಹಾದು ಹೋಯ್ತು. ಯೋಚನೆ ಮಾಡಕ್ಕೆ ಟೈಮ್ ಇಲ್ಲ ಹಾಗೂ ಅದ್ರಿಂದ ಉಪಯೋಗನು ಇಲ್ಲ, I should get back now thats it…

Advertisements

Comments»

1. chetana chaitanya - January 9, 2009

🙂
ಐದು ದಿನವಾದ್ರೂ ಅರಾಮಗಿ ಮನೇಲಿದ್ದು ಬಂದ್ರಲ್ಲ, ಪುಣ್ಯವಂತರು ಬಿಡ್ರಿ ನೀವು…
ಆಹಾ! ಅಪ್ಪ, ಅಮ್ಮಂದಿರ ಸುಖವೇ ಸುಖ. ತೀರ್ಥಳ್ಳಿಗೆ ಹೋದಾಗೆಲ್ಲ ನಾನೂ ಹೀಗೇ ಹೊಟ್ಟೆ ಉರಿಸ್ಕೊಂಡು ಬರ್ತೇನೆ… ನನ್ನ ಬ್ಯಾಡ್ ಲಕ್ಕಿಗೆ ಮರುಗುತ್ತಾ… 😦

– ಚೇತನಾ


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: