jump to navigation

ಕನ್ನಡ TV ವಾಹಿನಿಗಳ ಫಾರ್ಮುಲ January 30, 2010

Posted by nsworld in ವಿಡಂಬನೆ.
trackback

ಹೊಸದಾಗಿ ಕನ್ನಡ ವಾಹಿನಿ ಒಂದನ್ನು, ಆರಂಭ ಮಾಡುತ್ತಿದ್ದೀರ ? ಅಥವಾ ಯಾವುದಾದರು ಹೊಸದೊಂದು ವಾಹಿನಿಗೆ ಕಾರ್ಯಕ್ರಮ ನಿರ್ವಾಹಕರಾಗಿಯೋ ಅಥವಾ ಚೀಫ್ ಆಗಿಯೋ ನಿಯುಕ್ತಿಗೊಂಡಿದ್ದಿರ ? ಕನ್ನಡ ವಾಹಿನಿಗಳ ಕಾರ್ಯಕ್ರಮಗಳು ಹೇಗಿರ ಬೇಕೆಂಬ ಬಗ್ಗೆ ಇಲ್ಲಿದೆ ನಿಮಗೊಂದು ಸಿದ್ದ ಫಾರ್ಮುಲ. (ಈ ಫಾರ್ಮುಲ ಜನರಿಂದ ಓಕೆ ಆಗಿದೆಯೋ ಅಥವಾ ಬರುವ ದಿನಗಳಲ್ಲಿ ತಿರಸ್ಕರಿಸಲ್ಪಡುವುದೋ ಕಾದು ನೋಡ ಬೇಕು)

ಬೆಳಗಿನ ಕಾರ್ಯಕ್ರಮ ಪ್ರಾರ್ಥನೆ / ಯೋಗ / ವೇದ , ಪುರಾಣ / ಹಾಡು ಹಸೆಗಳಿಂದ ಪ್ರಾರಂಭ ಮಾಡಿ ತಪ್ಪೇನಿಲ್ಲ. ಆದರೆ ನಂತರದ ಕಾರ್ಯಕ್ರಮಕ್ಕೆ, ಅಂದರೆ ` ದಿನ ಪಂಚಾಗ / ಭವಿಷ್ಯ ` ಹೇಳುವ ಕಾರ್ಯಕ್ರಮಕ್ಕೆ ಒಬ್ಬ ಬಲವಾದ ಜ್ಯೋತಿಷಿ ಒಬ್ಬರನ್ನು ನೇಮಿಸಿಕೊಳ್ಳಿ. ಇವರ ದೇಹದ ಗಾತ್ರ, ಅಲಂಕಾರ, ಮಾತು ಕತೆ, ಹಾಗು ಸ್ಟೈಲ್ ನೋಡುವವರ ಎದೆಯಲ್ಲಿ ನಡುಕ ಹುಟ್ಟಿಸ ಬೇಕು. ೧೨ ರಾಶಿಗಳಲ್ಲಿ minimum ೬ ರಿಂದ ೭ ರಾಶಿಯ ಜನರಿಗೆ ” ಇವತ್ತು ಹೊರಗೆ ಹೋಗಲೇ ಬೇಡಿ, ಹೋದರೆ ಜೀವ ಭಯ” ಅಥವಾ ” ಇಂದು ಕಚೇರಿಗೆ ತೆರಳುವ ಮುನ್ನ ಬಲಗಿವಿಗೆ ಒಂದು ವೀಳ್ಯದೆಲೆಯನ್ನು ಸಿಕ್ಕಿಸಿಕೊಂಡು ಹೋಗಿ” ಎಂದು ನಿಖರವಾಗಿ, ಕಡ್ಡಿ ತುಂಡು ಮಾಡಿದ ಹಾಗೆ, ಹೇಳುವ ಪ್ರಕಾಂಡ ಪಂಡಿತರಿದ್ದರಂತು ಬಹಳ ಒಳ್ಳೆಯದು.

ನಂತರದ, ಅನೇಕ ಬೆಳಗಿನ ಕಾರ್ಯಕ್ರಮಗಳು, ಮರು ಪ್ರಸಾರ ವಾಗುವ ಧಾರಾವಾಹಿಗಳು.ಆದ್ದರಿಂದ ಹೆಚ್ಚೇನು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇಂದು ಬಹುತೇಕ ಚಾನೆಲ್ ಗಳಲ್ಲಿ ಬರುತ್ತಿರುವ ಧಾರಾವಾಹಿಯ subject , ಅತ್ತೆ ಸೊಸೆ, ನಾದಿನಿ ವಾರಗಿತ್ತಿ, ಅಣ್ಣ ತಮ್ಮಂದಿರ, ದ್ವೇಷ ಅಸೂಯೆ ಜಗಳ, ಕೋರ್ಟು ಕಚೇರಿ, ದೃಶ್ಯಗಳು, ಬಿಸಿನೆಸ್ ರೈವಲ್ರಿ ವಿಷಯಗಳಾದ್ದರಿಂದ, ಇಂತಹ ವಿಷಯದ ಬಗ್ಗೆ ೪೦೦ ರಿಂದ ೫೦೦ ಎಪಿಸೋಡುಗಳ ಅನೇಕ ಧಾರಾವಾಹಿಗಳನ್ನು ಅನೇಕ ಚಾನೆಲ್ ಗಳಿಗೆ ಮಾಡಿದ, ಪ್ರಸಿದ್ದ ನಿರ್ದೇಶಕರಿದ್ದಾರೆ, ಅಂತಹವರ ಸಹಾಯವನ್ನು ಪಡೆಯಬಹುದು. ಇನ್ನು ಮಧ್ಯಾನ್ಹ ದ compulsory ಕಾರ್ಯಕ್ರಮ ಅಡುಗೆಯದಾದ್ದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಸಿಕೊಳ್ಳುವ ಅವಶ್ಯಕತೆಯಿಲ್ಲ.

ನಂತರದ ಬಹುಮುಖ್ಯವಾದ ಹಾಗು ಇತ್ತೀಚಿಗೆ, ಪ್ರತಿಯೊಂದು ವಾಹಿನಿಯವರು ತಪ್ಪದೆ, ಪ್ರಸಾರ ಮಾಡುತ್ತಿರುವ ಜಟಕಾ ಬಂಡಿ / ಉಗಿ ಬಂಡಿ ಗಳಂತಹ ಕಾರ್ಯಕ್ರಮ, ವೈಯಕ್ತಿಕ ಹಾಗು ಸಂಸಾರಿಕ ಸಮಸ್ಯೆ ಹಾಗು ಹೊಡೆದಾಟಗಳನ್ನು ಒಂದು ಸಾಮಾಜಿಕ ಸಮಸ್ಯೆ ಎಂದು ಬಿಂಬಿಸುವ ಹಾಗು ಮೀಡಿಯಾ trial ನಡೆಸುವ ಪ್ರಯತ್ನ. ಇದನ್ನು ನಡೆಸಿಕೊಡಲು, ಯಥೇಚ್ಚವಾಗಿ ಕಣ್ಣಿರು ಹಾಕಬಲ್ಲ, ಪ್ರೇಕ್ಷಕರ ಕರುಳು ಕಿವುಚ ಬಲ್ಲ, ಹಳೆಯ ನಟಿ ಮಣಿಯರು ಅನೇಕರು ಸಿಗುತ್ತಾರೆ.

ಇನ್ನು ಸಂಜೆಯ prime time ಕಾರ್ಯಕ್ರಮಗಳು. ಇದಕ್ಕೂ ಸಹ ಒಂದೆರಡು ಧಾರವಾಹಿ ಗಳನ್ನೂ ಹಾಕಿ. ೨೦೧೨, ೧೩, ೧೫, ೧೮ ಅಥವಾ ಮುಂದೆದಾದರೋ ಪ್ರಳಯ ವಾಗುವ ಬಗ್ಗೆ ಒಂದಿಬ್ಬರು ತ್ರಿಕಾಲ ಜ್ನಾನಿಗಳೊಂದಿಗೆ ಸಂದರ್ಶನ ಕಾರ್ಯಕ್ರಮ ನಡೆಸ ಬಹುದು, ನಡುವಿನಲ್ಲಿ ಎದೆ ನಡುಗಿಸುವಂತಹ, ಭೀಕರ ದೃಶ್ಯಗಳು ಹಾಗು sound effects ಇರಬೇಕು. ಇಂದಿನ ಜನ್ಮ ಬಿಟ್ಟು, ಹಿಂದೂ, ಹಾಗು ಮುಂದಿನ ಜನ್ಮದ ಬಗ್ಗೆ ಆಸಕ್ತಿಯಿರುವ ವೀಕ್ಷಕರಿಗೆ ಒಂದು ಕಾರ್ಯಕ್ರಮವಂತೂ compulsory ಇರಬೇಕು.

ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯವಾದ ಮತ್ತೊಂದು ಬಗೆಯ ಕಾರ್ಯಕ್ರಮವೆಂದರೆ, reality show ಗಳು ಇದು ಹಾಡು / ಹಾಸ್ಯ / ನೃತ್ಯಕ್ಕೆ ಸಂಬಂಧ ಪಟ್ಟದ್ದಗಿರಬಹುದು. ಚಿಕ್ಕ ಮಕ್ಕಳ ಕೈಲಿ ಹಾಡು ಹಾಡಿಸಿ, ಅವುಗಳನ್ನು, ಇಂಚಿಂಚಾಗಿ ವಿಶ್ಲೇಷಿಸಿ, ಅವುಗಳಲ್ಲಿರುವ ತಪ್ಪನ್ನು ಕಂಡು ಹಿಡಿದು ಆ ಮಕ್ಕಳ ಹಾಗು ಪೋಷಕರ ಕಣ್ಣಲ್ಲಿ ನೀರು ಬಂದರಂತೂ ನಿಮ್ಮ ಕಾರ್ಯಕ್ರಮ ಯಶಸ್ವಿಯಾದಂತೆಯೇ ಸರಿ. ಚಿಕ್ಕ ವಯಸ್ಸಿನ ಮುಗ್ಧ ಮಕ್ಕಳು third rate ಸಾಹಿತ್ಯದ ಹಾಡಿಗೆ, ಅಶ್ಲೀಲ ಭಾವ ಭಂಗಿ ಗಳನ್ನೂ ಪ್ರದರ್ಶಿಸಿದರಂತು ನಿಮ್ಮ ಡಾನ್ಸ್ Reality Show ಸೂಪರ್ success .

ಈ ಮೇಲ್ಕಂಡ ಫಾರ್ಮುಲ ವನ್ನು ಚಾಚು ತಪ್ಪದೆ, ಅನುಸರಿಸಿದರೆ, ನಿಮ್ಮ ವಾಹಿನಿ popular ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ಒಂದಂತು ನಿಜ ನಿಮ್ಮ ಚಾನೆಲ್, odd man out ಅಂತು ಖಂಡಿತ ಆಗುವುದಿಲ್ಲ, ಯಾಕೆಂದರೆ, ಇಂದಿನ ಎಲ್ಲ ಕನ್ನಡ ಚಾನೆಲ್ ಗಳು ಶ್ರದ್ದೆಯಿಂದ ಅನುಸರಿಸುತ್ತಿರುವ ಮಾರ್ಗ ಇದು.

Advertisements

Comments»

1. vikas - February 25, 2010

ಹಾಗೇ ಇನ್ನೊಂದು ಸುಲಭದ ಫಾರ್ಮುಲಾ ಇದೆ. ಯಾವ ಹಿಂದಿ ಛಾನಲ್ ನಲ್ಲಿ ಯಾವ ಕಾರ್ಯಕ್ರಮ ಹಿಟ್ ಆಗಿದೆ ಅಂತ ನೋಡ್ತಾ ಇರಿ. ಅದನ್ನ ಕಾಪಿ ಮಾಡಿ ಇಲ್ಲೊಂದು ಕಾರ್ಯಕ್ರಮ ಮಾಡಿ. 🙂


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: