jump to navigation

“Maggi” 25 not out!! April 16, 2009

Posted by nsworld in Generally Speaking.
trackback

ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ, ದೂರದರ್ಶನದಲ್ಲಿ ಬರುತಿದ್ದ- “ಮಮ್ಮಿ ಭೂಕ್ ಲಗಿ ಹೈ” ಎಂದು ಕೂಗುತ್ತಾ ಬರುವ ಹುಡುಗನನ್ನು, “ಬಸ್ ದೊ ಮಿನಿಟ್” ಎಂದು ಹೇಳಿ ಆಕರ್ಷಕವಾಗಿ ಕಾಣುತಿದ್ದ `ಮ್ಯಾಗಿ` ಮಾಡಿಕೊಡುತಿದ್ದ ಮಮ್ಮಿ- ಜಾಹೀರಾತು ಬಹಳವಾಗಿ ಆಕರ್ಷಿಸಿತ್ತು. ನಮ್ಮಮನಿಗೆ “ನಮ್ಮನೆಯಲ್ಲೂ ಇದನ್ನು ಮಾಡು” ಎಂದು ಪೀಡಿಸಿದರೆ, “ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂಬ ಸಿದ್ದ ಉತ್ತರದ ಜೊತೆಗೆ ಎರಡೇ ನಿಮಿಷದಲ್ಲಿ ತಯಾರಿಸಬಹುದಾದ ದೇಶಿ ಆಲ್ಟರ್ನೇಟಿವ್ “ರಾಗಿ ಹುರಿ ಹಿಟ್ಟು” ಸಿಗುತ್ತಿತ್ತು. ಆದರೂ ಮ್ಯಾಗಿ ಯ ಮೇಲಿನ ಆಕರ್ಷಣೆ ಕಮ್ಮಿಯಾಗಿರಲಿಲ್ಲ.

ಮೊದಲ ಬಾರಿ ಹೈ ಸ್ಕೂಲ್ ನಲ್ಲಿರುವಾಗ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ, ಮ್ಯಾಗಿ ಮಾಡಲು ಪ್ರಯತ್ನಿಸಿ, ಹೇಗೆ ಮಾಡಬೇಕೆಂದು ತಿಳಿಯದೇ, ಪಾತ್ರೆಯಲ್ಲೇ ಅದು ಸೀದು ಹೋಗಿ, ಅಮ್ಮನ ಕೈಲಿ, ಸರಿಯಾಗಿ ಬೈಸಿಕೊಂಡಿದ್ದು ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ.

ಕಾಂಪಿಟೇಶನ್ ಇಲ್ಲದ ಸಮಯದಲ್ಲಿ ಭಾರತದ Ready to eat food segment ಗೆ ಕಾಲಿಟ್ಟ Nestle ಯವರ ಮ್ಯಾಗಿ, ಇಂದಿಗೂ ಸಹ ಶೇಕಡ 90 ರಸ್ಟ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದರೆ, ಒಂದು ಪ್ರಾಡಕ್ಟ್ ನ 25 ವರ್ಷದ ಪ್ರಯಾಣದಲ್ಲಿ ಕಡಿಮೆ ಸಾಧನೆಯೇನಲ್ಲ. ಇಂದು ಮ್ಯಾಗಿ ದೇಶದ FMCG ವಲಯದಲ್ಲಿನ ಒಂದು ಉತ್ತಮ ಹಾಗೂ ಪಾಪ್ಯುಲರ್ ಬ್ರ್ಯಾಂಡ್. ಪ್ರಾರಂಭ ವಾದಾಗಿನಿಂದ ಪ್ರತಿ ಹಂತದಲ್ಲೂ ಬದಲಾವಣೆ ಗಳಿಗೆ ತನ್ನನ್ನು ಅಳವಡಿಸಿಕೊಳ್ಳುತ್ತ, ಮ್ಯಾಗಿ ಸಾಗಿ ಬಂದಿದೆ. ಇದರ Noodles ನ ಸಫಲತೆಯಿಂದ, ಉತ್ತೇಜಿತರಾಗಿ Nestle ಯವರು ಇದೆ ಬ್ರ್ಯಾಂಡ್ ನ ಅಡಿಯಲ್ಲಿ ಪ್ರಾರಂಭಿಸಿದ, ಸೂಪ್, ಸಾಸ್, ಹಾಗೂ ಕೋಕನಟ್ ಮಿಲ್ಕ್ ಗಳು, Noodles ನಷ್ತ್ಟು ಸಫಲವಾಗಲಿಲ್ಲ.

ತನ್ನ 25 ವರ್ಷಗಳ ಪ್ರಯಾಣದಲ್ಲಿ- ನಡುವಿನ ಕೆಲವು ವರ್ಷಗಳಲ್ಲಿ, `ಪ್ರೀತಿ ಜಿಂಟ` ಇದಕ್ಕಾಗಿ ಜಾಹೀರಾತು ನೀಡಿದ್ದರೆಂಬುದನ್ನು, ಹೊರತು ಪಡಿಸಿದರೆ – ಯಾವುದೇ Celebrity ಯ ಸಹಾಯವಿಲ್ಲದೆ, ಕೇವಲ “Health bhi, Taste bhi” ಎಂಬ ಪಂಚ್ ಲೈನಿ ನೊಂದಿಗೆ, ಯಶಸ್ಸಿನ ಹಾದಿಯಲ್ಲಿ ನಡೆದ ಏಕೈಕ ಬ್ರ್ಯಾಂಡ್ ಮ್ಯಾಗಿ.

ಮ್ಯಾಗಿಯ ಜಾಹಿರಾತುಗಳು ಮಕ್ಕಳನ್ನು ಕೇಂದ್ರೀಕೃತ ವಾಗಿರಿಸಿಕೊಂಡಿದ್ದರು ಸಹ, ಅನೇಕ Consumer research report ಗಳ ಪ್ರಕಾರ, ಇಂದು ಮ್ಯಾಗಿ ಕೇವಲ ಮಕ್ಕಳು ಬಯಸುವ, Impulsive buy (eg, chocolate, cold drink) ಆಗಿ ಉಳಿಯದೆ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ತಿಂಗಳ ದಿನಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ Essential buy ಆಗಿದೆ.

ಇವತ್ತಿಗೂ ಸಹ ಕೆಲವೊಮ್ಮೆ ಆಫೀಸ್ ನಲ್ಲಿ ಕೆಲಸ ಮುಗಿಸುವ ಹೊತ್ತಿಗೆ ,ಹೊಟೆಲ್ ಗಳೆಲ್ಲಾ ಮುಚ್ಚಿ, ಅರ್ಧ ಬೆಂಗಳೂರು ನಿದ್ರೆಗೆ ಶರಣಾಗಿ ರುವ ಸಮಯದಲ್ಲೂ, ಮನೆಯ ಅಡುಗೆ ಮನೆಯಲ್ಲಿ ನನಗಾಗಿ ಕಾದಿ ಕುಳಿತುರುವ, ಹಸಿರು ಪ್ಯಾಕೆಟ್ ನ Maggi Atta Noodles ಗೆ ಥ್ಯಾಂಕ್ಸ್ ಹೇಳಲು ಇದರ 25ನೇ ಬರ್ತ್‌ಡೇ ಒಂದು ಒಳ್ಳೆಯ ಸಂದರ್ಭ.

Advertisements

Comments»

1. chetana chaitanya - May 23, 2009

ಹಗಲಲ್ಲಿ ಮ್ಯಾಗಿ ಮೀಡಿಯಮ್ ಪ್ಯಾಕ್, ಸಂಜೆ ೫ ರುಪಾಯಿಯದು. ಒಂದಿಬ್ಬರು ಸ್ನೇಹಿತರು ಬಂದಾಗ ಫ್ಯಾಮಿಲಿ ಪ್ಯಾಕ್…
ಆಗಾಗ ಚೇಂಜ್ ಇರಲಿ ಅಂತ ಟಾಪ್ ರಾಮನ್ಸ್ ನೂದಲ್ಸ್ ತರೋದೂ ಇದೆ. ಆದ್ರೂ ಅಂಗಡಿಗೆ ಹೋದ್ರೆ ಮೊದಲು ಬಾಯಿಗೆ ಬರೋದು ‘ಮ್ಯಾಗಿ ಕೊಡಿ’ ಅಂತಲೇ…
ಇದೊಂದು ಇಲ್ಲದೆ ಹೋಗಿದ್ದರೆ, ನನ್ನ ಅದೆಷ್ಟು ಬೆಳಗುಗಳು ಹಸಿದ ಹೊಟ್ಟೆಯಲ್ಲಿ ಕಳೆದು ಹೋಗ್ತಿದ್ದವೋ ಏನೋ!?


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: