jump to navigation

ಪ್ರತಾಪ್ ಸಿಂಹ ರ “ಕುರುಡು ಕಾಂಚಾಣ..” ಹಾಗು ನನ್ನ ಒಂದೆರಡು ಮಾತುಗಳು. February 22, 2009

Posted by nsworld in Business and Economy.
trackback

ಶನಿವಾರದ (21/2/09) ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಪ್ರತಾಪ್  ಸಿಂಹರ “ಕುರುಡು ಕಾಂಚಾಣ..” ಓದಿದ ನಂತರ ಕೆಲ ವಿಚಾರಗಳ ಬಗ್ಗೆ ನನ್ನ ಒಂದೆರಡು ಮಾತು.

ಮಾನ್ಯರೇ,
ನಿಮ್ಮ ಈ write up ನ ಓದಿ ಕೆಳಗಿಟ್ಟ ನಂತರ ನನಗನಿಸಿದ್ದು “Playing to the gallery” ಅಂತ.
ಜನಸಾಮಾನ್ಯರಲ್ಲಿ, ಇರುವ IT ಹಾಗೂ IT ಯವರ ಬಗೆಗಿನ ಭಾವನೆಗಳನ್ನು, ಧೋರಣೆಗಳನ್ನು ಹಾಗೂ frustration ಗಳನ್ನು ಚಿತ್ರಿಸಿದ್ದೀರಿ ಹಾಗೂ ಸಮರ್ಥಿಸಿದ್ದೀರಿ.
ನಿಮ್ಮ ಬರಹದಿಂದ ನಿಮಗೆ IT ಕ್ಷೇತ್ರದ ಬಗ್ಗೆ ಹಾಗೂ  over all economy ಯ ಬಗ್ಗೆ ಸಂಪೂರ್ಣ clarity of thought ಹಾಗೂ ಪೂರ್ಣ ತಿಳುವಳಿಕೆ ಇಲ್ಲದಿರುವುದು ಎದ್ದು ಕಾಣುತ್ತದೆ.
 

IT ಕಂಪನಿಗಳು, Products ಮತ್ತು services:
ಯಾವುದೇ ಕಂಪನಿಯ IT ಸಂಬಂಧಿಸಿದ ಖರ್ಚಿನಲ್ಲಿ ಶೇಕಡ 70 ರಿಂದ 75 ಭಾಗ ಹಣ ಖರ್ಚಾಗುವುದು ADM (Application, Development, Maintenance) ಗಾಗಿ. ಹಾಗಾಗಿ IT Services ಎನ್ನುವುದು, ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಆದಾಯ ತರುವ ವಿಭಾಗವಾಗಿದೆ. 90 ರ ದಶಕದಲ್ಲಿ, ಈ ಕ್ಷೇತ್ರದಲ್ಲಿ ಪ್ರಾರಂಭವಾಗ ಬಹುದಾದ, ಕ್ರಾಂತಿ ಹಾಗೂ ಅವಕಾಶಗಳನ್ನು ತಮ್ಮ ದೂರ ದೃಷ್ಟಿ ಇಂದ ಕೆಲವರು ಗ್ರಹಿಸಿದ್ದರಿಂದ ಇಂದು ಅನೇಕ World class IT  ಕಂಪನಿಗಳನ್ನು ಭಾರತದಲ್ಲಿ ಕಟ್ಟಲು ಸಾಧ್ಯವಾಯಿತು. ನಂತರ ಪ್ರಾರಂಭವಾದ BPO, KPO, ITO  ಕ್ರಾಂತಿಯೂ ಸಹ ಲಕ್ಷಾನುಗಟ್ಟಲೇ ಉದ್ಯೋಗಗಳನ್ನು ಸೃಷ್ಟಿಸಿತು. ಇದೆಲ್ಲದರ trickle down effect, over all economy ಯ ಮೇಲಾದ  ಬಗ್ಗೆ ಸಂಪೂರ್ಣ ಅರಿವು ನಿಮಗಾಗ ಬೇಕಿದ್ದರೆ, ಭಾರತದ $ 1 trillion GDP, breakup  Statistics ನ ನೋಡ ಬೇಕು.

ಪೇಟೆಂಟ್ ಹಾಗೂ ಭಾರತದ ಕಂಪನಿಗಳು:
ಭಾರತದ Software ಹಾಗೂ  Electronics ಕಂಪನಿಗಳ ಬಳಿ ಇರುವ ಪೇಟೆಂಟ್ ಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಇಲ್ಲಿ ಚರ್ಚೆ ಬೇಡ. ಪೇಟೆಂಟ್ ಒಂದರಿಂದಲೇ mass employment generation ಸಾಧ್ಯವೇ ಎಂಬುದನ್ನ ಒಂದು ಸಣ್ಣ ಉದಾಹರಣೆ ಯ ಮೂಲಕ ಅರ್ಥ ಮಾಡಿ ಕೊಳ್ಳಲು, ಪ್ರಯತ್ನಿಸೋಣ. ಒಬ್ಬನು ಅಡಿಕೆ ಅಥವಾ ತೆಂಗಿನ ಸಿಪ್ಪೆ ಸುಲಿಯುವ ಒಂದು ಸಣ್ಣ ಯಂತ್ರ ವನ್ನು ಅಭಿವೃದ್ದಿ ಪಡಿಸಿ ಇದರ ಪೇಟೆಂಟ್ ಪಡೆಯುತ್ತಾನೆ , ಎಂದು ಉಹಿಸೋಣ(ನಾನು ಮಲೆ ನಾಡಿನವನಾದ್ದರಿಂದ ಈ ಉದಾಹರಣೆ ).ಇದರಿಂದಾಗಿ ಹೊಸ ತಂತ್ರಜ್ಞಾನ ಬಂತು, ಜನರಿಗೆ ಅನುಕೂಲ ವಾಗಬಹುದು ಎಂಬುದು ಸರಿ. ಇದೆ ತಂತ್ರಜ್ಞಾನದ ಲೈಸೆನ್ಸ್ ಪಡೆದು ಮತ್ತೊಬ್ಬನು ಈ ಯಂತ್ರಗಳನ್ನು mas production ಮಾಡಿ, ಎಲ್ಲೆಲ್ಲಿ ಇದಕ್ಕೆ ಮಾರುಕಟ್ಟೆ ಇದೆಯೋ ಅಲ್ಲಲ್ಲಿ ಇದನ್ನ ಮಾರುವುದು, ಹಾಗೂ ಕಾಲ ಕಾಲಕ್ಕೆ ಸರಿಯಾಗಿ after sales service  ಮಾಡುವುದು ಇದೆಯಲ್ಲಾ, ಇದು ಒಂದು ಬೃಹತ್ ಉದ್ಯಮ, ಹಾಗೂ ಇದು ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಡುತ್ತದೆ, ಮತ್ತು ಒಟ್ಟಾರೆ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗುತ್ತದೆ. ಇದೇ ತರ್ಕವನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಬಹುದು.
90 ರ ದಶಕದಲ್ಲಿ ತಂತ್ರಜ್ಞಾನದ ಬೆಳವಣಿಗೆ ಹಾಗೂ ಮುಕ್ತ ಆರ್ಥಿಕತೆಯ ಲಾಭ ಪಡೆದು, ನಮ್ಮIT ನಾಯಕರುಗಳು, IT services ಕಡೆ ಒಲವು ತೋರಿದ್ದು, ಭಾರತದಂತಹ labour intensive economy ಯ ದೃಷ್ಟಿಯಿಂದ ಬಹಳ ಸರಿಯಾದ ಹಾಗೂ ಅತ್ಯುತ್ತಮ ಹೆಜ್ಜೆ.

ಇವತ್ತು ನಿಮ್ಮ ATM ಕಾರ್ಡು ಸರಿಯಾಗಿ ಕೆಲಸ ಮಾಡುತ್ತಿದ್ದರೇ, ಕುಳಿತಲ್ಲಿಯೇ ನೀವು ರೈಲ್ / ಬಸ್ / ಏರ್ / ಟಿಕೆಟ್ ಬುಕ್ ಮಾಡಲು ಸಾಧ್ಯವಾಗಿದ್ದರೆ,RTO/ Sub registrar ತಾಲೂಕು, ಅಂಚೆ ಕಛೇರಿಗಳು ಗಣಕಿಕೃತ ವಾಗಿ ನಿಮ್ಮ ಕೆಲಸ ಸುಗಮವಾಗಿದ್ದಾರೆ, ಇದಕ್ಕೆ ಕಾರಣರಾದ ಹಾಗೂ ಇದರ ಹಿಂದೆ ಹಗಲು ರಾತ್ರಿಯೆನ್ನದೇ ಕೆಲಸ ಮಾಡಿದ IT Techie ಗಳಿಗೆ ಮನಸಲ್ಲಾದರೂ Thanks ಹೇಳಬೇಕು.

ನಿಮಗೊಂದು ವಿಷಯ ಗೊತ್ತಾ?  ನೀವು ರಾತ್ರಿ ನೆಮ್ಮದಿಯಿಂದ ಮಲಗಿದ್ದಾಗ, ನಿಮ್ಮ ಬ್ಯಾಂಕು ಹಾಗೂ ಇನ್ಶುರೆನ್ಸ್ ಕಂಪನಿ ಗಳ IT Network  ನಲ್ಲಿ ಯಾವ ಹ್ಯಾಕರ್ ಹಾಗೂ ವೈರಸ್ ಆಗಲಿ ಪ್ರವೇಶ ಪಡೆದು ಬೆಳಗಾಗುವುದರೊಳಗೆ ನಿಮ್ಮ ಜೀವಮಾನದ ದುಡಿಮೆಯನ್ನು ಮಾಯಾ ಮಾಡ ಬಾರದೆಂದು, ಸಾವಿರಾರು IT Tester ಗಳು 24 ತಾಸು ಸರತಿಯಂತೆ patches update ಮಾಡುತ್ತಾ ಕಾಯುತ್ತಿರುತ್ತಾರೆ.(ಇಲ್ಲಿ ನಾನು ಕೆಲವೇ ಕೆಲವು ಉದಾಹರಣೆ ಗಳನ್ನು ಕೊಟ್ಟಿರುವುದು).ಬಸ್ಸಿನಲ್ಲಿ ಕಂಡಕ್ಟರ್ ಹರಿದು ಕೊಡುವ ಸಣ್ಣ ಟಿಕೆಟ್ ನಿಂದ ಹಿಡಿದು,Defence ನ Advanced Radar ವರೆಗೆ IT Techie ಪರಿಶ್ರಮವಿದೆ.

ಟಾಟಾ ಹಾಗೂ ಬಿರ್ಲಾ ದಂತಹ ಕಂಪನಿ ಗಳು ಸಮಾಜ ಮುಖಿ ಯಾಗಿ ಕೆಲಸ ಪ್ರಾರಂಭ ಮಾಡಲು, ಅವುಗಳ ಸ್ಥಾಪನೆ ಯಾಗಿ, ಬಹಳಷ್ಟು ವರ್ಷಗಳೇ ಬೇಕಾಯಿತು. ಆದರೆ ಈ IT ಕಂಪನಿಗಳು ಪ್ರಾರಂಭವಾಗಿ ಕೆಲ ವರ್ಷಗಳಲ್ಲಿ, ಇವುಗಳು ಚ್ಯಾರಿಟೀಸ್ ಗೆ ತೊಡಗಿಸಿದ ಹಣ ನಿಜವಾಗಲೂ unprecented . ಇವತ್ತು ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಗ್ರಂಥಾಲಯ ಗಳು ಇದ್ದರೆ , ಇದಕ್ಕೆ ನೀವು Infosys foundation ಹಾಗೂ Premji foundation ನಂತಹ ಸಂಸ್ಥೆ ಗಳಿಗೆ ಕೃತಜ್ಞತೆ ಸಲ್ಲಿಸ ಬೇಕು. 
 
ನೀವು ಬರೆದಿರುವಂತೆ, ಇವತ್ತಿನ ಆರ್ಥಿಕ ಹಿಂಜರಿತ ಕೇವಲ IT ಕ್ಷೇತ್ರ ಹಾಗು, ಅಮೇರೀಕಾ ಕ್ಕೆ ಸೀಮಿತವಾದದ್ದಲ್ಲ. ಆರ್ಥಿಕ ಹಿಂಜರಿತದಿಂದ ಜಗತ್ತಿನ ಪ್ರತಿಯೊಂದು ದೇಶವೂ, ಹಾಗೂ ಕ್ಷೇತ್ರವು ನರಳುತ್ತಿದೆ. ಇದರಿಂದಾಗಿ Automobile,Construction, Manufacturing, Media, Hospitality, Entertainment, Banking ಹಾಗೂ ಹೆಸರೇ ಇರದ ಇನ್ನಿತರ un organised sector ಗೆ ಸೇರಿದ ಉದ್ಯಮಗಳು ನರಳುತ್ತಿವೆ, ಹಾಗೂ ಇದಕ್ಕೆ ಸೇರಿದ ಕೆಲಸ ಕಳೆದು ಕೊಂಡವರ ಸಂಖ್ಯೆ IT ಗಿಂತಾ ಅನೇಕ ಪಾಲು ಹೆಚ್ಚಿದೆ. ಹಾಗಾಗಿ ಆರ್ಥಿಕ ಹಿಂಜರಿತ ಯಾರಿಗೂ ಒಳ್ಳೆಯದಲ್ಲ. ಇದರಿಂದ ಕೆಲವರು ಕೆಲಸ ಕಳೆದು ಕೊಳ್ಳುತ್ತಿದ್ದಾರೆ ಎಂದು sadistic pleasure ಅನುಭವಿಸುವುದು ಖಂಡಿತ ಕೀಳು ಮಟ್ಟದ್ದು.

Comments»

1. strightforward - February 23, 2009

ಆರ್ಥಿಕ ಹಿಂಜರಿತ ಯಾರಿಗೂ ಒಳ್ಳೆಯದಲ್ಲ. ಇದರಿಂದ ಕೆಲವರು ಕೆಲಸ ಕಳೆದು ಕೊಳ್ಳುತ್ತಿದ್ದಾರೆ ಎಂದು sadistic pleasure ಅನುಭವಿಸುವುದು ಖಂಡಿತ ಕೀಳು ಮಟ್ಟದ್ದು.

well said

2. pratibha - March 7, 2010

ee warada ankana tumbha chennagide.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: