jump to navigation

ಹಣದುಬ್ಬರ ಎಂದರೇನು? July 19, 2008

Posted by nsworld in Business and Economy.
3 comments

 

ನಿಮ್ಮ ಜೀವನದಲ್ಲಿ ಹಣದುಬ್ಬರದ ಪ್ರಮಾಣ ಹಾಗು ಪ್ರಭಾವ ಏನು? ಅಂತ ಕೇಳಿದ್ರೆ ನೀವು ಏನು ಹೇಳುತ್ತೀರಾ? ಪೇಪರ್ ತೆಗೆದು ನೋಡಿ ಶೇಕಡ ೧೦ ಅಥವಾ ೧೧ ಅಂತ ಹೇಳುತ್ತೀರಾ? ಅಥವಾ?.

 ಅದಕ್ಕಿಂತ ಮೊದಲು ನಮಗೆಲ್ಲ ಗೊತ್ತಿರೋ inflation ಅಂದ್ರೆ ಏನು ಅಂತ ಸ್ವಲ್ಪ ಬ್ರಶಪ್ ಮಾಡಿಕೊಂಡು ಬಿಡಣ. ಬಹಳ ಸರಳ ವಾಗಿ ಹೇಳಬೇಕಾದ್ರೆ, ಹೋದವರ್ಷ ನಾವು ನಮ್ಮ ಅಗತ್ಯ ವಸ್ತು ಗಳಿಗಾಗಿ ಖರ್ಚು ಮಾಡಿದ್ದು ಎಷ್ಟ್ತು?
ಹಾಗು ಅದೇ ಗುಣಮಟ್ಟದ ಹಾಗು ಪ್ರಮಾಣದ ವಸ್ತು ಗಳಿಗೆ ವರ್ಷ ಎಷ್ಟ್ತು ಖರ್ಚು ಮಾಡುತಿದ್ದೇವೆ ಎಂಬುದು ಎಲ್ಲರಿಗೂ ಸರಳವಾಗಿ ಅರ್ಥವಾಗುವಂತದೇ. ಖರ್ಚಿನಲ್ಲಿನ ಶೇಕಡವಾರು ವ್ಯತ್ಯಾಸ ಹೆಚ್ಚಾಗಿದ್ದಲ್ಲಿ ಅದನ್ನು ಹಣದುಬ್ಬರವೆನ್ನುತ್ತೆವೆ ಹಾಗು ಅದು ಶೇಕಡ ಅಷ್ಟ್ತು ಇಷ್ತ್ತು ಎಂದು ಹೇಳುತ್ತೇವೆ  

 

 

ಸರ್ಕಾರದ ಕಡೆ ಇಂದ ಬರುವಂತಹ ಹಣದುಬ್ಬರದ ಬಗೆಗಿನ ಮಾಹಿತಿಗಳೆಲ್ಲಾ,WPI (wholesale price index) ಆಧಾರವಾಗಿರುತ್ತದೆ. WPI ನಲ್ಲಿ ಅನೇಕ ದಿನ ಬಳಕೆಯ ವಸ್ತುಗಳನೊಳಗೊಂಡ ಪಟ್ಟಿಯಿರುತ್ತದೆ ಹಾಗು ಇವೆಲ್ಲವೂ ಜನಸಾಮಾನ್ಯರು ತಮ್ಮ ಜೀವನದಲ್ಲಿ ಯಾವ ಯಾವ ಪ್ರಮಾಣ ದಲ್ಲಿ ಉಪಯೋಗಿಸುತ್ತಾರೆ ಎಂಬುದನ್ನು ಆಧರಿಸಿ ಹಣದುಬ್ಬರದ ಪ್ರಮಾಣ ನಿರ್ಧರಿಸಲಾಗುತ್ತದೆ.
ತುಂಬಾ ಸರಳವಾದ ವಿಷಯ ವೆಂದರೆ, ಪಟ್ಟಿಯಲ್ಲಿರುವ ಅನೇಕ ವಸ್ತುಗಳನ್ನು ನಾವು ಉಪಯೋಗಿಸುವುದೇ ಇಲ್ಲ, ಹಾಗು ಇವುಗಳನ್ನು ನಾವು ಯಾವ ಯಾವ ಪ್ರಮಾಣದಲ್ಲಿ ಉಪಯೋಗಿಸುತ್ತವೆ ಎಂಬುದು ಸಹ ಬೇರೆ ಬೇರೆ ಯದೇ ಆಗಿರುತ್ತದೆ.
ನಿಜವಾಗಿಯೂ ನಿಮಗೆ ಹಣದುಬ್ಬರದ ಹೊಡೆತ ಯಾವ ಪ್ರಮಾಣದಲ್ಲಿ ಬಿಳುತ್ತಿದೆ ಎಂಬುದನ್ನು ನೀವು ತಿಳಿಯಬೇಕಿದ್ದರೆ. ನಿಮ್ಮ ತಿಂಗಳ ಖರ್ಚಿನ ಪಟ್ಟಿಯನ್ನು ,(ವಸ್ತುಗಳ ಗುಣಮಟ್ಟ ಹಾಗು ಪ್ರಮಾಣ, ಎರಡು ಕಾಲ ಘಟ್ಟದಲ್ಲೂ ಸಹ ಸಮನಾಗಿರತಕ್ಕದ್ದು.) ಹೋದ ವರ್ಷದ ಪಟ್ಟಿಯೊಡನೆ ಹೋಲಿಸಿ ನೋಡಿ, ಅದು ನಿಮಗೆ ಆಘಾತವನ್ನು ತರಬಹುದು ಸಹ. ಕೆಲವರಿಗೆ ಇದು ಶೇಕಡ ೨೫ ರಿಂದ ೩೦ ವರೆಗೂ ಆಗಿರುವ ಸಾಧ್ಯತೆ ಇರುತ್ತದೆ. ಒಂದು ಸಣ್ಣ ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.

Particulars

Last year

Current Year

%Increase

Rent

10

12

20%

Food

15

22

47%

Clothing

20

19

-5%

Fuel

8

14

75%

Education

19

20

5%

Health

6

7

17%

others

22

24

9%

Total

100

118

18%

ಇದರ ಪ್ರಕಾರ ಲೆಕ್ಕಾಚಾರ ಮಾಡಿ ಆನಂತರ ನಿರ್ಧರಿಸಿ , ನಿಮ್ಮ ಆದಾಯ ನಿಮ್ಮ ಖರ್ಚಿಗನುಗುಣವಾಗಿ ಹೆಚ್ಚಾಗುತ್ತಿದೆಯೇ ಅಥವಾ??

(ಕೆಂಡಸಂಪಿಗೆ ಗಾಗಿ ಬರೆದದ್ದು ೨೬ ಜೂನ್ ೨೦೦೮)